’ಜನಶಕ್ತಿ’ ವಾರಪತ್ರಿಕೆಯ ಜಾಲತಾಣ ರೂಪವಾದ ’ಜನಶಕ್ತಿ ಮೀಡಿಯಾ’ ವೆಬ್ ಪತ್ರಿಕೆಯು ಹೊಸ ವಿನ್ಯಾಸದೊಂದಿಗೆ ಲೋಕಾರ್ಪಣೆಯಾಗಲಿದ್ದು, ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 15 ರ ವರೆಗೆ ಪರ್ಯಾಯ ಮಾಧ್ಯಮ ಏಕೆ? ಹೇಗೆ ? ಕುರಿತು ಬರಹ ಮತ್ತು ವೆಬಿನಾರ್‌ಗಳ ಸಂವಾದ ನಡೆಯಲಿದೆ.
ಜನಶಕ್ತಿ ಮೀಡಿಯಾ ವೆಬ್, ಫೇಸ್‌ಬುಕ್, ಪಾಡ್ಕಾಸ್ಟ್ ಮತ್ತು ಯೂ ಟ್ಯೂಬ್ ಚಾನೆಲುಗಳು ಈಗಾಗಲೇ ಸಕ್ರಿಯವಾಗಿದ್ದು, ಪ್ರಸ್ತುತ ಹೊಸ ವಿನ್ಯಾಸದೊಂದಿಗೆ ಪ್ರಕಟಿಸುವ ಸಿದ್ಧತೆ ನಡೆಯುತ್ತಿದೆ. ವೆಬ್ ಪತ್ರಿಕೆಯಲ್ಲಿ ಪ್ರಸಕ್ತ ವಿದ್ಯಮಾನಗಳ ವಸ್ತುನಿಷ್ಠ ವರದಿ, ಟೀಕೆ ಟಿಪ್ಪಣಿ ವಿಮರ್ಶೆಗಳಿರುತ್ತವೆ ಎಂದು ಹೇಳಿಕೆಯಲ್ಲಿ ವಸಂತರಾಜು ಎನ್.ಕೆ ತಿಳಿಸಿದ್ದಾರೆ.
ಇದು ರಾಜ್ಯ, ರಾಷ್ಟ್ರ ಮತ್ತು ಅಂರ‍್ರಾಷ್ಟ್ರೀಯ ಮಟ್ಟದ ಚಿಂತಕರ, ಪರಿಣಿತರ, ಬರಹಗಾರರ, ಪತ್ರಕರ್ತರ ವೈವಿಧ್ಯಮಯ ಅಭಿಪ್ರಾಯಗಳಿಗೆ ವೇದಿಕೆಯಾಗಿರುತ್ತದೆ. ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ವಿಜ್ಙಾನ-ತಂತ್ರಜ್ಙಾನ ಇತ್ಯಾದಿ ವಿಷಯಗಳ ಕುರಿತು ವಿಶ್ಲೇಷಣಾತ್ಮಕ ಲೇಖನಗಳಿಗೂ ಇದೊಂದು ತಾಣವಾಗಲಿದ್ದು, ಕತೆ, ಕವಿತೆ, ಸಿನಿಮಾ, ರಂಗಭೂಮಿ ಮುಂತಾದ ಸಾಂಸ್ಕೃತಿಕ ಅಭಿವ್ಯಕ್ತಿ ಅಥವಾ ಅವುಗಳ ವಿಮರ್ಶೆಗೂ ಇದು ತೆರೆದಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.
“ಕರ್ನಾಟಕ 2020: ಕೊರೊನಾ ಕಾಲದಲ್ಲಿ ಮತ್ತು ನಂತರ” ವಿಷಯದ ಕುರಿತು ಮುಖ್ಯವಾಹಿನಿ ಮಾಧ್ಯಮಗಳು ಕೊರೊನಾ ಕಾಲದಲ್ಲಿ ಹೇಗೆ ವರ್ತಿಸಿದವು? ಈ ವರ್ತನೆಗೆ ಕೊರೊನಾ ಕಾರಣವೇ? ಅಲ್ಲದಿದ್ದರೆ ಇದಕ್ಕೆ ಕಾರಣಗಳೇನು? ಮುಖ್ಯವಾಹಿನಿ ಮಾಧ್ಯಮಗಳನ್ನು ‘ಸುಧಾರಿಸಲು’ ಸಾಧ್ಯವಿಲ್ಲವೇ? ಇದೆ ಎನ್ನುವುದಾದರೆ ಏನು ಮಾಡಬೇಕು? ಇಲ್ಲವಾದರೆ ಪರ್ಯಾಯ ಏನು? ಪರ್ಯಾಯ ಮಾಧ್ಯಮದ ಸ್ವರೂಪ, ಕಾರ್ಯವಿಧಾನ ಹೇಗಿರಬೇಕು? ಅದಕ್ಕೆ ಸಂಪನ್ಮೂಲ ಹೊಂದಿಸುವುದು ಹೇಗೆ? ಇನ್ನಿತ್ಯಾದಿ ಪ್ರಶ್ನೆಗಳನ್ನಿಟ್ಟುಕೊಂಡು ಸರಣಿ ಬರಹ ಮತ್ತು ಚರ್ಚೆ ನಡೆಸಲು ಮೀಡಿಯ ತಂದ ಮುಂದಾಗಿದೆ.
ಇದನ್ನೂ ಓದಿ: ವೃತ್ತಿನಿಷ್ಠೆಯಿಲ್ಲದ ಮಾಧ್ಯಮಗಳು ಯಾವ ಹುನ್ನಾರದಲ್ಲಿ ಭಾಗಿಯಾಗುತ್ತಿವೆ?

ಥೀಮ್ ಕುರಿತ ಅಭಿಪ್ರಾಯಗಳನ್ನು ಬರಹ, ಅಡಿಯೋ ಅಥವಾ ವಿಡಿಯೋ ರೂಪದಲ್ಲಿ ಸೆಪ್ಟೆಂಬರ್ 20 ರೊಳಗಾಗಿ 9845172249, 9449260183/ [email protected] ಮೈಲ್/ವಾಟ್ಸಪ್ ಗೆ ಕಳಿಸಿಕೊಡಬೇಕು ಎಂದು ಜನಶಕ್ತಿ ಮೀಡಿಯ ತಂಡ ವಿನಂತಿಸಿದೆ.


