ಸುಪ್ರೀಂ ಕೋರ್ಟ್ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳ ಕುರಿತಾಗಿ ವಕೀಲ ಪ್ರಶಾಂತ್ ಭೂಷಣ್ ಮಾಡಿರುವ ಟೀಕೆಗಳ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಶಿಕ್ಷೆ ನೀಡಿದ ಹಿನ್ನೆಲೆ ದೆಹಲಿ ಬಾರ್ ಕೌನ್ಸಿಲ್ ವಕೀಲ ಪ್ರಶಾಂತ್ ಭೂಷಣ್‌ಗೆ ಅಕ್ಟೋಬರ್ 23 ರಂದು ಕೌನ್ಸಿಲ್ ಮುಂದೆ ಹಾಜರಾಗುವಂತೆ ಕೋರಿ ನೋಟಿಸ್ ನೀಡಿದೆ. ನೋಟಿಸ್ ಸ್ವೀಕರಿಸಿದ 15 ದಿನಗಳಲ್ಲಿ ಕೌನ್ಸಿಲ್‌ಗೆ ಪ್ರತಿಕ್ರಿಯಿಸಬೇಕಾಗುತ್ತದೆ. ಅಕ್ಟೋಬರ್ 23 ರಂದು ವೈಯಕ್ತಿಕವಾಗಿ ಅಥವಾ ವಿಡಿಯೋ ಸಂವಾದದ ಮೂಲಕ ಹಾಜರಾಗಲು ಬಿಸಿಡಿ ಸೂಚಿಸಿದೆ.
ಇದನ್ನೂ ಓದಿ: ನಾನು ಟ್ವೀಟ್ ಮಾಡಿದ್ದು, ನಾಗರಿಕನ ಕರ್ತವ್ಯವಾಗಿತ್ತು. ಆದರೆ ಕೋರ್ಟನ್ನು ಗೌರವಿಸಿ 1 ರೂ ದಂಡ ಕಟ್ಟುತ್ತೇನೆ: ಪ್ರಶಾಂತ್ ಭೂಷಣ್
ದೆಹಲಿ ವಕೀಲರ ಪರಿಷತ್ತು ನೀಡಿರುವ ನೋಟಿಸ್ ಅನ್ನು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದಾರೆ.
Now the Bar Council's notice on the basis of the SC order on my 'Contempt'! It cites Sec 24A of the Advocates Act which says that an Advocate will not be enrolled if convicted for an offence of moral turpitude. For the Bar Council, Contempt by critical comment is moral turpitude! pic.twitter.com/mjBcUX4jcx
— Prashant Bhushan (@pbhushan1) September 23, 2020
“ನೀವು ವೈಯಕ್ತಿಕವಾಗಿ ಅಥವಾ ನಿಮ್ಮ ಪರವಾಗಿ ಅಧಿಕೃತ ವಕೀಲರ ಮೂಲಕ ಅಕ್ಟೋಬರ್ 23 ರಂದು ಸಂಜೆ 4.00 ಗಂಟೆಗೆ ಪರಿಷತ್ತಿನ ಕಚೇರಿಯಲ್ಲಿ ಹಾಜರಾಗಬೇಕು… ನಿಮಗೆ ಸೂಕ್ತವಾದಂತೆ ನೀವು ದೈಹಿಕವಾಗಿ ಅಥವಾ ವರ್ಚುವಲ್ ಕಾನ್ಫರೆನ್ಸಿಂಗ್ ಮೂಲಕ ಕಾಣಿಸಿಕೊಳ್ಳಬಹುದು ”ಎಂದು ಬಿಸಿಡಿ ನೋಟಿಸ್‌ನಲ್ಲಿ ತಿಳಿಸಿದೆ.
ಈ ನೋಟಿಸ್ ಸ್ವೀಕರಿಸಿದ 15 ದಿನಗಳಲ್ಲಿ ನಿಮ್ಮ ಪ್ರತಿಕ್ರಿಯೆಯನ್ನು ಕೌನ್ಸಿಲ್‌ಗೆ ಕಳುಹಿಸುವ ಅವಶ್ಯಕತೆಯಿದೆ, ಸೆಕ್ಷನ್ 24 ಎ (ದಾಖಲಾತಿಗೆ ಅನರ್ಹತೆ) ಮತ್ತು ವಕೀಲರ ಕಾಯ್ದೆಯ ಸೆಕ್ಷನ್ 35 ರ ಅಡಿಯಲ್ಲಿ ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು? ಎಂದು ಪ್ರಶ್ನಿಸಿದೆ.
ವಕೀಲರ ಕಾಯ್ದೆ ಸೆಕ್ಷನ್ 24Aರ ಅನ್ವಯ ನೋಂದಣಿ ರದ್ದುಪಡಿಸಲಾಗುತ್ತದೆ. ಸೆಕ್ಷನ್ 35 ದುರ್ನಡತೆ ತೋರುವ ವಕೀಲರಿಗೆ ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿದೆ. ಸೆಕ್ಷನ್ 35ರ ಅನ್ವಯ ರಾಜ್ಯ ವಕೀಲರ ಪರಿಷತ್ತಿನ ಶಿಸ್ತುಪಾಲನಾ ಸಮಿತಿಯು ವೃತ್ತಿಪರ ವಿಚಾರದಲ್ಲಿ ವಕೀಲರು ದೋಷಿ ಎಂದು ಸಾಬೀತಾದರೆ ವಕೀಲರ ಪರಿಷತ್ತಿನಿಂದ ಅಂಥವರನ್ನು ಅಮಾನತುಗೊಳಿಸಲಾಗುತ್ತದೆ.


