2012-13 ಮತ್ತು 2018-19 ರ ನಡುವೆ ಏಳು ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ನೀಡಲಾದ 2,818.05 ಕೋಟಿ ರೂ. ಕಾರ್ಪೋರೇಟ್ ದೇಣೀಗೆಗಳಲ್ಲಿ 82.3% ( 2,319.48 ಕೋಟಿ ರೂ) ಹಣವನ್ನು ಬಿಜೆಪಿ ಪಕ್ಷವೊಂದೆ ಪಡೆದಿದೆ.
ಇದಕ್ಕೆ ವ್ಯತಿರಿಕ್ತವಾಗಿ ಈ ಏಳು ವರ್ಷಗಳಲ್ಲಿ ಕಾಂಗ್ರೆಸ್ 376.02 ಕೋಟಿ ರೂ.ಗಳನ್ನು ಪಡೆದಿದ್ದರೆ, ಇತರ ರಾಷ್ಟ್ರೀಯ ಪಕ್ಷಗಳಾದ ಎನ್‌ಸಿಪಿ 69.81 ಕೋಟಿ ರೂ., ತೃಣಮೂಲ ಕಾಂಗ್ರೆಸ್ 45.01 ಕೋಟಿ ರೂ., ಸಿಪಿಐ-ಎಂ 7.5 ಕೋಟಿ ರೂ. ಮತ್ತು ಸಿಪಿಐ 22 ಲಕ್ಷ ರೂ ಪಡೆದಿದೆ.
ಇದನ್ನೂ ಓದಿ: ಒಂದೇ ವರ್ಷದಲ್ಲಿ 743 ಕೋಟಿ ಪಾರ್ಟಿ ಫಂಡ್ ಪಡೆದ ಬಿಜೆಪಿ: ಇತರ ಪಕ್ಷಗಳಿಗಿಂತ ಮೂರು ಪಟ್ಟು ಹೆಚ್ಚು!
ಮತ್ತೊಂದು ರಾಷ್ಟ್ರೀಯ ಪಕ್ಷವಾದ ಬಿಎಸ್ಪಿ 20,000 ರೂ.ಗಿಂತ ಹೆಚ್ಚಿನ ದೇಣಿಗೆಯನ್ನು ಸ್ವೀಕರಿಸಿಲ್ಲ ಎಂದು ಘೋಷಿಸಿದೆ. ತೃಣಮೂಲ ಕಾಂಗ್ರೆಸ್‌ಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು 2 ಸೆಪ್ಟೆಂಬರ್, 2016 ರಂದು ನೀಡಲಾಗಿತ್ತು.
ಖಾಸಗಿ ಚುನಾವಣಾ ವಾಚ್‌ಡಾಗ್ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ನಡೆಸಿದ ವಿಶ್ಲೇಷಣೆಯು ಕೇಂದ್ರದಲ್ಲಿ ಅಧಿಕಾರದಲ್ಲಿಲ್ಲದ ವರ್ಷದಲ್ಲಿ ಸಹ ಕಾರ್ಪೊರೇಟ್ ದೇಣಿಗೆಗಳನ್ನು ಆಕರ್ಷಿಸುವಲ್ಲಿ ಬಿಜೆಪಿ ಕಾಂಗ್ರೆಸ್‌ಗಿಂಲೂ ಮುಂದಿದೆ ಎಂದು ಹೇಳಿದೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದ 2012-13 ರ ಸಮಯದಲ್ಲಿ ಬಿಜೆಪಿಗೆ 72.99 ಕೋಟಿ ರೂ. ಪಡೆದಿದ್ದು, ಮುಂದಿನ ಹಣಕಾಸು ವರ್ಷದಲ್ಲಿ ಇದು 156.98 ಕೋಟಿ ರೂ.ಗೆ ಏರಿತ್ತು. ಇದಕ್ಕೆ ಹೋಲಿಸಿದರೆ 2012-13 ರಲ್ಲಿ ಕಾಂಗ್ರೆಸ್‌ಗೆ ಕೇವಲ 7.54 ಕೋಟಿ ರೂ. ದೊರೆತಿದ್ದು, ಇದು ಬಿಜೆಪಿಗೆ ದೊರೆತ ಹತ್ತನೇ ಒಂದು ಭಾಗದಷ್ಟಾಗಿದೆ. 2013-14 ರಲ್ಲಿ ಕಾಂಗ್ರೆಸ್ 53.51 ಕೋಟಿ ರೂ. ಪಡೆದಿದ್ದು ಇದು ಬಿಜೆಪಿ ಪಡೆದ ಮೂರನೇ ಒಂದು ಭಾಗದಷ್ಟಾಗಿದೆ.
ಸಿಪಿಐ ಯಾವುದೇ ಕಾರ್ಪೊರೇಟ್ ಕಂಪೆನಿಗಳಿಂದ ದೇಣಿಗೆ ಸ್ವೀಕರಿಸಿಲ್ಲ ಎಂದು ವರದಿ ಮಾಡಿದರೆ, ಬಿಎಸ್ಪಿ 20,000 ರೂ.ಗಿಂತ ಹೆಚ್ಚಿನ ದೇಣಿಗೆಯನ್ನು ಸ್ವೀಕರಿಸಿಲ್ಲ ಎಂದು ಹೇಳಿದೆ. ಕಾರ್ಪೊರೇಟ್‌ಗಳಿಂದ ರಾಷ್ಟ್ರೀಯ ಪಕ್ಷಗಳಿಗೆ ನೀಡುವ ದೇಣಿಗೆ 2004-12 ರಿಂದ 2018-19ರ ಅವಧಿಯಲ್ಲಿ 131% ಹೆಚ್ಚಾಗಿದೆ.
ಕಳೆದ ಹಣಕಾಸು ವರ್ಷದಲ್ಲಿ ಒಟ್ಟು 742.15 ಕೋಟಿ ರೂ. ದೇಣಿಗೆ ಬಂದಿದ್ದು, ಬಿಜೆಪಿಯೊಂದಕ್ಕೆ 1,573 ಕಾರ್ಪೋರೇಟ್‌ಗಳಿಂದ 698.08 ಕೋಟಿ ರೂ. ದೇಣಿಗೆ ಹರಿದು ಬಂದಿದೆ. ಕಾಂಗ್ರೆಸ್‌ಗೆ 122 ದಾನಿಗಳಿಂದ 122.5 ಕೋಟಿ ರೂ. ಬಂದಿದೆ.
ಇದನ್ನೂ ಓದಿ: ಬಿಜೆಪಿ ಸೇರಿರುವ ಈ ಶೂಟರ್ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಪುತ್ರಿ ಅಲ್ಲ; ಯಾರಿವರು?



Why such donations to political parties?