ಹಿಂದಿ ಹೇರಿಕೆ ವಿರುದ್ಧ ದೇಶದ ಹಲವೆಡೆ ವ್ಯಾಪಕ ಪ್ರತಿರೋಧಗಳು ವ್ಯಕ್ತವಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ತಮಿಳುನಾಡಿನ ಟೀ-ಶರ್ಟ್ ಘೋಷಣೆಗಳು ವೈರಲ್ ಆಗುತ್ತಿವೆ. ಹಿಂದಿ ಥೆರಿಯಾದು, ಪೋಡಾ! ” (ನನಗೆ ಹಿಂದಿ ಗೊತ್ತಿಲ್ಲ, ಹೋಗು!). “ನಾನು ತಮೀಝ್ ಪೆಸುಮ್ ಇಂಡಿಯನ್” (ನಾನು ತಮಿಳು ಮಾತನಾಡುವ ಭಾರತೀಯ). “ನಾನು ಭಾರತೀಯ, ನಾನು ಹಿಂದಿ ಮಾತನಾಡುವುದಿಲ್ಲ”ಎಂಬ ಘೋಷಣೆಗಳು ವೈರಲ್ ಆಗಿವೆ.
ಮೆಟ್ರೋ (2016) ತಮಿಳು ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ನಟ ಶಿರೀಶ್ ಸರವಣನ್ ಜೊತೆಗೆ ಜನಪ್ರಿಯ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಅವರು ಚರ್ಚಿಸುತ್ತಿರುವ ಫೋಟೋವೊಂದು ನಿನ್ನೆ ಟ್ವಿಟರ್‌ನಲ್ಲಿ ವೈರಲ್ ಆಗಿದೆ. ಈ ಫೋಟೋವನ್ನು ಸೆ.5 ರಂದು ನಟ ಶಿರೀಶ್ ಅವರು “ಆಳವಾದ ಚರ್ಚೆಯಲ್ಲಿ, ಒಳ್ಳೆಯ ವಿಷಯಗಳು ನಮ್ಮ ಹಾದಿಗೆ ಬರುತ್ತಿವೆ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದರು.
ಇದನ್ನೂ ಓದಿ: ದ್ವಿಭಾಷಾ ನೀತಿ ಸಾಕು: ಹಿಂದಿ ಹೇರಿಕೆ ಬೇಡ – ಟ್ವಿಟ್ಟರ್ ಟ್ರೆಂಡಿಂಗ್
Deep in discussion , good things coming our way … ! ???? @thisisysr pic.twitter.com/VSgaNQQNvw
— ????? ??????? (@actor_shirish) September 5, 2020
ಈ ಫೋಟೋ ಇಷ್ಟೊಂದು ವೈರಲ್ ಆಗಲು ಕಾರಣ ಇಬ್ಬರು ಧರಿಸಿದ್ದ ಟೀ ಶರ್ಟ್‌ಗಳು. ಹೌದು, ಯುವನ್ ಅವರ ಟೀ ಶರ್ಟ್ ಮೇಲೆ ತಮಿಳು ಕವಿ ತಿರುವಳ್ಳುವರ್ ಅವರ ಆಧುನಿಕ ಸ್ಕೆಚ್‌ನೊಂದಿಗೆ, “ನಾನು ತಮೀಝ್ ಪೆಸುಮ್ ಇಂಡಿಯನ್” ಎಂದಿದ್ದರೆ, ಶಿರೀನ್ ಧರಿಸಿದ್ದ ಕೆಂಪು ಟೀಶರ್ಟ್ ಮೇಲೆ “ಹಿಂದಿ ಥೆರಿಯಾದು, ಪೋಡಾ!”ಎಂಬ ಪದಗಳಿದ್ದವು. ಇವು ಈ ಫೋಟೋ ವೈರಲ್ ಆಗಲು ಕಾರಣವಾಯಿತು.
ಈ ಚಿತ್ರ ತಮಿಳುನಾಡಿನಲ್ಲಿ ಹೊಸ ಅಲೆಯನ್ನೇ ಹುಟ್ಟುಹಾಕಿತು. ಟ್ವಿಟ್ಟರ್‌ನಲ್ಲಿ ಹಿಂದಿ ಹೇರಿಕೆ ವಿರೋಧಿಸಿ ಹಲವಾರು ಜನರು ಇದೇ ರೀತಿಯ ಟೀ ಶರ್ಟ್ ಧರಿಸಿದ ಫೋಟೋಗಳನ್ನು ಸಾಮಾಜಿಕ ಸಾಲತಾಣಗಳಲ್ಲಿ ಹಂಚಿಕೊಂಡರು.
Back to தொழில் …. something interesting on the work front ? #KeepCalm #SpreadLove @KikiVijay #WithLoveShanthnuKiki pic.twitter.com/vg9Vx6Hy4S
— Shanthnu ? ஷாந்தனு Buddy (@imKBRshanthnu) September 5, 2020
சாமானியர்களுக்கு மருத்துவம்பார்க்க சாமானியர்களையே மருத்துவராக்கியது கழக அரசு. ஆனால் நோயாளிக்கு முட்டை வாங்குவதுமுதல் மருத்துவருக்கான PPE Kitவரை கொள்ளையடிக்கும் அடிமைகள் துரோகத்தை இவ்வார ஞாயிறு கருத்தரங்கில் தோலுரித்த @Dr_Ezhilan @DrSenthil_MDRD @Manosoundar2 @GowriG_DMKக்கு நன்றி pic.twitter.com/kKuIu9uxdf
— Udhay (@Udhaystalin) September 6, 2020
ತೂತುಕುಡಿ ಸಂಸದೆ ಕನಿಮೋಳಿ ಹೇಳುವಂತೆ ಡಿಎಂಕೆ ಮುಖಂಡರು ಈ ಕೆಲಸವನ್ನು ಸಣ್ಣ ರೀತಿಯಲ್ಲಿ ಪ್ರಾರಂಭಿಸಿದ್ದು, ಟೀ ಶರ್ಟ್‌ಗಳನ್ನು ಮುದ್ರಿಸಿದ್ದಾರೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಕನಿಮೋಳಿ ಭಾನುವಾರ ಟಿ-ಶರ್ಟ್ ಧರಿಸಿದ ಯುವಕರ ಗುಂಪಿನೊಂದಿಗೆ ತನ್ನ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
A spark is enough to ignite a sentiment.When we printed Tshirts, in the era of blatant Hindi imposition,we didn't know that the youngsters would respond passionately like our forefathers in fighting discriminatory practices. Thank you.#ஹிந்தி_தெரியாது_போடா #StopHindiImposition pic.twitter.com/44HHjXuS3d
— Kanimozhi (கனிமொழி) (@KanimozhiDMK) September 6, 2020
ಟೀ-ಶರ್ಟ್ ತಯಾರಿಕೆಗೆ ಹೆಸರುವಾಸಿಯಾದ ತಿರುಪ್ಪೂರಿನ ಗಾರ್ಮೆಂಟ್ ತಯಾರಕರು ಇದೇ ರೀತಿಯ ಟೀಶರ್ಟ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರೆ.
To place orders, contact ??
Mr. Karthikeyan
Ph. 9940931432.
M/s.Cool Cotton, Tiruppur, Tamil Nadu#இந்தி_தெரியாது_போடா@kombutwitz1 @myheartDMK1949 pic.twitter.com/edOc2Ur6BD— ɱᴜᴋɪʟ? (@ComradeMukil) September 6, 2020
ಬರೀ ಟೀ ಶರ್ಟ್‌ಗಳೇ ಅಲ್ಲದೆ ಮೊಬೈಲ್ ಪೌಚ್‌ಗಳು, ಮೀಮ್ಸ್‌ಗಳಲ್ಲೂ ಹಿಂದಿ ಥೆರಿಯಾದು, ಪೋಡಾ ಟ್ರೆಂಡಿಂಗ್‌ನಲ್ಲಿದೆ.
#hinditeriyadupoda #hinditeriyadupoda #case #all #mobile #available pic.twitter.com/JcIQkPqONR
— M.VINOTH ? (@vinothbmk) September 7, 2020
தமிழ் மக்கள் அனைவரும் Alone
Friends நாங்கள் எல்லா மொழிகளையும் வரவேற்போம் ஆனால் ஹிந்தி தவிர#இந்தி_தெரியாது_போடா#இந்திதெரியாதுபோடா#StopHindiImposition #ஹிந்தி_வேண்டாம்_போடா #ஹிந்தி_தெரியாது_போடா #ஹிந்தியாவது_மயிராவது #ஹிந்திதெரியாதுபோடா#hinditeriyadupoda https://t.co/vNqklbEBHs— M.Mohamed Arif (@MMohamedArif4) September 7, 2020
ತಮ್ಮ ಮೇಲೆ ಹಿಂದಿ ಹೇರಿಕೆ ಮಾಡಲು ಬಂದರೇ ಯಾವ ಯಾವ ರೀತಿಯ ಪ್ರತಿರೋಧ ಎದುರಿಸಬೇಕಾಗುತ್ತದೆ ಎಂಬುದನ್ನು ತಮಿಳುನಾಡಿನ ಜನತೆ ತೋರಿಸುತ್ತಲೇ ಇದ್ದಾರೆ. ಈಗ ಇದಕ್ಕೆ ಟೀ-ಶರ್ಟ್ ಅಭಿಯಾನ ಸೇರಿಕೊಂಡಿದೆ. ತಮಿಳುನಾಡಿನಲ್ಲಿ ಜನರ ಜೊತೆಗೆ ಚಿತ್ರರಂಗ, ರಾಜಕೀಯ ನಾಯಕರು ಸಹ ಹಿಂದಿ ಹೇರಿಕೆ ವಿರುದ್ಧ ದನಿಯೆತ್ತಿದ್ದಾರೆ.


