Homeಮುಖಪುಟ’ನೀವು ಭಾರತದಲ್ಲಿ ವಾಸಿಸಲು ಯೋಗ್ಯರಲ್ಲ’ ಎಂದು ತಬ್ಲೀಘಿ ಸದಸ್ಯರಿಗೆ ಥಳಿಸಿದ ಗುಂಪು

’ನೀವು ಭಾರತದಲ್ಲಿ ವಾಸಿಸಲು ಯೋಗ್ಯರಲ್ಲ’ ಎಂದು ತಬ್ಲೀಘಿ ಸದಸ್ಯರಿಗೆ ಥಳಿಸಿದ ಗುಂಪು

ಪ್ರಜ್ಞೆ ತಪ್ಪುವ ತನಕ ಹಲ್ಲೆ ನಡೆಸಿದ ದುಷ್ಕರ್ಮಿಗಳು, ಕೊನೆಗೆ ‘ಸತ್ತಿದ್ದಾರೆ’ ಎಂದು ತಿಳಿದು ಅಲ್ಲಿಂದ ಹೊರಟಿದ್ದಾರೆ.

- Advertisement -
- Advertisement -

“ನೀವು ಭಾರತದಲ್ಲಿ ವಾಸಿಸಲು ಯೋಗ್ಯರಲ್ಲ” ಎಂದು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಹೋಲ್ ಗ್ರಾಮದಲ್ಲಿ ತಬ್ಲೀಘಿ ಜಮಾಅತ್‌ ಸದಸ್ಯರ ಮೇಲೆ ಜನಸಮೂಹವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಹಲ್ಲೆಯು ಸೆಪ್ಟೆಂಬರ್ 16 ರ ರಾತ್ರಿ ನಡೆದಿದ್ದು, ಸಂತ್ರಸ್ಥರನ್ನು ಸುಹೇಲ್ ತಂಬೋಲಿ, ಅಸ್ಲಂ ಅಥರ್, ಸಯ್ಯದ್ ಲಯಕ್, ನಿಜಾಮುದ್ದೀನ್ ಖಾಜಿ ಎಂದು ಗುರುತಿಸಲಾಗಿದೆ.

ತಬ್ಲೀಘಿ ಜಮಾಅತ್ ಸದಸ್ಯರು ತಮ್ಮ ಸ್ನೇಹಿತನ ಅಂತ್ಯಕ್ರಿಯೆಗಾಗಿ ಧರೂರಿನಿಂದ ಅಂಬಜೋಗೈ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ.

ಇದನ್ನೂ ಓದಿ: ಕೊರೊನಾ ವಿಚಾರದಲ್ಲಿ ತಬ್ಲೀಘಿಗಳನ್ನು ’ಬಲಿಪಶು’ ಮಾಡಲಾಗಿದೆ: ಬಾಂಬೆ ಹೈಕೋರ್ಟ್

ಪ್ರಯಾಣಿಸುತ್ತಿರುವ ಕಾರಿನಲ್ಲಿ ಸಮಸ್ಯೆ ಕಾಣಿಸಿಕೊಂಡ ಕಾರಣ ಕಾರನ್ನು ನಿಲ್ಲಿಸಿ, ಕಾರಿನಲ್ಲಿದ್ದ ಸುಹೇಲ್ ಹಾಗೂ ಸೈಯದ್ ಎಂಬವರು ನೀರು ತರಲು ಹೋಗಿದ್ದರು. ಈ ಹೊತ್ತು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಕಾರಿನಲ್ಲಿ ಉಳಿದಿದ್ದ ಅಸ್ಲಂ ಮತ್ತು ನಿಜಾಮುದ್ದೀನ್‌ ಅವರನ್ನು ನಿಂದಿಸಿದ್ದಾರೆ. ಆದರೆ ಇದನ್ನು ಶಾಂತವಾಗಿ ನಿಭಾಯಿಸಲು ಪ್ರಯತ್ನಿಸಿದರೂ ಅದು ಪ್ರಯೋಜವಾಗಲಿಲ್ಲ. ಇದರ ನಂತರ ದುಷ್ಕರ್ಮಿಗಳು ಮತ್ತೇ ಆರು ಮಂದಿಯನ್ನು ಕರೆ ಮಾಡಿ ಸ್ಥಳಕ್ಕೆ ಕರೆಸಿದ್ದು, ಅವರೆಲ್ಲದೂ ಕೈಗಳಲ್ಲಿ ಕೋಲುಗಳನ್ನು ತಯಾರು ಮಾಡಿಕೊಂಡು ಬಂದಿದ್ದರು ಎಂದು ಸಂತ್ರಸ್ಥರು ತಿಳಿಸಿದ್ದಾರೆ.

“ಅವರು ಆ ರಾತ್ರಿ ನಮ್ಮನ್ನು ಕೊಲ್ಲುತ್ತಿದ್ದರು” ಎಂದು 34 ವರ್ಷದ ಸುಹೇಲ್ ತಂಬೋಲಿ ಹೇಳಿದ್ದು, “ಅವರು ನಮ್ಮ ಗಡ್ಡವನ್ನು ಎಳೆದು, ಟೋಪಿಗಳನ್ನು ಎಸೆದರು” ಎಂದು ಹೇಳಿದ್ದಾರೆ.

ಘಟನೆಯು ನಲವತ್ತು ನಿಮಿಷಗಳ ಕಾಲ ನಡೆದಿದ್ದು, ಇದಾಗಿ ಒಂದು ಗಂಟೆಯ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ಹೇಳಿದ್ಧಾರೆ. “ಗುಂಪಿನಲ್ಲಿ ಒಬ್ಬರು ತಲೆಗೆ ಎರಡು ಬಾರಿ ಇಟ್ಟಿಗೆಯಿಂದ ಹೊಡೆದಿದ್ದು, ಕೋಲಿನಿಂದ ಕೂಡಾ ಅದು ಮುರಿಯುವವರೆಗೂ ಹೊಡೆಯುತ್ತಿದ್ದರು” ಎಂದು ಸುಹೇಲ್ ಹೇಳಿದ್ದಾರೆ.

ಪ್ರಜ್ಞೆ ತಪ್ಪುವ ತನಕ ಹಲ್ಲೆ ನಡೆಸಿದ ದುಷ್ಕರ್ಮಿಗಳು, ಕೊನೆಗೆ ‘ಸತ್ತಿದ್ದಾರೆ’ ಎಂದು ತಿಳಿದು ಅಲ್ಲಿಂದ ಹೊರಟಿದ್ದಾರೆ ಎಂದು ದೂರದಲ್ಲಿ ಅಸಹಾಯಕರಾಗಿ ನಿಂತು ತಮ್ಮವರ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ನೋಡುತ್ತಿದ್ದ ಸೈಯದ್ ಮತ್ತು ಅಸ್ಲಂ ಹೇಳಿದ್ದಾರೆ. ಇದರ ನಂತರ ಅವರು ತಮ್ಮ ಗ್ರಾಮಸ್ಥರಿಗೆ ಕರೆ ಮಾಡಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಸೆಪ್ಟೆಂಬರ್ 17 ರಂದು ಪ್ರಕರಣ ಸಂಬಂಧ FIR ದಾಖಲಾಗಿದ್ದು, ಪೊಲೀಸರು ನಾರಾಯಣ ಧನರಾಜ್ ಘುಗೆ ಹಾಗೂ ರಾಹುಲ್ ತುಕಾರಾಂ ಘುಗೆ ಎಂಬವರ ಸಹಿತ ಆರು ಮಂದಿಯನ್ನು ಬಂಧಿಸಿದ್ದಾರೆಂದು ಸಬ್‌ರಂಗ್‌ ವರದಿ ಮಾಡಿದೆ.

ಇದನ್ನೂ ಓದಿ: ಪ್ಲಾಸ್ಮಾ: ಜೀವದ್ರವದ ಜರೂರತ್ತುಗಳು:`ತಬ್ಲೀಘಿ ಜಿಹಾದಿಗಳು, ತಬ್ಲೀಘಿ ಸೇನಾನಿಗಳು’ ಆಗಿದ್ದೇಗೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...