ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಲು ಹೊರಟಿರುವ ಕೃಷಿ ಮಸೂದೆಗಳ ವಿರುದ್ಧ ಇಂದು ಆರಂಭವಾಗಿರುವ ಕರ್ನಾಟಕ ಬಂದ್ ಯಶಸ್ವಿಯಾಗಿದ್ದು, ರಾಜ್ಯಾದ್ಯಂತ ರೈತರ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ನೂರಾರು ಸಂಘಟನೆಗಳು ಬಂದ್ ಬೆಂಬಲಿಸಿ ರಸ್ತೆಗಿಳಿದು ಹೋರಾಟ ನಡೆಸಿವೆ. ಮುಂಜಾನೆ ನಾಲ್ಕು ಗಂಟೆಗೆ ಕನ್ನಡಪರ ಸಂಘಟನೆಗಳು ಬೆಂಗಳೂರಿನ ಮೆಜೆಸ್ಟಿಕ್, ರೈಲು ನಿಲ್ದಾಣ, ವಿಮಾನ ನಿಲ್ದಾಣಗಳಲ್ಲಿ ಪ್ರತಿಭಟನೆ ನಡೆಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಟೌನ್ ಹಾಲ್ ಎದುರು ಜಮಾಯಿಸಿದ ಸಾವಿರಾರು ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ರೈತವಿರೋಧಿ ಮಸೂದೆಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಫ್ರೀಡಂ ಪಾರ್ಕ್‌ವರೆಗೂ ಬೃಹತ್ ಮೆರವಣಿಗೆ ನಡೆಸಿದ್ದಾರೆ.
ಮೆರವಣಿಗೆಯುದ್ದಕ್ಕೂ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿ ರೈತರ ಹೋರಾಟಕ್ಕೆ ಬೆಂಬಲ ನೀಡುವಂತೆ ಪ್ರತಿಭಟನಾಕಾರರು ಮನವಿ ಮಾಡಿದರು. ಇದಕ್ಕೆ ಬಹುತೇಕ ಅಂಗಡಿ ಮಾಲೀಕರು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಾಜ್ಯದ್ಯಂತ ನಡೆದ ಹೋರಾಟದ ಫೋಟೊಗಳು ಇಲ್ಲಿವೆ.
ರಾಯಚೂರಿನಲ್ಲಿ ರೈತರ ಗುಡುಗು

ಶಿವಮೊಗ್ಗದಲ್ಲಿ ರೈತರ ರಸ್ತೆತಡೆ

ಮಂಡ್ಯದಲ್ಲಿ ರೈತರ ಮೆರವಣಿಗೆ

ಮೈಸೂರಿನಲ್ಲಿ ಹೋರಾಟನಿರತ ರೈತರನ್ನು ಬಂಧಿಸಿದ ಪೊಲೀಸರು

ಸಿಂಧನೂರಿನಲ್ಲಿ ರೈತರ ಧರಣಿ ಮತ್ತು ಮೆರವಣಿಗೆ

ಮದ್ದೂರಿನಲ್ಲಿ ಬಂದ್ ಯಶಸ್ವಿ

ರಾಮನಗರದಲ್ಲಿ ರೈತರ ಪ್ರತಿಭಟನೆ

ಕನಕಪುರದಲ್ಲಿ ಹೋರಾಟ

ಅಥಣಿಯಲ್ಲಿ ರೈತರ ಘರ್ಜನೆ

ಕೊಪ್ಪಳದಲ್ಲಿ ಹೋರಾಟದ ಕೂಗು

ಆನೇಕಲ್ ಬಂದ್ ಯಶಸ್ವಿ

ಧಾರವಾಡದಲ್ಲಿ ರೈತ ಕಾರ್ಮಿಕರ ಮೆರವಣಿಗೆ ನೋಡಿ.
ರೈತ-_ಕಾರ್ಮಿಕ ವಿರೋಧಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಧಾರವಾಡದಲ್ಲಿ ಬ್ರಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಧಾರವಾಡ ಜಿಲ್ಲಾಧಿಕಾರಿ ಕಚೇರಿಯತ್ತ
Posted by K H Patil on Monday, September 28, 2020
ಕಲಬುರಗಿಯಲ್ಲಿ ಕಾರ್ಮಿಕರ ಹೋರಾಟ

ಹೊಸಪೇಟೆಯಲ್ಲಿ ಬಂದ್

ಹೊಸಕೋಟೆಯಲ್ಲಿ ಹೋರಾಟ

ಅರಕಲಗೂಡಿನಲ್ಲಿ ರಸ್ತೆ ತಡೆ

ಶ್ರೀರಂಗಪಟ್ಟಣದಲ್ಲಿ ಬೆಂಗಳೂರು-ಮೈಸೂರು ಮುಖ್ಯಹೆದ್ದಾರಿ ತಡೆ

ಸಿರಗುಪ್ಪದಲ್ಲಿ ಸಿಡಿದೆದ್ದ ರೈತ ಕಾರ್ಮಿಕರು

ದಾವಣಗೆರೆಯಲ್ಲಿ ಯುವಕರ ಪ್ರತಿಭಟನೆ

ಗುಂಡ್ಲುಪೇಟೆಯಲ್ಲಿ ರೈತರ ಗುಡುಗು

ವಿಜಯಪುರದಲ್ಲಿ ರೈತರ ಹೋರಾಟಕ್ಕೆ ದಲಿತ ಸಂಘರ್ಷ ಸಮಿತಿ ಬೆಂಬಲ

ಇದನ್ನೂ ಓದಿ: ಕೃಷಿ ಮಸೂದೆಗಳ ವಿರುದ್ಧ ಆಕ್ರೋಶ: ರಾಜ್ಯದ್ಯಂತ ಕರ್ನಾಟಕ ಬಂದ್ ಆರಂಭ – ವಿಡಿಯೋ ನೋಡಿ


