Homeಮುಖಪುಟಆಲ್ಟ್‌ನ್ಯೂಸ್‌‌ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ ವಿರುದ್ದ FIR

ಆಲ್ಟ್‌ನ್ಯೂಸ್‌‌ ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ ವಿರುದ್ದ FIR

ತನ್ನ ಮೇಲಿನ ದೂರನ್ನು ಸಂಪೂರ್ಣ ನಿಷ್ಪ್ರಯೋಜಕ ಎಂದಿರುವ ಜುಬೇರ್‌, ಅದಕ್ಕೆ ತಾನು ಕಾನೂನುಬದ್ಧವಾಗಿ ಪ್ರತಿಕ್ರಿಯಿಸುತ್ತೇನೆ ಎಂದು ತಿಳಿಸಿದ್ದಾರೆ.

- Advertisement -
- Advertisement -

ಫ್ಯಾಕ್ಟ್‌ಚೆಕಿಂಗ್‌ ವೆಬ್‌ಸೈಟ್ ’ಆಲ್ಟ್‌ನ್ಯೂಸ್’ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್‌ ವಿರುದ್ದ ದೆಹಲಿ ಮತ್ತು ರಾಯ್‌ಪುರದಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಎರಡು ಎಫ್‌ಐಆರ್‌ ದಾಖಲಿಸಲಾಗಿದೆ.

ಅಪ್ರಾಪ್ತ ಬಾಲಕಿಗೆ “ಆನ್‌ಲೈನ್ ಕಿರುಕುಳ ಮತ್ತು ಚಿತ್ರಹಿಂಸೆ” ಆರೋಪದಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ನಿಂದ ದೂರು ಬಂದ ಹಿನ್ನಲೆಯಲ್ಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ.

ಜುಬೈರ್‌ ಜೊತೆಗೆ ಇವರ ಜೊತೆಗೆ ಇತರ ಎರಡು ಟ್ವಿಟ್ಟರ್ ಬಳಕೆದಾರರಾದ, @de_real_mask ಮತ್ತು syedsarwar20 ಎಂಬ ಬಳಕೆದಾರ ಹೆಸರುಗಳನ್ನು ಕೂಡಾ ಎಫ್‌ಐಆರ್‌ಗಳಲ್ಲಿ ಹೆಸರಿಸಲಾಗಿದೆ ಎಂದು NCPCR ಅಧ್ಯಕ್ಷ ಪ್ರಿಯಾಂಕ್ ಕನೂಂಗೊ ಖಚಿತಪಡಿಸಿದ್ದಾರೆ.

ಇದನ್ನೂ ಓದಿ: ಭಾರತಕ್ಕಿಂತ ಅಮೆರಿಕ, ಜಪಾನ್ ಜಿಡಿಪಿ ಕುಸಿತ ಹೆಚ್ಚು?: ಸುಳ್ಳು ಹರಡುತ್ತಿರುವ ಪೋಸ್ಟ್ ಕಾರ್ಡ್

ಟ್ವಿಟರ್ ಇಂಡಿಯಾ ಅವರಿಗೆ ಸಂಬಂಧಿತ ಮಾಹಿತಿಯನ್ನು ಒದಗಿಸಲು 10 ದಿನಗಳ ಹೆಚ್ಚುವರಿ ಸಮಯವನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಆಗಸ್ಟ್ 6 ರಂದು ಟ್ವಿಟರ್ ಬಳಕೆದಾರ ಜಗದೀಶ್ ಸಿಂಗ್ ಎಂಬವರ ನಿಂದನೀಯ ಸಂದೇಶವೊಂದಕ್ಕೆ ಪ್ರತಿಕ್ರಿಯಿಸಿದ್ದ ಜುಬೇರ್, “ಹಲೋ ಜಗದೀಶ್ ಸಿಂಗ್, ನಿಮ್ಮ ಮುದ್ದಾದ ಮೊಮ್ಮಗಳಿಗೆ ನೀವು ಸಾಮಾಜಿಕ ಜಾಲತಾಣದಲ್ಲಿ ಜನರನ್ನು ನಿಂದಿಸುವ ನಿಮ್ಮ ಅರೆಕಾಲಿಕ ಕೆಲಸದ ಬಗ್ಗೆ ತಿಳಿದಿದೆಯೆ? ನಾನು ನಿಮ್ಮ ಪ್ರೊಫೈಲ್ ಚಿತ್ರವನ್ನು ಬದಲಾಯಿಸಲು ಸಲಹೆ ನೀಡುತ್ತೇನೆ” ಎಂದು ಜಗದೀಶ್‌ ಸಿಂಗ್ ಜೊತೆಗೆ ಬಾಲಕಿಯೊಬ್ಬರು ನಿಂತಿರುವ ಫೋಟೋವನ್ನು ಹಾಕಿದ್ದರು. ಜೊತೆಗೆ ಪೋಟೋದಲ್ಲಿರುವ ಬಾಲಕಿಯ ಮುಖವನ್ನು ಜುಬೇರ್ ಬ್ಲರ್‌ ಮಾಡಿದ್ದಾರೆ.

ಜುಬೈರ್‌ ಅವರ ಪೋಸ್ಟ್‌‌ಗೆ ಇತರ ಎರಡು ಟ್ವಿಟ್ಟರ್‌ ಹ್ಯಾಂಡಲ್‌ಗಳು ಕಾಮೆಂಟ್ ಮಾಡಿದ್ದವು. ಇಷ್ಟಕ್ಕೆ ಈ ಮೂವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ಈಶಾನ್ಯ ಭಾರತದ ಫೋರಂ ಫಾರ್‌ ಇಂಡಿಜೀನಿಯಸ್‌ ರೈಟ್ಸ್ ನೀಡಿದ ದೂರಿನ ಮೇರೆಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಆಗಸ್ಟ್ 8 ರಂದು ಈ ವಿಷಯವನ್ನು ಗಮನಿಸಿ ದೆಹಲಿಯ ಉಪ ಪೊಲೀಸ್ ಆಯುಕ್ತ ಮತ್ತು ನೋಡಲ್ ಸೈಬರ್ ಸೆಲ್ ಅಧಿಕಾರಿಗೆ ಪತ್ರ ಬರೆದಿದ್ದು, ಜುಬೈರ್ ವಿರುದ್ಧ “ಅಪ್ರಾಪ್ತ ಬಾಲಕಿಯನ್ನು ಟ್ವಿಟ್ಟರ್‌ನಲ್ಲಿ ಉಲ್ಲೇಖಿಸಿದ್ದಕ್ಕಾಗಿ” ಕ್ರಮ ಕೈಗೊಳ್ಳಬೇಕೆಂದು ಕೋರಿತ್ತು.

ಇದನ್ನೂ ಓದಿ: ರಾಷ್ಟ್ರಪತಿ ಭವನದ ’ಮೊಘಲ್ ಉದ್ಯಾನ’ದ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿತೆ?

ಈ ಬಗ್ಗೆ ಪ್ರತಿಕ್ರಿಯಿಸಿದ ರಾಯ್‌ಪುರ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಯಾದವ್, ಅದರಲ್ಲಿ ಕಿರುಕುಳ ಎಂದು ವರ್ಗೀಕರಿಸಬಹುದಾದ ಕೆಲವು ಕಾಮೆಂಟ್‌ಗಳಿವೆ. ನಾವು ಮೂರು ಟ್ವಿಟ್ಟರ್ ಹ್ಯಾಂಡಲ್‌ಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ ಆದರೆ ತನಿಖೆ ಇನ್ನೂ ನಡೆಯುತ್ತಿವೆ ಎಂದು ಹೇಳಿದ್ದಾರೆ.

ತನ್ನ ಮೇಲಿನ ದೂರನ್ನು ಸಂಪೂರ್ಣ ನಿಷ್ಪ್ರಯೋಜಕ ಎಂದಿರುವ ಜುಬೇರ್‌, ಅದಕ್ಕೆ ತಾನು ಕಾನೂನುಬದ್ಧವಾಗಿ ಪ್ರತಿಕ್ರಿಯಿಸುತ್ತೇನೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಆಲ್ಟ್ ನ್ಯೂಸ್ ಜುಬೇರ್ ಅವರನ್ನು ಬೆಂಬಲಿಸಿ ನಿನ್ನೆ ಹೇಳಿಕೆ ಬಿಡುಗಡೆ ಮಾಡಿದೆ. “ಅವರ ವಿರುದ್ಧದ ಎಫ್‌ಐಆ‌ರ್‌, ಕಾನೂನುಗಳನ್ನು ದುರುಪಯೋಗ ಮಾಡುವ ಮೂಲಕ ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟವನ್ನು ತಡೆಯುವ ಪ್ರಯತ್ನವಾಗಿದೆ. ಜುಬೈರ್ ಸುಳ್ಳು ಸುದ್ದಿಗಳ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರ ಕೆಲಸವು ಸುಳ್ಳು ಸುದ್ದಿ ಹಬ್ಬಿಸುತ್ತಾ ಭಾರತದ ಪ್ರಜಾತಂತ್ರಕ್ಕೆ ಧಕ್ಕೆ ತರುತ್ತಿದ್ದವರಿಗೆ ಸಹಿಸಲು ಆಗದೇ ಈ ರೀತಿಯ ದೂರುಗಳನ್ನು ನೀಡಿದೆ” ಎಂದು ತಿಳಿಸಿದೆ.


ಓದಿ:  ಪಶ್ಚಿಮ ಬಂಗಾಳದಲ್ಲಿ  ಈ ಕಾಳಿ  ದೇವಿಯ  ಮೂರ್ತಿಯನ್ನು  ಮುಸ್ಲಿಮರು  ಸುಟ್ಟಿದ್ದು  ನಿಜವೆ? ಫ್ಯಾಕ್ಟ್‌‌ಚೆಕ್‌: ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮ, ಕಾಳಿ, ದೇವಿಯ ಮೂರ್ತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...