Homeಮುಖಪುಟಗುಂಪು ಹಲ್ಲೆಯಲ್ಲಿ ಯುಪಿ ಮಾಜಿ ಶಾಸಕನ ಸಾವು: ಪೊಲೀಸರ ಮೇಲೆ ಆರೋಪ

ಗುಂಪು ಹಲ್ಲೆಯಲ್ಲಿ ಯುಪಿ ಮಾಜಿ ಶಾಸಕನ ಸಾವು: ಪೊಲೀಸರ ಮೇಲೆ ಆರೋಪ

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, "ಪೊಲೀಸರ ಸಮ್ಮುಖದಲ್ಲಿ ಹಗಲು ಹೊತ್ತಿನಲ್ಲಿ ನಡೆದ ಹೃದಯ ವಿದ್ರಾವಕ ಕೊಲೆ ರಾಜ್ಯವನ್ನು ಬೆಚ್ಚಿಬೀಳಿಸಿದೆ" ಎಂದು ಹೇಳಿದ್ದಾರೆ.

- Advertisement -
- Advertisement -

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಭೂ ವಿವಾದದ ಕಾರಣಕ್ಕೆ ಉತ್ತರ ಪ್ರದೇಶದ ಮಾಜಿ ಶಾಸಕರಾದ ನಿರ್ವೇಂದ್ರ ಕುಮಾರ್ ಮಿಶ್ರಾ ಅವರ ಮೇಲೆ ಗುಂಪು ಹಲ್ಲೆ ನಡೆಸಿದ್ದು ಅವರು ಭಾನುವಾರ ನಿಧನರಾಗಿದ್ದಾರೆ. ಇದಕ್ಕೆ ಪೊಲೀಸರೂ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಭಾನುವಾರ ಬೆಳಿಗ್ಗೆ ಹಳೆಯ ಭೂ ವಿವಾದದ ಬಗ್ಗೆ ನಡೆದ ಜಗಳದಲ್ಲಿ ಹಲ್ಲೆ ಮಾಡಲಾಗಿದ್ದು ಶಾಸಕರು ಮರಣ ಹೊಂದಿದರೆ, ಅವರ ಮಗ ತೀವ್ರವಾಗಿ ಗಾಯಗೊಂಡಿದ್ದಾರೆ.

ನಿರ್ವೇಂದ್ರ ಕುಮಾರ್ ಮಿಶ್ರಾ 1993 ರಲ್ಲಿ ಸಮಾಜವಾದಿ ಪಕ್ಷದಿಂದ ಗೆಲ್ಲುವ ಮೊದಲು 1989 ಮತ್ತು 1991 ರಲ್ಲಿ ಎರಡು ಬಾರಿ ಸ್ವತಂತ್ರರಾಗಿ ಜಿಲ್ಲೆಯ ನಿಘಾಸನ್ ಸ್ಥಾನದಿಂದ ಶಾಸಕರಾಗಿದ್ದರು.

ಪಲ್ಲಿಯಾ ಗ್ರಾಮದ ನಿವಾಸಿಗಳಾದ ಸಮೀರ್ ಗುಪ್ತಾ ಮತ್ತು ರಾಧೇಶ್ಯಾಂ ಗುಪ್ತಾ ಅವರೊಂದಿಗೆ ಮಿಶ್ರಾ ವಿವಾದಿತ ಭೂಮಿಯ ಬಗ್ಗೆ ವಾದ ನಡೆಸಿದ್ದರು. ವಿವಾದಿತ ಭೂಮಿ ಸಮೀರ್ ಹೆಸರಿನಲ್ಲಿತ್ತು. ಹಾಗಾಗಿ ಮಿಶ್ರಾ ಈ ಸ್ವಾಧೀನವನ್ನು ವಿರೋಧಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಸೆಕ್ಷನ್ 107/116 ರ ಅಡಿಯಲ್ಲಿ ಮಿಶ್ರಾ ಮತ್ತು ಅವರ ಮಗನ ವಿರುದ್ಧ ಈ ಹಿಂದೆ ಪ್ರಕರಣ ದಾಖಲಾಗಿತ್ತು.

‘ಮೇಲು ನೋಟಕ್ಕೆ, ನಿರ್ವೇಂದ್ರ ಕುಮಾರ್ ಮಿಶ್ರಾ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಊಹಿಸಬಹುದು. ಏಕೆಂದರೆ ಅವರ ದೇಹದಲ್ಲಿ ಯಾವುದೇ ಗಾಯದ ಲಕ್ಷಣಗಳು ಕಂಡುಬಂದಿಲ್ಲ. ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರವಾದ ಕಾರಣ ತಿಳಿದುಬರುತ್ತದೆ” ಎಂದು ಪೊಲೀಸರು ಹೇಳಿರುವುದಾಗಿ ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಪತ್ರಕರ್ತನ ಗುಂಡಿಕ್ಕಿ ಕೊಲೆ: ಪೊಲೀಸರೇ ಆರೋಪಿಗಳೆಂದ ಕುಟುಂಬ!

“ಎರಡೂ ಕಡೆಯವರ ನಡುವೆ ವಿವಾದ ಆರಂಭವಾಗಿತ್ತು. ನಂತರ ಇದು ಜಗಳಕ್ಕೆ ತಿರುಗಿತು. ಆ ಸಂದರ್ಭದಲ್ಲಿ ಮಿಶ್ರಾ ನೆಲಕ್ಕೆ ಕುಸಿದು ಬಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಸತ್ತರು ಎಂದು ಘೋಷಿಸಲಾಯಿತು. ಅವರ ಮಗ ಸಂಜೀವ್ ಸ್ಥಿತಿ ಕೂಡಾ ಗಂಭೀರವಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

“ಅವರು ನನಗೆ ಹೊಡೆದರು. ಅವರು ನಮ್ಮ ತಂದೆಯನ್ನು ಹೊಡೆದು ಸಾಯಿಸಿದರು. ನನ್ನ ತಂದೆಯನ್ನು ಕೊಲ್ಲಲಾಯಿತು” ಎಂದು ಮಿಶ್ರಾ ಅವರ ಮಗ ಸ್ಥಳೀಯ ವರದಿಗಾರರೊಂದಿಗೆ ಹೇಳಿದರು.

ಈ ಹಲ್ಲೆಯಲ್ಲಿ ಪೊಲೀಸರ ಪಾತ್ರವನ್ನೂ ಪ್ರಶ್ನಿಸಿದ ಅವರು, ತಂದೆಯ ಮೇಲೆ ಹಲ್ಲೆ ನಡೆಸಿದವರನ್ನು ಪೊಲೀಸರು ರಕ್ಷಿಸುತ್ತಿದ್ದಾರೆ ಸಂಜೀವ್ ಆರೋಪಿಸಿದ್ದಾರೆ. ಮಿಶ್ರಾ ಅವರ ಮರಣದ ನಂತರ, ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟುಗೂಡಿ, ಅವರ ಮೃತ ದೇಹವನ್ನು ತ್ರಿಕೋಲಿಯಾ ಬಸ್ ನಿಲ್ದಾಣದ ಬಳಿ ರಸ್ತೆಯಲ್ಲಿ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

ಕೊಲೆಗಾರರೊಂದಿಗೆ ಯುಪಿ ಪೊಲೀಸರು ಶಾಮೀಲಾಗಿದ್ದಾರೆ ಎಂದು ಮಿಶ್ರಾ ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ನನ್ನ ತಂದೆ ನೆಲಕ್ಕೆ ಕುಸಿದ ನಂತರ, ಸ್ಥಳೀಯರು ಗುಂಪು ಹಲ್ಲೆ ಮಾಡಿದ ಕೆಲವು ಆರೋಪಿಗಳನ್ನು ಹಿಮ್ಮೆಟ್ಟಿಸಿ ಹಿಡಿದರು. ಆದರೆ ಪೊಲೀಸರು ಬಂದು ಅವರಿಗೆ ಮುಕ್ತವಾಗಿ ಹೋಗಲು ಅವಕಾಶ ಮಾಡಿಕೊಟ್ಟರು ಎಂದು ಮಿಶ್ರಾ ಅವರ ಮಗ ಸಂಜೀವ್ ಆರೋಪಿಸಿದ್ದಾರೆ.

ತ್ರಿಕೋಲಿಯ ಪಧುವಾ ಬಸ್ ನಿಲ್ದಾಣದ ಬಳಿ 40ಕ್ಕೂ ಹೆಚ್ಚು ಗೂಂಡಾಗಳು ಗುಂಪು ಹಲ್ಲೆ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಭೂಮಿಯನ್ನು ವಶಪಡಿಸಿಕೊಳ್ಳಲು, ಪುರುಷರ ಗುಂಪು ಶಸ್ತ್ರಾಸ್ತ್ರಗಳೊಂದಿಗೆ ಬಂದಿದ್ದರು. ನಿರ್ವೇಂದ್ರ ಕುಮಾರ್ ಮಿಶ್ರಾ ಮತ್ತು ಅವರ ಮಗ ಸಂಜೀವ್ ಮಿಶ್ರಾ ಇದನ್ನು ವಿರೋಧಿಸಿದ ನಂತರ ಅವರ ಹಲ್ಲೆ ಮಾಡಲಾಗಿದೆ ಎಂದು ಮಿಶ್ರಾ ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ. ಭೂ ವಿವಾದದ ವಿಷಯವೂ ನ್ಯಾಯಾಲಯದಲ್ಲಿ ವಿಚಾರಣೆಯಾಗುತ್ತಿದೆ ಎಂದು ವರದಿಯಾಗಿದೆ.

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, “ಪೊಲೀಸರ ಸಮ್ಮುಖದಲ್ಲಿ ಹಗಲು ಹೊತ್ತಿನಲ್ಲಿ ನಡೆದ ಹೃದಯ ವಿದ್ರಾವಕ ಕೊಲೆ ರಾಜ್ಯವನ್ನು ಬೆಚ್ಚಿಬೀಳಿಸಿದೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮತ್ತೊಂದು ಘಟನೆ; 3 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೇಥಿ ಕಾಂಗ್ರೆಸ್ ಕಚೇರಿ ಮೇಲೆ ದಾಳಿ, ಕಾರ್ಯಕರ್ತನಿಗೆ ಹಲ್ಲೆ: ಬಿಜೆಪಿ ಮುಖಂಡರು ಸೇರಿ 10...

0
ಉತ್ತರ ಪ್ರದೇಶದ ಅಮೇಥಿಯಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿ ಮೇಲೆ ಭಾನುವಾರ (ಮೇ 5) ಮಧ್ಯರಾತ್ರಿ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿದೆ. ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದ ಹಲವು ವಾಹನಗಳನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು,...