Homeಮುಖಪುಟಯುಪಿಎಸ್ಸಿ ಜಿಹಾದ್ ಪ್ರಕರಣ: ವಿಚಾರಣಾಪೀಠದ ನ್ಯಾಯಮೂರ್ತಿಯ ಬದಲಾವಣೆ ಮಾಡಿದ್ದು ಏಕೆ?

ಯುಪಿಎಸ್ಸಿ ಜಿಹಾದ್ ಪ್ರಕರಣ: ವಿಚಾರಣಾಪೀಠದ ನ್ಯಾಯಮೂರ್ತಿಯ ಬದಲಾವಣೆ ಮಾಡಿದ್ದು ಏಕೆ?

ನ್ಯಾಯಮೂರ್ತಿ ಜೋಸೆಫ್ ಈ ಪ್ರಕರಣವನ್ನು ಕೊನೆಯದಾಗಿ ಸೆಪ್ಟಂಬರ್ 24 ರಂದು ಆಲಿಸಿದ್ದರು. ಅಂದು ಅವರು ಸುದರ್ಶನ್ ಟಿವಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

- Advertisement -
- Advertisement -

ಸುದರ್ಶನ್ ಟಿವಿಯ “ಯುಪಿಎಸ್ಸಿ ಜಿಹಾದ್” ಎಂಬ ವಿವಾದಿತ ಕಾರ್ಯಕ್ರಮ ಪ್ರಸಾರದ ವಿರುದ್ದ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್ ಪೀಠದ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರನ್ನು ಬದಲಾಯಿಸಿ ಅವರ ಜಾಗಕ್ಕೆ ಬೇರೊಬ್ಬ ನ್ಯಾಯಮೂರ್ತಿಯನ್ನು ನೇಮಿಸಲಾಗಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ನೇತೃತ್ವದಲ್ಲಿ ಇಂದೂ ಮಲ್ಹೋತ್ರಾ ಜೊತೆಗೆ ಕೆ.ಎಂ.ಜೋಸೆಫ್ ಅವರು ಕೂಡಾ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದರು.

ಇದನ್ನೂ ಓದಿ: ’ಯುಪಿಎಸ್ಸಿ ಜಿಹಾದ್’- ಕಾರ್ಯಕ್ರಮವನ್ನು “ರೋಗಗ್ರಸ್ಥ” ಎಂದು ಕರೆದ ನ್ಯಾಯಾಲಯ.

ಭಾರತೀಯ ಅಧಿಕಾರಶಾಹಿಯಲ್ಲಿ ಮುಸ್ಲಿಮರ ನುಸುಳುಕೋರತನ ಎಂದು ಆರೋಪಿಸಿ, ಮುಸ್ಲಿಮರು ಪ್ರತಿಷ್ಠಿತ ನಾಗರಿಕ ಸೇವೆಗಳ ಪರೀಕ್ಷೆಯನ್ನು ಭಾರಿ ಸಂಖ್ಯೆಯಲ್ಲಿ ಹೇಗೆ ಉತ್ತೀರ್ಣರಾಗುತ್ತಿದ್ದರೆ ಎಂದು ಪ್ರಶ್ನಿಸಿ ಸುದರ್ಶನ್ ಟಿವಿ ಯುಪಿಎಸ್ಸಿ ಜಿಹಾದ್ ಎಂಬ ಕಾರ್ಯಕ್ರಮವನ್ನು ಮಾಡುತ್ತಿತ್ತು. ಇದರ ವಿರುದ್ದ ಹೈಕೋರ್ಟ್‌ಗಳು ಕಿಡಿಕಾರಿದ್ದವು. ನಂತರ ಪ್ರಕರಣ ಸುಪ್ರೀಂಕೋರ್ಟ್‌‌ ಮೆಟ್ಟೆಲೇರಿತ್ತು.

ಸುದರ್ಶನ ಟಿವಿಯ ಈ ಕಾರ್ಯಕ್ರಮ ಕುರಿತ ಪ್ರಕರಣವನ್ನು ಈಗ ನ್ಯಾಯಮೂರ್ತಿಗಳಾದ ಚಂದ್ರಚೂಡ್, ಮಲ್ಹೋತ್ರಾ ಹಾಗೂ ಇಂದಿರಾ ಬ್ಯಾನರ್ಜಿ ಒಳಗೊಂಡ ನ್ಯಾಯಪೀಠವು ಅಕ್ಟೋಬರ್‌ 5 ರಂದು ವಿಚಾರಣೆ ನಡೆಸಲಿದೆ ಬಾರ್‌ ಆಂಡ್‌ ಬೆಂಚ್‌ ವರದಿ ಮಾಡಿದೆ.

ವಿಚಾರಣೆಗೆ ಮುಂಚಿತವಾಗಿ ನ್ಯಾಯಮೂರ್ತಿ ಜೋಸೆಫ್ ಅವರನ್ನು ನ್ಯಾಯಪೀಠದಿಂದ ಯಾಕೆ ಕೈಬಿಡಲಾಗಿದೆ ಎಂದು ಇನ್ನೂ ಸ್ಪಷ್ಟವಾಗಿಲ್ಲ. ಅವರು ಈ ಪ್ರಕರಣವನ್ನು ಕೊನೆಯದಾಗಿ ಸೆಪ್ಟಂಬರ್ 24 ರಂದು ಆಲಿಸಿದ್ದರು. ಅಂದು ಅವರು ಸುದರ್ಶನ್ ಟಿವಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಸಮಾಜದಲ್ಲಿ ಈಗಾಗಲೇ ಬೇರೂರುತ್ತಿರುವ ಇಸ್ಲಾಮೋಫೋಬಿಯ ಜೊತೆಗೆ ವಾಹಿನಿಯ ಈ ಕಾರ್ಯಕ್ರಮದ ಪ್ರಸಾರವು ಮುಸ್ಲಿಂ ಸಮುದಾಯದ ಬಗ್ಗೆ ಅನುಮಾನ ಹುಟ್ಟಿಸುತ್ತದೆ ಎಂದು ಹಲವರು ವಿರೋಧಿಸಿದ್ದರು. ಕೆಳಹಂತದ ಕೋರ್ಟ್‌ಗಳು ಸಹ ಇದೇ ಅಭಿಪ್ರಾಯಪಟ್ಟಿದ್ದವು. ಆದರೆ ಈಗ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿಗಳನ್ನು ಏಕಾಏಕಿ ಬದಲಾವಣೆ ಮಾಡಿದ್ದೇಕೆ ಎಂಬ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ: ಟಿವಿ ವಾಹಿನಿಗಳೇ ಲಿಂಚಿಂಗ್ ಕೇಂದ್ರಗಳಾಗಿರುವ ಕಾಲದಲ್ಲಿ… ನಾವೇನು ಮಾಡಬೇಕು?

ವಿಡಿಯೋ ನೋಡಿ: ಮಾಧ್ಯಮಗಳು ಸೃಷ್ಟಿಸಿರುವ ಸಾವಿನ ಬಾವಿ – ಡಾ.ವಾಸು ಎಚ್‌.ವಿ ಮಾತುಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...