ಎರಡು ವರ್ಷಗಳ ಹಿಂದೆ ಬಾಲಿವುಡ್, ಟಾಲಿವುಡ್, ಸ್ಯಾಂಡಲ್‌ವುಡ್ ಚಿತ್ರರಂಗಗಳಲ್ಲಿ ಕಾಣಿಸಿಕೊಂಡಿದ್ದ #METOO ಪ್ರಕರಣ ಈಗ ಮತ್ತೆ ಬಾಲಿವುಡ್ ಅಂಗಳದಲ್ಲಿ ಕಾಣಿಸಿಕೊಂಡಿದೆ. ನಟಿ ಪಾಯಲ್ ಘೋಷ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ತಮ್ಮ ಜೊತೆ ಅಸಭ್ಯವಾಗಿ ನಡೆದುಕೊಂಡರು ಎಂದು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅನುರಾಗ್ ಕಶ್ಯಪ್ ನಟಿ ಪಾಯಲ್ ಘೋಷ್ ತಮ್ಮ ಮೇಲೆ ಮಾಡಿರುವ ಲೈಂಗಿಕ ಕಿರುಕುಳ ಆರೋಪವು ಸುಳ್ಳು, ದುರುದ್ದೇಶಪೂರಿತ ಮತ್ತು ಅಪ್ರಾಮಾಣಿಕ ಎಂದಿದ್ದಾರೆ. ಈ ಕುರಿತು ತಮ್ಮ ವಕೀಲೆ ಪ್ರಿಯಾಂಕಾ ಖಿಮಾನಿ ಮೂಲಕ ತನ್ನ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ವಕೀಲೆ ಪ್ರಿಯಾಂಕಾ ಖಿಮಾನಿ ತಮ್ಮ ಪತ್ರಿಕಾ ಹೇಳಿಕೆಯಲ್ಲಿ “ನನ್ನ ಕಕ್ಷಿದಾರ ಅನುರಾಗ್ ಕಶ್ಯಪ್ ವಿರುದ್ಧ ಇತ್ತಿಚೆಗೆ ಮಾಡಲಾಗಿರುವ ಸುಳ್ಳು ಲೈಂಗಿಕ ಕಿರುಕುಳ ಆರೋಪದಿಂದ ತೀವ್ರವಾಗಿ ನೋವು ಅನುಭವಿಸಿದ್ದಾರೆ. ಈ ಆರೋಪಗಳು ಸಂಪೂರ್ಣವಾಗಿ ಸುಳ್ಳು, ದುರುದ್ದೇಶಪೂರಿತ ಮತ್ತು ಅಪ್ರಾಮಾಣಿಕ” ಎಂದಿದ್ದಾರೆ.
ಇದನ್ನೂ ಓದಿ: ’ಸಾಫ್ಟ್ ಪೋರ್ನ್ ಸ್ಟಾರ್’ ಹೇಳಿಕೆ; ಕಂಗನಾರನ್ನು ಖಂಡಿಸಿ ಊರ್ಮಿಳಾ ಬೆಂಬಲಕ್ಕೆ ನಿಂತ ಬಾಲಿವುಡ್
And here is the statement from my lawyer @PriyankaKhimani .. on my behalf .. thank You pic.twitter.com/0eXwNnK5ZI
— Anurag Kashyap (@anuragkashyap72) September 20, 2020
ಆರೋಪದ ಕುರಿತು ಭಾನುವಾರ ಸರಣಿ ಟ್ವೀಟ್‌ಗಳ ಮೂಲಕ ಅನುರಾಗ್ ಕಶ್ಯಪ್ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ನನ್ನನ್ನು ಮೌನವಾಗಿಸುವ ಕೆಲಸ ನಡೆಯುತ್ತಿದೆ. ನನ್ನ ವಿರುದ್ಧದ ಆರೋಪಗಳು ಆಧಾರರಹಿತ ಎಂದಿದ್ದರು.
क्या बात है , इतना समय ले लिया मुझे चुप करवाने की कोशिश में । चलो कोई नहीं ।मुझे चुप कराते कराते इतना झूठ बोल गए की औरत होते हुए दूसरी औरतों को भी संग घसीट लिया। थोड़ी तो मर्यादा रखिए मैडम। बस यही कहूँगा की जो भी आरोप हैं आपके सब बेबुनियाद हैं ।१/४
— Anurag Kashyap (@anuragkashyap72) September 19, 2020
मैं इस तरह का व्यवहार ना तो कभी करता हूँ ना तो कभी किसी क़ीमत पे बर्दाश्त करता हूँ । बाक़ी जो भी होता है देखते हैं । आपके विडीओ में ही दिख जाता है कितना सच है कितना नहीं , बाक़ी आपको बस दुआ और प्यार ।आपकी अंग्रेज़ी का जवाब हिंदी में देने के लिए माफ़ी ।
— Anurag Kashyap (@anuragkashyap72) September 19, 2020
ನಟಿ ಪಾಯಲ್ ಘೋಷ್ ಇತ್ತಿಚೆಗೆ ಎಬಿಎನ್ ತೆಲುಗು ಚಾನೆಲ್‌ಗೆ ನೀಡಿದ್ದ ಸಂದರ್ಶನದಲ್ಲಿ ಅನುರಾಗ್ ಕಶ್ಯಪ್ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಜೊತೆಗೆ ಈ ವಿಷಯದಲ್ಲಿ ಹಸ್ತಕ್ಷೇಪ ಕೋರಿ ಅವರು ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು.
@anuragkashyap72 has forced himself on me and extremely badly. @PMOIndia @narendramodi ji, kindly take action and let the country see the demon behind this creative guy. I am aware that it can harm me and my security is at risk. Pls help! https://t.co/1q6BYsZpyx
— Payal Ghosh (@iampayalghosh) September 19, 2020
ಇದನ್ನೂ ಓದಿ: ಕಂಗನಾ v/s ಶಿವಸೇನೆ: ಸೋನಿಯಾ ಗಾಂಧಿ ಹೆಸರನ್ನೇಕೆ ಎಳೆದು ತರಲಾಯಿತು?
ನಟಿ ಪಾಯಲ್ ಘೋಷ್‌ಗೆ ಬೆಂಬಲ ನೀಡಿ ನಟಿ ಕಂಗನಾ ರಾಣಾವತ್ ಸೇರಿದಂತೆ ಹಲವರು ಟ್ವೀಟ್ ಮಾಡಿದ್ದರು. ಕಶ್ಯಪ್ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು. ಕಂಗನಾ ರಾಣಾವತ್ ಸರಣಿ ಟ್ವೀಟ್‌ಗಳನ್ನು ಮಾಡಿ ಕಶ್ಯಪ್ ವಿರುದ್ಧ ಕಿಡಿಕಾರಿದ್ದಾರೆ.
I far as I know Anurag self admittedly has never been monogamous even when he was married to various people, what Anurag did to Payal is a common practice in Bullywood, treating struggling outsider girls like sex workers comes naturally to them #AnuragKashyap #PayalGhosh https://t.co/d07hF40FIe
— Kangana Ranaut (@KanganaTeam) September 20, 2020
Bullywood is full of sexual predators who have fake and dummy marriages they expect a new hot young girl to make them happy everyday, they do the same to young vulnerable men also,I have settled my scores my way I don’t need #MeToo but most girls do #PayalGhosh #AnuragKashyap
— Kangana Ranaut (@KanganaTeam) September 20, 2020
ಬಾಲಿವುಡ್‌ನಲ್ಲಿ ದೊಡ್ಡ ದೊಡ್ಡ ನಾಯಕರು ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಜೊತೆಗೆ ಹೊರಗಿನಿಂದ ಬಂದವರನ್ನು ಸೆಕ್ಸ್ ವರ್ಕರ್‌ಗಳಂತೆ ನೋಡುತ್ತಾರೆ ಎಂದು ಕಂಗನಾ ಆರೋಪಿಸಿದ್ದರು.
ಕಳೆದ ಕೆಲವು ವರ್ಷಗಳಲ್ಲಿ #MeToo ಚಳವಳಿಯಲ್ಲಿ ಚಲನಚಿತ್ರೋದ್ಯಮದ ಹಲವಾರು ಖ್ಯಾತನಾಮರ ಹೆಸರು ಗಳು ಬಂದಿದ್ದವು. ನಾನಾ ಪಟೇಕರ್, ಅಲೋಕ್ ನಾಥ್, ಸುಭಾಷ್ ಘೈ, ಸಾಜಿದ್ ಖಾನ್, ಅನು ಮಲಿಕ್ ಮತ್ತು ಅರ್ಜುನ್ ಸರ್ಜಾ ಪ್ರಮುಖರಾಗಿದ್ದರು.


