Homeಮುಖಪುಟಹತ್ರಾಸ್: ರಾಹುಲ್ ಗಾಂಧಿ ಭೇಟಿ ರಾಜಕೀಯ; ಸಂತ್ರಸ್ತೆಗೆ ನ್ಯಾಯ ಕೊಡಿಸಲು ಅಲ್ಲ-ಸ್ಮೃತಿ ಇರಾನಿ

ಹತ್ರಾಸ್: ರಾಹುಲ್ ಗಾಂಧಿ ಭೇಟಿ ರಾಜಕೀಯ; ಸಂತ್ರಸ್ತೆಗೆ ನ್ಯಾಯ ಕೊಡಿಸಲು ಅಲ್ಲ-ಸ್ಮೃತಿ ಇರಾನಿ

ಸ್ಮೃತಿ ಇರಾನಿ ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ನಾಯಕಿ-ನಟಿ ನಗ್ಮಾ ಸೋಗಲಾಡಿ ಸ್ಮೃತಿ ಇರಾನಿ ರಾಜಿನಾಮೆ ನೀಡಲಿ ಎಂದು ಕಿಡಿ ಕಾಡಿದ್ದಾರೆ.

- Advertisement -
- Advertisement -

ಉತ್ತರ ಪ್ರದೇಶದ ಹತ್ರಾಸ್‌‌ ಅತ್ಯಾಚಾರ ಸಂತ್ರಸ್ತೆಯ ಕುಟುಂಬಿಕರಿಗೆ ಸಾಂತ್ವಾನ ಹೇಳಲು ಹೊರಟ ಕಾಂಗ್ರೇಸಿನ ಭೇಟಿ ರಾಜಕೀಯಕ್ಕಾಗಿಯೆ ಹೊರತು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಅಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಸಚಿವೆ, “ಕಾಂಗ್ರೆಸ್‌ನ ತಂತ್ರಗಳನ್ನು ಜನರು ತಿಳಿದಿದ್ದಾರೆ, ಅದಕ್ಕಾಗಿಯೇ ಅವರು 2019 ರ ಚುನಾವಣೆಯಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ನೀಡಿದ್ದು. ಕಾಂಗ್ರೇಸ್‌ ಹತ್ರಾಸ್‌ಗೆ ಭೇಟಿ ನೀಡಿದ್ದು ಅವರ ರಾಜಕೀಯಕ್ಕಾಗಿಯೇ ಹೊರತು ಸಂತ್ರಸ್ತರಿಗೆ ನ್ಯಾಯ ಒದಗಿಸಲು ಅಲ್ಲ ಎಂದು ಜನರು ಅರ್ಥಮಾಡಿಕೊಂಡಿದ್ದಾರೆ” ಎಂದು ರಾಹುಲ್‌ ಗಾಂಧಿಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಯುಪಿ ಪೊಲೀಸರ ಅಟ್ಟಹಾಸ: ಮಹಿಳಾ ಸಂಸದೆಯನ್ನು ದೂಡಿ, ಡೆರೆಕ್ ಒಬ್ರಿಯೆನ್‌ರನ್ನು ನೆಲಕ್ಕೆ ಬೀಳಿಸಿದ ಪೊಲೀಸರು

ಸ್ಮೃತಿ ಇರಾನಿ ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ನಾಯಕಿ-ನಟಿ ನಗ್ಮಾ , “ಸ್ಮೃತಿ ಇರಾನಿ ಇದುವರೆಗಿನ ಅತಿದೊಡ್ಡ ನಟಿ, ದೇಶಾದ್ಯಂತ ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳ ಜವಾಬ್ದಾರಿಯಿಂದ ಸುಲಭವಾಗಿ ತನ್ನನ್ನು ತಾನು ಮುಕ್ತಗೊಳಿಸಿ ತನ್ನ ನಟನೆಯನ್ನು ನಿಲ್ಲಿಸಿದ್ದರು. ಈ ಹಿಂದೆ ಅವರು ಸೋನಿಯಾ ಗಾಂಧೀಯವರೊಂದಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಸೋಗಲಾಡಿ ಸ್ಮೃತಿ ಇರಾನಿ ರಾಜಿನಾಮೆ ನೀಡಲಿ” ಎಂದು ಕಿಡಿ ಕಾಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಹತ್ರಾಸ್‌ ಸಂತ್ರಸ್ತರ ಭೇಟಿಗೆ ಕಾಲ್ನಡಿಗೆಯಲ್ಲಿ ಹೊರಟಾಗ ಪೊಲೀಸರು ಅವರನ್ನು ತಡದು, ತಳ್ಳಾಡಿದ್ದರು. ನಂತರ ಅವರನ್ನು ಬಂಧಿಸಲಾಗಿತ್ತು. ಒಬ್ಬ ರಾಷ್ಟ್ರೀಯ ನಾಯಕರನ್ನು ಉತ್ತರ ಪ್ರದೇಶದ ಪೊಲೀಸರು ನಡೆಸಿಕೊಂಡ ರೀತಿಯನ್ನು ದೇಶದಾದ್ಯಂತ ರಾಜಕೀಯ ಬೇಧ ಮರೆತು ಹಲವಾರು ಪಕ್ಷಗಳು ಖಂಡಿಸಿದ್ದವು.

ಇದನ್ನೂ ಓದಿ:  ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ 200 ಕಾರ್ಯಕರ್ತರ ವಿರುದ್ಧ FIR

ವಿಡಿಯೋ ನೋಡಿ:

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್‌ ವಿರುದ್ಧ ದೂರು ನೀಡಿದ ಕೇಜ್ರಿವಾಲ್ ಸಹಾಯಕ ಬಿಭವ್ ಕುಮಾರ್

0
ದೆಹಲಿ ಎಎಪಿ ನಾಯಕಿ, ರಾಜ್ಯಸಭಾ ಸದಸ್ಯೆ ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ ವಿಭಿನ್ನ ತಿರುವನ್ನು ಪಡೆದುಕೊಂಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ಅವರು ಶುಕ್ರವಾರ ಎಎಪಿ...