PC: Doordarshan

ಪಶ್ಚಿಮ ಬಂಗಾಳ ಸಚಿವಾಲಯ ‘ನಬನ್ನಾ’ದ ಹೊರಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಯುವ ವಿಭಾಗವು ಆಯೋಜಿಸಿದ್ದ ಪ್ರತಿಭಟನಾ ರ್‍ಯಾಲಿ ಹಿಂಸಾತ್ಮಕ ರೂಪ ಪಡೆದಿದೆ. ನೂರಾರು ಬಿಜೆಪಿ ಕಾರ್ಯಕರ್ತರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಮುರಿಯಲು ಪ್ರಯತ್ನಿಸಿದಾಗ, ಕಲ್ಲು ತೂರಾಟ ನಡೆಸಿದಾಗ ಗುಂಪು ಚದುರಿಸಲು ಪೊಲೀಸರು ಲಾಠೀ ಚಾರ್ಜ್‌ ಮತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದ ಅಡಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಬಿಜೆಪಿ ‘ನಬನ್ನಾ ಚಲೋ’ ರ್‍ಯಾಲಿ ಆಯೋಜಿಸಿತ್ತು.

ಕೊರೊನಾ ಸಾಂಕ್ರಾಮಿಕ ಹೆಚ್ಚಾಗುತ್ತಿದ್ದು, ಜನರು ಗುಂಪು ಸೇರುವಂತಿಲ್ಲ ಎಂದು ಸೂಚಿಸಿದ್ದ ರಾಜ್ಯ ಸರ್ಕಾರ ಬಿಜೆಪಿ ಆಯೋಜಿಸಿದ್ದ ‘ನಬನ್ನಾ ಚಲೋ’ ಪ್ರತಿಭಟನೆಗೆ ಅನುಮತಿ ನಿರಾಕರಿಸಿತ್ತು. ಬಿಜೆಪಿ ಯುವ ಘಟಕದ ಅಧ್ಯಕ್ಷ ತೇಜಸ್ವಿ ಸೂರ್ಯ ಸಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲೆಂದು ಕೊಲ್ಕತ್ತಾಗೆ ಬಂದಿದ್ದರು.

ಇದನ್ನೂ ಓದಿ: ’ಬೆಂಗಳೂರು ಭಯೋತ್ಪಾದಕ ಚಟುವಟಿಕೆಗಳ ಕೇಂದ್ರ’: ಸಂಸದ ತೇಜಸ್ವಿ ಸೂರ್ಯ ಹೇಳಿಕೆಗೆ ವ್ಯಾಪಕ ವಿರೋಧ

“ನಾವು ಶಾಂತಿಯುವಾಗಿ ಪ್ರತಿಭಟಿಸುತ್ತಿದ್ದೇವೆ, ಆದರೆ ಮಮತಾ ಜಿ ನಮ್ಮ ಶಾಂತಿಯುತ ಪ್ರದರ್ಶನವನ್ನು ಹಿಂಸಾತ್ಮಕ ಪ್ರತಿಭಟನೆಯನ್ನಾಗಿ ಮಾಡಲು ಪ್ರಯತ್ನಿಸಿದ್ದಾರೆ. ಗೂಂಡಾಗಳು, ಪೊಲೀಸರೊಂದಿಗೆ ನಮ್ಮ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ” ಎಂದು ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗಿಯಾ ಹೇಳಿದ್ದಾರೆ.

‘ಪೊಲೀಸರು ಬಿಜೆಪಿ ಕಾರ್ಯಕರ್ತರನ್ನೇ ಗುರಿಯಾಗಿಸಿಕೊಂಡು ಲಾಠೀ ಚಾರ್ಜ್ ಮಾಡುತ್ತಿದ್ದಾರೆ. ಕಲ್ಲುತೂರಾಟದಲ್ಲಿ ನಮ್ಮ ಕಾರ್ಯಕರ್ತರು ಪಾಲ್ಗೊಂಡಿಲ್ಲ. ಖಿದಿರ್ಪುರ ಕಡೆಯಿಂದ ಕಲ್ಲು ತೂರಾಟ ನಡೆಸಲಾಗುತ್ತಿದೆ. ಪೊಲೀಸರು ಅದನ್ನು ಯಾಕೆ ನೋಡುತ್ತಿಲ್ಲ’ ಎಂದು ಬಿಜೆಪಿ ನಾಯಕ ಲೋಕೆತ್ ಚಟರ್ಜಿ ಆಕ್ರೋಶ ವ್ಯಕ್ತಪಡಿಸಿದರು.

ಘಟನೆಯನ್ನು ಖಂಡಿಸಿರುವ ಬಿಜೆಪಿ ಯುವ ಮೋರ್ಚಾದ ಮುಖ್ಯಸ್ಥ, ’ ಟಿಸಿಎಂ ಗೂಂಡಾಗಳು ನಮ್ಮ ಮೇಲೆ ಕಂಟ್ರಿ ಬಾಂಬ್‌ಗಳನ್ನು ಎಸೆದಿದ್ದಾರೆ. ಫ್ಯಾಸಿಸಂ ಅಂದರೆ ಇದೆ’ ಎಂದು ಟ್ವೀಟ್ ಮಾಡಿದ್ದಾರೆ.

ರ್‍ಯಾಲಿಯಲ್ಲಿ ಬಿಜೆಪಿ ವರ್ತನೆ ಬಗ್ಗೆ ಕಿಡಿಕಾರಿರುವ ಟಿಎಂಸಿ ಮುಖಂಡ ಬರ್ತ್ಯಾ ಬಸು ’ನಿಮ್ಮ ಗೂಂಡಾಗಿರಿಯಿಂದಾಗಿ ಪ್ರತಿ ಬಾರಿ ಎಷ್ಟು ಸಾರ್ವಜನಿಕ ಆಸ್ತಿ ನಾಶವಾಗುತ್ತದೆ ಎಂಬುದರ ಬಗ್ಗೆ ಕಾಳಜಿ ವಹಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಪಶ್ಚಿಮ ಬಂಗಾಳ ಬಿಜೆಪಿಗೆ ಟ್ಯಾಗ್ ಮಾಡಿ ’ನಿಮ್ಮ ಬಾಡಿಗೆ ಗೂಂಡಾಗಳು ಮತ್ತು ಹೊರಗಿನವರು ಮಾಡಿದ ಈ ಹಾನಿಗಳಿಗೆ ಯಾರು ಹಣ ಪಾವತಿಸುತ್ತಾರೆ..?’ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಸ್ಯಾನಿಟೈಸೇಶನ್‌ ಮಾಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಚೇರಿಯೂ ಇರುವ ಸಚಿವಾಲಯವನ್ನು ಎರಡು ದಿನಗಳ ಅವಧಿಗೆ ಮುಚ್ಚಲಾಗಿದೆ. ಸರ್ಕಾರದ ಈ ನಿರ್ಧಾರವನ್ನು ಬಿಜೆಪಿ ಖಂಡಿಸಿದೆ. “ನೈರ್ಮಲ್ಯೀಕರಣದ ಉದ್ದೇಶಕ್ಕಾಗಿ” ಸಚಿವಾಲಯದ ಕಟ್ಟಡದ ಎಲ್ಲಾ ಕಚೇರಿಗಳನ್ನು ಎರಡು ದಿನಗಳವರೆಗೆ ಮುಚ್ಚಲಾಗುವುದು ಎಂದು ರಾಜ್ಯ ಸರ್ಕಾರ ನಿನ್ನೆ ಸಂಜೆಯೇ  ಘೋಷಿಸಿತ್ತು.


ಇದನ್ನೂ ಓದಿ: ತೇಜಸ್ವಿ ಸೂರ್ಯನ ಕೋಮುವಾದಿ ಭಾಷಣ ಬೇಡ: ಜರ್ಮನ್ ಭಾರತೀಯರ ಒತ್ತಾಯ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here