ಬಸವಕಲ್ಯಾಣ ಕ್ಷೇತ್ರದ ಶಾಸಕ ಬಿ.ನಾರಾಯಣರಾವ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೊನಾ ಸೋಂಕು ದೃಡಪಟ್ಟಿದ್ದರಿಂದ ಬಿ.ನಾರಾಯಣರಾವ್ ಅವರನ್ನು ಬೆಂಗಳೂರಿನ ಖಾಸಗೀ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿತ್ತು. ಈಗ ಅವರ ಪರಿಸ್ಥಿತಿ ಗಂಭಿರವಾಗಿದ್ದು, ಬಹು ಅಂಗಾಂಗ ವೈಫಲ್ಯತೆಯಿಂದ ಬಳಲುತ್ತಿದ್ದಾರೆ ಎಂದು ಶಾಸಕರ ಆಪ್ತರು ನಾನುಗೌರಿ.ಕಾಂ ಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಲಿಂಗಾಯಿತರು ನನಗೆ ಮತ ಕೊಡದಿದ್ದರೂ ಪರವಾಗಿಲ್ಲ, ಬಸವ ತತ್ವದ ಮೇಲೆ ನಡೆದರೆ ಸಾಕು: ಶಾಸಕ ಬಿ.ನಾರಾಯಣರಾವ್ ಸಂದರ್ಶನ…
ನೇರ, ನಿಷ್ಠುರ ಮತ್ತು ನಿಷ್ಟಾವಂತ ರಾಜಕಾರಣಿಯಾಗಿದ್ದ ಬಿ.ನಾರಾಯಣರಾವ್, ಹಲವು ಬಾರಿ ಸೋತು, 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದರು.
ಇದನ್ನೂ ಓದಿ: ಸದನದಲ್ಲಿ ಮಿಂಚಿದ ಬಸವ ಪ್ರಣೀತ ಶಾಸಕ ನಾರಾಯಣರಾವ್


