ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ISI) ಏಜೆನ್ಸಿಗೆ ಭಾರತೀಯ ಯುದ್ಧ ವಿಮಾನಗಳ ರಹಸ್ಯ ಮಾಹಿತಿಯನ್ನು ಒದಗಿಸಿದ ಆರೋಪದ ಮೇಲೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಇಂದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ನ ಉದ್ಯೋಗಿಯನ್ನು ಬಂಧಿಸಿದೆ.
“ರಾಜ್ಯ ಭಯೋತ್ಪಾದನಾ ನಿಗ್ರಹ ದಳದ (ATS) ನಾಸಿಕ್ ಘಟಕವು ISI ಜೊತೆ ನಿರಂತರ ಸಂಪರ್ಕದಲ್ಲಿದ್ದ ವ್ಯಕ್ತಿಯ ಬಗ್ಗೆ ಖಚಿತ ಮಾಹಿತಿ ಪಡೆದಿತ್ತು. ದೀಪಕ್ ಶಿರ್ಸತ್ ಎಂಬ ವ್ಯಕ್ತಿಯು ಭಾರತೀಯ ಯುದ್ಧ ವಿಮಾನ ಮತ್ತು ಅವುಗಳ ಉತ್ಪಾದನಾ ಘಟಕದ ಬಗ್ಗೆಗಿನ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನದ ಪತ್ತೇದಾರಿ ಸಂಸ್ಥೆಗೆ ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಒದಗಿಸುತ್ತಿದ್ದ” ಎಂದು ಡಿಸಿಪಿ ವಿನಯ್ ರಾಥೋಡ್ ಹೇಳಿದ್ದಾರೆ.
ಇದನ್ನೂ ಓದಿ: ಗುಜರಾತ್‌ನಲ್ಲಿ ISI ಏಜೆಂಟ್ ಕೆಲಸ ಮಾಡುತ್ತಿದ್ದ ವ್ಯಕ್ತಿ ಬಂಧಿಸಿದ NIA
ನಾಸಿಕ್ ಬಳಿಯ ಓಜರ್‌ನಲ್ಲಿರುವ HAL ವಿಮಾನ ಉತ್ಪಾದನಾ ಘಟಕ, ವಾಯುನೆಲೆ ಮತ್ತು ಉತ್ಪಾದನಾ ಘಟಕದೊಳಗಿನ ನಿಷೇಧಿತ ಪ್ರದೇಶಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಸಹಾಯಕ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ 41 ವರ್ಷದ ದೀಪಕ್ ಶಿರ್ಸತ್ ವಿರುದ್ಧ ’ಅಧಿಕೃತ ರಹಸ್ಯ ಕಾಯ್ದೆ’ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯಿಂದ ಮೂರು ಮೊಬೈಲ್ ಹ್ಯಾಂಡ್‌ಸೆಟ್‌ಗಳು, ಐದು ಸಿಮ್ ಕಾರ್ಡ್‌ಗಳು ಮತ್ತು ಎರಡು ಮೆಮೊರಿ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
HAL ನ ವಿಮಾನ ಉತ್ಪಾದಕ ಘಟಕವೂ ನಾಸಿಕ್‌ನಿಂದ 24 ಕಿ.ಮೀ ಮತ್ತು ಮುಂಬೈನಿಂದ 200 ಕಿ.ಮೀ ದೂರದ ಓಜಾರ್‌ನಲ್ಲಿದೆ.
ಮಿಗ್ -21FL ವಿಮಾನ ಮತ್ತು K-13 ಕ್ಷಿಪಣಿಗಳ ಪರವಾನಗಿ ತಯಾರಿಕೆಗಾಗಿ 1964 ರಲ್ಲಿ ಸ್ಥಾಪನೆಯಾದ ಈ ಘಟಕವೂ ಮಿಗ್ -21M, ಮಿಗ್ -21BSI, ಮಿಗ್ -27M ಮತ್ತು ಅತ್ಯಾಧುನಿಕ ಸು-30 MKI ಫೈಟರ್ ಜೆಟ್ ಮುಂತಾದ ಮಿಗ್ ವಿಮಾನಗಳನ್ನೂ ತಯಾರಿಸುತ್ತದೆ.
ಈ ಘಟಕವು ಮಿಗ್ ಸರಣಿಯ ವಿಮಾನದ ಕೂಲಂಕುಷ ಪರೀಕ್ಷೆ ಮತ್ತು ಸು -30MKI ವಿಮಾನಗಳ ದುರಸ್ತಿ ಮತ್ತು ಕೂಲಂಕುಷ ಪರೀಕ್ಷೆ (RHO) ಅನ್ನು ಸಹ ನಿರ್ವಹಿಸುತ್ತದೆ.
ಇದನ್ನೂ ಓದಿ: ಭಾರತ ವಿರೋಧಿ ಅರ್ನಬ್ ಗೋಸ್ವಾಮಿ ಬಂಧಿಸಿ: ಟ್ವಿಟ್ಟರ್‌ನಲ್ಲಿ ಟಾಪ್ ಟ್ರೆಂಡಿಂಗ್


