2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಪೊಲೀಸರು ಕೇರಳದ ಓರ್ವ ವ್ಯಕ್ತಿಯನ್ನು ಸೋಮವಾರ ರಾತ್ರಿ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು 2008ರಲ್ಲಿ ಪರಾರಿಯಾಗಿದ್ದ ಶೋಯಬ್ ಎಂದು ಗುರುತಿಸಲಾಗಿದೆ.
ಬೆಂಗಳೂರು ನಗರ ಪೊಲೀಸರ ಭಯೋತ್ಪಾದನಾ ನಿಗ್ರಹ ಕೇಂದ್ರದ (ಎಟಿಸಿ) ಇಬ್ಬರು ಅಧಿಕಾರಿಗಳು ಆರೋಪಿಯನ್ನು ಬಂಧಿಸಲು ಖಚಿತ ಮಾಹಿತಿ ಮೇರೆಗೆ ಕೇರಳಕ್ಕೆ ತೆರಳಿದ್ದರು. ಬೆಂಗಳೂರು ನಗರ ಎಟಿಸಿ ಕೇಂದ್ರ ಸಂಸ್ಥೆಗಳ ನೆರವಿನೊಂದಿಗೆ ಓರ್ವ ಆರೋಪಿ ಶೋಯಬ್‌ನನ್ನು ವಶಕ್ಕೆ ಪಡೆಯಲಾಗಿದೆ. ಆತನ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದ್ದು, ಅವರನ್ನು ಕೇರಳದಲ್ಲಿ ಬಂಧಿಸಿ ನಗರಕ್ಕೆ ಕರೆತರಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ: ಬೈರುತ್ ಸ್ಪೋಟ: 700 ಟನ್ ಸ್ಫೋಟಕ ರಾಸಾಯನಿಕದ ಬಗ್ಗೆ ಚಿಂತೆಯಲ್ಲಿರುವ ಚೆನ್ನೈ
@BlrCityPolice & Central Agencies successfully trace & arrest accused of 2008 Blore Serial Blasts case.. was absconding for 12 yrs since 2008.. series of blasts had occurred in July 2008 at various locations in Blore.. further investigation on.. @CPBlr
— Sandeep Patil IPS (@ips_patil) September 22, 2020
2008ರಲ್ಲಿ ಮಡಿವಾಳ ಸೇರಿದಂತೆ ಬೆಂಗಳೂರಿನ ಹಲವು ಕಡೆಗಳಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶೋಯಬ್ ಭಾಗಿಯಾಗಿದ್ದ ಎನ್ನಲಾಗಿದೆ. 2008 ರಲ್ಲಿ ತಪ್ಪಿಸಿಕೊಂಡಿಡು ಪರಾರಿಯಾಗಿದ್ದ ಈತನನ್ನು ರಾಷ್ಟ್ರೀಯ ತನಿಖಾದಳಗಳ ಜೊತೆಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ.
2008ರ ಜುಲೈ 25ರಂದು ಮಡಿವಾಳ, ಮೈಸೂರು ರಸ್ತೆ ಸೇರಿದಂತೆ ನಗರದ ಒಂಭತ್ತು ಕಡೆ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಓರ್ವ ಮೃತಪಟ್ಟು, 20 ಮಂದಿ ಗಾಯಗೊಂಡಿದ್ದರು.


