Homeಮುಖಪುಟಕೃಷಿ ಮಸೂದೆಗಳಿಂದ ಎಲ್ಲವೂ ಅಸ್ತವ್ಯಸ್ತ: ಪಶ್ಚಿಮ ಬಂಗಾಳ ಸರ್ಕಾರದ ಆತಂಕ

ಕೃಷಿ ಮಸೂದೆಗಳಿಂದ ಎಲ್ಲವೂ ಅಸ್ತವ್ಯಸ್ತ: ಪಶ್ಚಿಮ ಬಂಗಾಳ ಸರ್ಕಾರದ ಆತಂಕ

ಕೃಷಿ ಮಸೂದೆಗಳು ದೀರ್ಘಾವಧಿಯಲ್ಲಿ ಸಾರ್ವಜನಿಕ ಬೆಂಬಲ ವ್ಯವಸ್ಥೆಯ ಮೇಲೆ (ಪಿಡಿಎಸ್) ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕೊನೆಗೊಳಿಸಲು ಪರೋಕ್ಷವಾಗಿ ಕಾರಣವಾಗುತ್ತವೆ ಎಂದು ಪ.ಬಂಗಾಳ ಸರ್ಕಾರ ತಿಳಿಸಿದೆ.

- Advertisement -
- Advertisement -

ಸಂಸತ್ತು ಅಂಗೀಕರಿಸಿರುವ ವಿವಾದಿತ ಕೃಷಿ ಮಸೂದೆಗಳನ್ನು ವಾಪಾಸ್ ಪಡೆಯಲು ಆಗ್ರಹಿಸಿ ವಿರುದ್ಧ ದೇಶದ ರೈತರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ವಿರೋಧ ಪಕ್ಷಗಳು, ರೈತ ಸಂಘಟನೆಗಳು, ಯುವ, ದಲಿತ ಕಾರ್ಮಿಕ ಸಂಘಟನೆಗಳು ಪ್ರತಿಭಟನೆಗೆ ಸಾಥ್ ನೀಡಿವೆ.

ಇವುಗಳ ನಡುವೆ ಪಶ್ಚಿಮ ಬಂಗಾಳ ಸರ್ಕಾರ ಈ ಕಾಯಿದೆಗಳ ದೀರ್ಘಾವಧಿಯ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಈ ಮೂರು ಕೃಷಿ ಮಸೂದೆಗಳು ದೀರ್ಘಾವಧಿಯಲ್ಲಿ ಸಾರ್ವಜನಿಕ ಬೆಂಬಲ ವ್ಯವಸ್ಥೆಯ ಮೇಲೆ (ಪಿಡಿಎಸ್) ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕೊನೆಗೊಳಿಸಲು ಪರೋಕ್ಷವಾಗಿ ಕಾರಣವಾಗುತ್ತವೆ ಎಂದು ಪ.ಬಂಗಾಳ ಸರ್ಕಾರ ತಿಳಿಸಿದೆ.

ಮಸೂದೆಗಳಿ ಇಡೀ ಕೃಷಿ ಮಾರುಕಟ್ಟೆಯನ್ನು ಕಾರ್ಪೊರೇಟ್ ಸಂಸ್ಥೆಗಳಿಗೆ ಹಸ್ತಾಂತರಿಸುವುದರಿಂದ ಎಂಎಸ್‌ಪಿ ನೀಡಿ ರೈತರ ಬೆಳೆ ಕೊಳ್ಳುವುದರಿಂದ ಸರ್ಕಾರಗಳು ಹಿಂದೆ ಸರಿಯುತ್ತವೆ ಎಂದು ರಾಜ್ಯದ ತೃಣಮೂಲ ಕಾಂಗ್ರೆಸ್ ಸರ್ಕಾರ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಕೃಷಿ ಮಸೂದೆಗೆ ವಿರೋಧ: ದೆಹಲಿಯ ಇಂಡಿಯಾ ಗೇಟ್ ಬಳಿ ಟ್ರಾಕ್ಟರ್ ಸುಟ್ಟು ರೈತರ ದಿಟ್ಟ ಪ್ರತಿಭಟನೆ

ಈಗ ಮುಕ್ತ-ಸಂಗ್ರಹದಡಿಯಲ್ಲಿ, ಪಿಡಿಎಸ್‌ಗಾಗಿ ಭಾರತದ ಆಹಾರ ನಿಗಮ (ಎಫ್‌ಸಿಐ) ಸೇರಿದಂತೆ ಸರ್ಕಾರಿ ಸಂಸ್ಥೆಗಳು ಎಂಎಸ್‌ಪಿ ದರನೀಡಿ ನಿಗದಿತ ಅವಧಿಯೊಳಗೆ ರೈತರಿಂದ ಆಹಾರ ಧಾನ್ಯಗಳನ್ನು ಖರೀದಿಸಿ ಸಂಗ್ರಹಿಸುತ್ತವೆ. ಕೆಲವು ರಾಜ್ಯಗಳು ಗೋಧಿ ಮತ್ತು ಭತ್ತದ ಮೇಲೆ ಎಂಎಸ್‌ಪಿಗಿಂತ ಹೆಚ್ಚಿನ ರಾಜ್ಯ ಬೋನಸ್ ಸಹ ಘೋಷಿಸುತ್ತವೆ.

 

“ಈ ಕಾಯಿದೆಗಳಿಂದ ಆಹಾರ ದಾಸ್ತಾನು ಮಾಡಲು ಯಾವುದೇ ಸರ್ಕಾರಿ ನಿಯಮಗಳು ಮತ್ತು ನಿರ್ಬಂಧವಿಲ್ಲದ ಕಾರಣ, ಕಾರ್ಪೋರೆಟ್ ಮಾರುಕಟ್ಟೆ ಸಂಗ್ರಹವು ಸರ್ಕಾರದ ಖರೀದಿ, ಸಂಗ್ರಹಣೆ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳ್ಳುತ್ತವೆ” ಎಂದು ಪಶ್ಚಿಮ ಬಂಗಾಳದ ಕೃಷಿ ಸಚಿವ ಆಸಿಶ್ ಬ್ಯಾನರ್ಜಿ ದಿ ಫೆಡರಲ್ ತಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಅಂಗೀಕಾರ: ಬಹುಮತವಿಲ್ಲದೆ ನಿಯಮಗಳ ಉಲ್ಲಂಘನೆ..?

ಈ ಮಸೂದೆಗಳು ರೈತರಿಗೆ ಮರಣದಂಡನೆ ಮಾತ್ರವಲ್ಲದೆ ಆಹಾರ ಭದ್ರತೆ ಮತ್ತು ರಾಜ್ಯ ಸರ್ಕಾರಗಳು ಸಬ್ಸಿಡಿ ನೀಡುವ ಆಹಾರ ಧಾನ್ಯಗಳ ವಿತರಣೆಯ ಮೇಲೂ ಪರಿಣಾಮ ಬೀರುತ್ತವೆ. ಈ ಮಸೂದೆಗಳಲ್ಲಿ ಬೆಲೆ ನಿಗದಿ ಮಾಡಲು ಯಾವುದೇ ನಿಗದಿತ ಕಾರ್ಯವಿಧಾನಗಳಿಲ್ಲ. ಇದರಿಂದಾಗಿ ರೈತರು ಮತ್ತು ಗ್ರಾಹಕರನ್ನು ಶೋಷಿಸಲು ಕಾರ್ಪೊರೇಟ್‌‌ಗಳಿಗೆ ಎಲ್ಲ ಅವಕಾಶ ದೊರೆಯುತ್ತದೆ ಎಂದು ಆಸಿಶ್ ಬ್ಯಾನರ್ಜಿ ಹೇಳಿದ್ದಾರೆ.

’ಇತ್ತೀಚೆಗೆ ಆಲೂಗಡ್ಡೆ ಮತ್ತು ಈರುಳ್ಳಿಯ ಬೆಲೆಗಳು ಗಗನಕ್ಕೇರಿದಾಗ, ಬೆಲೆಗಳನ್ನು ನಿಯಂತ್ರಿಸಲು ಸರ್ಕಾರ ಹೇಗೆ ಮಧ್ಯಪ್ರವೇಶಿಸಿತು ಎಂಬುದನ್ನು ನೀವು ನೋಡಿದ್ದೀರಿ. ಸರ್ಕಾರ ಈಗಲೂ ಎಚ್ಚೆತ್ತುಕೊಳ್ಳದಿದ್ದರೇ ಭವಿಷ್ಯದಲ್ಲಿ, ಸರ್ಕಾರವು ತನ್ನ ಆಹಾರ ಧಾನ್ಯಗಳ ಅಗತ್ಯವನ್ನು ಪೂರೈಸಲು ಕಾರ್ಪೋರೇಟ್‌‌ಗಳನ್ನು ಅವಲಂಬಿಸಬೇಕಾಗುತ್ತದೆ’ ಎಂದು ಬ್ಯಾನರ್ಜಿ ಆತಂಕ ವ್ಯಕ್ತಪಡಿಸುತ್ತಾರೆ.


ಇದನ್ನೂ ಓದಿ: Explainer: ಕೃಷಿ ಮಸೂದೆಗಳಿಂದ ರೈತರಿಗೆ ಲಾಭವಾಗಲಿದೆಯೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...