Homeಕರೋನಾ ತಲ್ಲಣಲಕ್ಷದ್ವೀಪ: 8 ತಿಂಗಳಾದರೂ ಒಂದೂ ಕೊರೊನಾ ಸೊಂಕಿತರಿಲ್ಲದ ಪ್ರದೇಶ!

ಲಕ್ಷದ್ವೀಪ: 8 ತಿಂಗಳಾದರೂ ಒಂದೂ ಕೊರೊನಾ ಸೊಂಕಿತರಿಲ್ಲದ ಪ್ರದೇಶ!

ಲಕ್ಷದ್ವೀಪಕ್ಕೆ ನಿವಾಸಿಗಳು ಪ್ರವೇಶಿಸಲು ಕೇರಳದ ಸರ್ಕಾರಿ ಅಧಿಕೃತ ಕ್ವಾರಂಟೈನ್ ಕೇಂದ್ರದಲ್ಲಿ 14 ದಿನಗಳ ಕಾಲ ಇರಬೇಕಾಗುತ್ತದೆ. ಇದರ ನಂತರ ಕೋವಿಡ್ ಪರೀಕ್ಷೆ ಮಾಡಬೇಕಾಗುತ್ತದೆ.

- Advertisement -
- Advertisement -

ದೇಶದಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ವರದಿಯಾಗಿ ಎಂಟು ತಿಂಗಳಾದರೂ ಒಂದೇ ಒಂದು ಸೋಂಕಿನ ವರದಿಯಿಲ್ಲದ ಭಾರತದ ಏಕೈಕ ಸ್ಥಳವಾಗಿದೆ ಲಕ್ಷದ್ವೀಪ. ಲಕ್ಷದ್ವೀಪದ 10 ಜನವಸತಿ ದ್ವೀಪಗಳಲ್ಲಿ 11,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗ ಮತ್ತೆ ಶಾಲೆಗೆ ಬಂದಿದ್ದಾರೆ. ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ತರಗತಿಗಳು ಇನ್ನಷ್ಟೇ ಪ್ರಾರಂಭವಾಗಬೇಕಿದೆ.

ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪದಲ್ಲಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಸೇರಿಂದತೆ, ರಕ್ಷಕ-ಶಿಕ್ಷಕ ಸಂಘಗಳೊಂದಿಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ನಡೆಸಿದ ಸಭೆಯ ನಂತರ ಆಡಳಿತಾಧಿಕಾರಿ ದಿನೇಶ್ವರ ಶರ್ಮಾ ಅವರು 1 ರಿಂದ 5 ನೇ ತರಗತಿಗಳನ್ನು ಪುನರಾರಂಭಿಸುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಸೆಪ್ಟೆಂಬರ್ 21 ರಂದು 6 ರಿಂದ 12 ನೇ ವರೆಗಿನ ತರಗತಿಗಳು ದ್ವೀಪದಲ್ಲಿ ಪುನರಾರಂಭಗೊಂಡಿದ್ದವು.

ಇದನ್ನೂ ಓದಿ: 10 ಕೋಟಿ ಜನರನ್ನು ತೀವ್ರ ಬಡತನಕ್ಕೆ ದೂಡಲಿದೆ ಕೊರೊನಾ: ವಿಶ್ವಬ್ಯಾಂಕ್

“ಗೇಟ್‌ನಲ್ಲಿ ಮಕ್ಕಳಿಗಾಗಿ ಥರ್ಮಲ್ ಸ್ಕ್ರೀನಿಂಗ್ ಇದೆ. ಪ್ರತಿಯೊಬ್ಬರೂ ಮಾಸ್ಕ್‌‌ಗಳನ್ನು ಧರಿಸಬೇಕು. ತರಗತಿಗಳಿಗೆ ಪ್ರವೇಶಿಸುವ ಮೊದಲು ವಿದ್ಯಾರ್ಥಿಗಳು ಕೈ ತೊಳೆಯಬೇಕು. ಒಂದು ಬೆಂಚಿನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಕುಳಿತುಕೊಳ್ಳಲು ಅನುಮತಿ ಇದೆ” ಎಂದು ಶಾಲೆಯ ಶಿಕ್ಷಕಿಯೊಬ್ಬರು ಹೇಳಿದ್ದಾರೆ.

PC: Indian Express.

ಶಾಲೆಯಲ್ಲಿ ಮಧ್ಯಾಹ್ನದವರೆಗೆ ಮಾತ್ರ ಪರ್ಯಾಯ ತರಗತಿಗಳು ನಡೆಯಲಿದ್ದು, “2 ಮತ್ತು 4 ನೇ ತರಗತಿಗಳು ಸೋಮವಾರ ನಡೆಯಲಿವೆ, ಇತರ ತರಗತಿಗಳು ಮರುದಿನ, ಹೀಗೆ… ಪ್ರತಿ ತರಗತಿಯ ವಿದ್ಯಾರ್ಥಿಗಳು ವಾರದಲ್ಲಿ ಮೂರು ದಿನ ಶಾಲೆಗೆ ಬರುತ್ತಾರೆ” ಎಂದು ಅವರು ಹೇಳುತ್ತಾರೆ. ಇಂಟರ್ನೆಟ್ ಸಮಸ್ಯೆಗಳಿಂದಾಗಿ ಪೂರ್ಣ ಸಮಯದ ಆನ್‌ಲೈನ್ ತರಗತಿಗಳಿಗೆ ಯಾವುದೇ ಅವಕಾಶವಿಲ್ಲದ ಕಾರಣ ಶಾಲೆಗಳ ಪುನರಾರಂಭ ಅತ್ಯಗತ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಗತ್ತಿನ 10 ಜನರಲ್ಲಿ ಒಬ್ಬರಿಗೆ ಕೊರೊನಾ: WHO ಕಳವಳ

ಕವರತ್ತಿ ದ್ವೀಪದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು, ”ಚಿಕ್ಕ ಮಕ್ಕಳು ದಿನಕ್ಕೆ ಸುಮಾರು ನಾಲ್ಕು ಗಂಟೆಗಳ ಕಾಲ ಮಾಸ್ಕ್‌ ಧರಿಸುವ ಬಗ್ಗೆ ಪೋಷಕರು ಕಳವಳ ವ್ಯಕ್ತಪಡಿಸಿದ್ದಾರೆ” ಎಂದು ಹೇಳಿದ್ದಾರೆ.

64,000 ಜನಸಂಖ್ಯೆ ಹೊಂದಿರುವ ಲಕ್ಷದ್ವೀಪವು ಕೊರೊನಾವನ್ನು ತಡೆಯಲು ಯಶಸ್ವಿಯಾಗಿದೆ. ಭಾರತದಾದ್ಯಂತ ಲಾಕ್‌‌ಡೌನ್ ಘೋಷಿಸುವ ಮುಂಚೆಯೆ ಲಕ್ಷದ್ವೀಪದ ಅಧಿಕಾರಿಗಳು ಪ್ರವಾಸಿಗರಿಗೆ ವಾಯುನೆಲೆ ಮತ್ತು ಬಂದರುಗಳನ್ನು ಮುಚ್ಚಿದ್ದರು. ಕೊರೊನಾ ನೆಗೆಟಿವ್ ಪ್ರಮಾಣಪತ್ರವನ್ನು ಹೊಂದಿದ್ದ ನಿವಾಸಿಗಳಿಗೆ ಮಾತ್ರ ದ್ವೀಪಕ್ಕೆ ಮರಳಲು ಅವಕಾಶವಿತ್ತು.

ಲಕ್ಷದ್ವೀಪಕ್ಕೆ ನಿವಾಸಿಗಳು ಪ್ರವೇಶಿಸಲು ಕೇರಳದ ಸರ್ಕಾರಿ ಅಧಿಕೃತ ಕ್ವಾರಂಟೈನ್ ಕೇಂದ್ರದಲ್ಲಿ 14 ದಿನಗಳ ಕಾಲ ಇರಬೇಕಾಗುತ್ತದೆ. ಇದರ ನಂತರ ಕೋವಿಡ್ ಪರೀಕ್ಷೆ ಮಾಡಬೇಕಾಗುತ್ತದೆ. ಇಲ್ಲಿ ಅವರು ಕೊರೊನಾ ನೆಗೆಟಿವ್ ಆಗಿದ್ದರೂ ದ್ವೀಪದಲ್ಲಿ ಏಳು ದಿನಗಳ ಕಾಲ ಕ್ವಾರಂಟೈನ್ ಇರಲೇಬೇಕಾಗಿದೆ.

ಇದನ್ನೂ ಓದಿ: ‘ನನಗೆ ಕೊರೊನಾ ಬಂದರೆ ಮಮತಾ ಬ್ಯಾನರ್ಜಿಯನ್ನು ತಬ್ಬಿಕೊಳ್ಳುವೆ’ ಎಂದಿದ್ದ ಬಿಜೆಪಿ ನಾಯಕನಿಗೆ ಕೊರೊನಾ ದೃಢ!

ವಿಡಿಯೋ ನೋಡಿ: ಕೊರೊನಾ ಜೊತೆಗೆ ಇನ್ನೆರಡು ವೈರಸ್‌ಗಳ ದಾಳಿ. ಅವು ಯಾವುವು? ನಾವೇನು ಮಾಡಬೇಕು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...