ಟಿಆರ್‌ಪಿಯನ್ನು ತಿರುಚಿದ್ದಕ್ಕಾಗಿ ಇಬ್ಬರನ್ನು ಬಂಧಿಸಲಾಗಿದ್ದು, ರಿಪಬ್ಲಿಕ್ ಟಿವಿ ಸೇರಿದಂತೆ ಮೂರು ಚಾನೆಲ್‌ಗಳನ್ನು ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಅತಿ ಹೆಚ್ಚು TRP ಹೊಂದಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ರಿಪಬ್ಲಿಕ್ ಟಿವಿಯ ಅಧಿಕಾರಿಗಳನ್ನು ತನಿಖೆಗೆ ಇಂದು ಅಥವಾ ನಾಳೆ ಕರೆಸಲಾಗುವುದು ಎನ್‌ಡಿಟಿವಿ ವರದಿ ಮಾಡಿದೆ.
ನ್ಯೂಸ್ ಟ್ರೆಂಡ್‌ಗಳನ್ನು ತಿರುಚಲಾಗಿದೆ. ಸುಳ್ಳು ನಿರೂಪಣೆಗಳನ್ನು ಬಿತ್ತರಿಸಲಾಗಿದೆ. ಈ ಎಲ್ಲಾ ಆಯಾಮಗಳಿಂದಲೂ ಸಹ ತನಿಖೆ ನಡೆಯಲಿದ್ದು ಈ ವಿವರಗಳನ್ನು ಕೇಂದ್ರ ಸರ್ಕಾರದೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ನಿಮ್ಮದು ಬನಾನಾ ರಿಪಬ್ಲಿಕ್ ಚಾನೆಲ್: ಅರ್ನಾಬ್ ಗೋಸ್ವಾಮಿ ವಿರುದ್ಧ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಆಕ್ರೋಶ
“ಜಾಹಿರಾತುದಾರರಿಂದ ಚಾನೆಲ್‌ಗಳು ಪಡೆಯುವ ಹಣ ಅಪರಾಧದ ಹಿನ್ನೆಲೆಯಿಂದ ಬಂದಿದೆಯೆ ಎಂಬ ಬಗ್ಗೆ ಕೂಡಾ ತನಿಖೆ ನಡೆಯಲಿದ್ದು, ಚಾನೆಲ್‌ಗಳ ಬ್ಯಾಂಕ್ ಖಾತೆಗಳ ಬಗ್ಗೆ ಕೂಡಾ ತನಿಖೆ ನಡೆಸಲಾಗುವುದು” ಎಂದು ಮುಂಬೈ ಪೊಲೀಸ್ ಮುಖ್ಯಸ್ಥ ಪರಮ್‌ವೀರ್ ಸಿಂಗ್ ಹೇಳಿದ್ದಾರೆ.
ಯಾವುದೇ ಅಪರಾಧ ಕಂಡು ಬಂದರೆ, ಖಾತೆಗಳನ್ನು ವಶಪಡಿಸಿಕೊಂಡು, ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು ಎಂದು ಪರಮ್ ಸಿಂಗ್ ಹೇಳಿದ್ದಾರೆ.
“ರೇಟಿಂಗ್‌ಗಳನ್ನು ತಿರುಚುವುದಕ್ಕಾಗಿ ಚಾನೆಲ್‌ಗಳು ಮನೆಗಳ ಡೇಟಾವನ್ನು ಬಳಸುತ್ತಿದ್ದರು ಮತ್ತು ಅಕ್ರಮವಾಗಿ ಜಾಹೀರಾತು ಹಣವನ್ನು ಪಡೆಯುತ್ತಿದ್ದರು. ಇದನ್ನು ಮೋಸದ ಆದಾಯವೆಂದು ಪರಿಗಣಿಸಲಾಗುತ್ತದೆ” ಎಂದು ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಚೀನಾದ ನೂರು ಸೈನಿಕರು ಸತ್ತರೆಂದು ಪ್ರಕಟಿಸಿ, ಡಿಲೀಟ್ ಮಾಡಿದ ರಿಪಬ್ಲಿಕ್ ಟಿವಿ!
ವಿಡಿಯೋ ನೋಡಿ: ನಿರ್ಭೀತ ಪತ್ರಕರ್ತ ರವೀಶ್ ಕುಮಾರ್ ರವರಿಗೆ ಸ್ಫೂರ್ತಿ ಯಾರು? ಡಿ.ಉಮಾಪತಿಯವರು ಮಾತುಗಳು


