ಸಮಾಜ ಸುಧಾರಣಾವಾದಿ ನಾಯಕ ಇ.ವಿ.ರಾಮಸ್ವಾಮಿ ಪೆರಿಯಾರ್ ಅವರ ಪ್ರತಿಮೆಗೆ ದುಷ್ಕರ್ಮಿಗಳು ಕೇಸರಿ ಬಣ್ಣ ಬಳಿದಿದ್ದು, ತಮಿಳುನಾಡಿನ ರಾಜಕೀಯ ಮುಖಂಡರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ತಮಿಳುನಾಡಿನ ಇನಾಮ್‌ಕೊಲತ್ತೂರ್‌ನ ಸಮತುವಾಪುರಂ ಕಾಲೋನಿಯಲ್ಲಿರುವ ಪೆರಿಯಾರ್ ಪ್ರತಿಮೆಗೆ ಕೇಸರಿ ಬಣ್ಣ ಬಳಿಯಲಾಗಿದೆ. ಪ್ರತಿಮೆಯ ಬಳಿ ಚಪ್ಪಲಿ ಕೂಡ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಮೆಯನ್ನು ವಿರೂಪಗೊಳಿಸಿರುವ ಇಂಥ ವಿಧ್ವಂಸಕ ಕೃತ್ಯದ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Explainer: ಕೃಷಿ ಮಸೂದೆಗಳಿಂದ ರೈತರಿಗೆ ಲಾಭವಾಗಲಿದೆಯೇ?
ಘಟನೆಯಿಂದ ತೀವ್ರ ಆಕ್ರೋಶಗೊಂಡ ಸ್ಥಳೀಯರು ದಿಢೀರನೆ ಪ್ರತಿಭಟನೆ ನಡೆಸಿದರು. ಇದರಿಂದ ದಿಂಡಿಗಲ್ ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ಥವಾಯಿತು. ವಿಧ್ವಂಸಕ ಕೃತ್ಯವನ್ನು ವಿರೋಧಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಪ್ರಕರಣದ ಬಗ್ಗೆ ಡಿಎಂಕೆ ಪಕ್ಷದ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಸೇರಿದಂತೆ, ವಿವಿಧ ಪಕ್ಷಗಳ ರಾಜಕೀಯ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ஒரே தவறை மீண்டும் மீண்டும் செய்வதால் மேலும் மேலும் புறக்கணிக்கப்படுவோம் என்பதை இவர்கள் எப்போது புரிந்து கொள்வார்கள்?
திருச்சியில் பெரியார் சிலை அவமதிக்கப்பட்டதைக் கண்டிக்கிறேன்!
பெரியார் தமிழ் இனத்தின் தலைவர். அவரை அவமதிப்பதாகக் கருதி தங்களுக்கே அவமரியாதை செய்து கொள்கிறார்கள்! pic.twitter.com/56lYebnbvE
— M.K.Stalin (@mkstalin) September 27, 2020
‘ಪೆರಿಯಾರ್ ದ್ರಾವಿಡರ್ ಕಳಗಂ ಚಳವಳಿಯ ನಾಯಕರಷ್ಟೇ ಅಲ್ಲ. ಅವರು ತಮಿಳರಿಗೇ ನಾಯಕರು. ಇಂಥ ವ್ಯಕ್ತಿಯ ಪ್ರತಿಮೆಯನ್ನು ವಿರೂಪಗೊಳಿಸಿರುವವರನ್ನು ಗಡಿಪಾರು ಮಾಡಬೇಕು‘ ಎಂದು ಸ್ಟಾಲಿನ್ ಹೇಳಿದ್ದಾರೆ. ಪೆರಿಯಾರ್ ಅವರನ್ನು ಅವಮಾನಿಸುತ್ತಿದ್ದೇವೆಂದು ಭಾವಿಸಿ ಇಂತಹ ಕೆಲಸಗಳನ್ನು ಮಾಡುವವರು ತಮ್ಮನ್ನು ತಾವೇ ಅವಮಾನಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ದ್ರಾವಿಡ ನಾಡಿನ ಹಿಂದಿ ಹೇರಿಕೆ ವಿರೋಧಿ ಚಳುವಳಿಯ ಇತಿಹಾಸ ಮತ್ತು ಪ್ರಸ್ತುತ ರಾಜಕಾರಣವೆಂಬ ನಾಟಕದ ಸುತ್ತ!
ತಮಿಳುನಾಡು ಉಪಮುಖ್ಯಮಂತ್ರಿ ಓ.ಪನ್ನಿಸೆಲ್ವಂ ಪ್ರತಿಮೆ ವಿರೂಪಗೊಳಸಿದವರ ವಿರುದ್ಧ ತಮಿಳುನಾಡು ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕರಣ ಕುರಿತು ಅನೇಕ ರಾಜಕೀಯ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
சமூகநீதிக்காக பாடுபட்ட பகுத்தறிவு பகலவர் தந்தை பெரியாரின் சிலையை திருச்சியில் மர்மநபர்கள் அவமரியாதை செய்திருக்கும் செயலுக்கு எனது கடும் கண்டனங்களை தெரிவித்துக் கொள்கிறேன். இக்குற்றச் செயலில் ஈடுபட்ட சமுக விரோதிகள் மீது மாண்புமிகு அம்மாவின் அரசு சட்டப்படி கடும்நடவடிக்கை எடுக்கும். pic.twitter.com/fuFsqnvS4p
— O Panneerselvam (@OfficeOfOPS) September 27, 2020
ಪಿಎಂಕೆ ನಾಯಕ ಎಸ್ ರಾಮದಾಸ್, ಎಂಡಿಎಂಕೆ ಸಂಸ್ಥಾಪಕ ಮತ್ತು ರಾಜ್ಯಸಭಾ ಸಂಸದ ವೈಕೊ, ಎಎಂಎಂಕೆ ನಾಯಕ ಮತ್ತು ಸ್ವತಂತ್ರ ಶಾಸಕ ಟಿ ಟಿ ವಿ ದಿನಕರನ್ ಮತ್ತು ವಿಸಿಕೆ ನಾಯಕ ಥೋಲ್ ತಿರುಮಾವಾಲವನ್, ಸಂಸದರು ಸಹ ಪೆರಿಯಾರ್ ಅವರ ಪ್ರತಿಮೆಗನ್ನು ಗುರಿಯಾಗಿಸಿಕೊಂಡ ಇತ್ತೀಚಿಗೆ ನಡೆದ ಘಟನೆಗಳನ್ನು ಟೀಕಿಸಿದರು ಮತ್ತು ಪ್ರತಿಮೆ ವಿರೂಪಗೊಳಿಸಿದ ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಹಿಂದ ಕೂಡ ಇದೇ ರೀತಿ ಕೊಯಮತ್ತೂರ್ ಸುಂದರಪುರಂ ಬಳಿಯ ಪೆರಿಯಾರ್ ಪ್ರತಿಮೆಯೊಂದಕ್ಕೆ ಕೇಸರಿ ಬಣ್ಣ ಬಳಿಯಲಾಗಿತ್ತು. ಇದು ರಾಜ್ಯದಲ್ಲಿ ಎರಡನೇ ಪ್ರಕರಣವಾಗಿದೆ.


