ಚಿತ್ರದುರ್ಗದ ಮುರುಘಾ ಮಠವು ನೀಡುವ ಮುರುಘಾಶ್ರೀ ಪ್ರಶಸ್ತಿಗೆ ಮದ್ಯಪಾನ ವಿರೋಧಿ ಹೋರಾಟಗಾರ್ತಿ ಸ್ವರ್ಣಭಟ್, ನಟ ‘ಮುಖ್ಯಮಂತ್ರಿ’ ಚಂದ್ರು ಸೇರಿ ಐವರು ಆಯ್ಕೆಯಾಗಿದ್ದಾರೆ.
ಹುಲುಸೂರು ಗುರುಬಸವೇಶ್ವರ ಮಠದ ಶಿವಾನಂದ ಸ್ವಾಮೀಜಿ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಮತ್ತು ಎಸ್, ಷಣ್ಮುಖಪ್ಪನವರು ಸಹ ಈ ಭಾರಿಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆಂದು ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿ ನಡೆಸಿದ ಅವರು ಅಕ್ಟೋಬರ್ 24 ರಂದು ನಡೆಯುವ ‘ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವದಲ್ಲಿ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮದ್ಯಪಾನ ವಿರೋಧಿ ಮತ್ತು ಮಹಿಳೆಯರ ಪರವಾಗಿನ ಹೋರಾಟಕ್ಕಾಗಿ ಸ್ವರ್ಣ ಭಟ್, ರಂಗಭೂಮಿ ಕ್ಷೇತ್ರದ ಕೊಡುಗೆಗಾಗಿ ಮುಖ್ಯಮಂತ್ರಿ ಚಂದ್ರುರವರು, ನ್ಯಾಯಾಂಗದ ಸೇವೆಗಾಗಿ ಎಚ್.ಬಿಲ್ಲಪ್ಪ, ಬಸವತತ್ವದ ಪ್ರಚಾರಕ್ಕಾಗಿ ಶಿವಾನಂದ ಸ್ವಾಮೀಜಿ ಮತ್ತು ಧರ್ಮದರ್ಶಿ ಎಸ್.ಷಣ್ಮುಖಪ್ಪನವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿಯಾಗಿ ಭರಮಣ್ಣನಾಯಕ ಶೌರ್ಯ ಪ್ರಶಸ್ತಿಗೆ ಹತ್ತು ಭಾಷೆ ಮಾತಾಡಬಲ್ಲ 17 ವರ್ಷದ ಹರಿಯಾಣದ ಜಾಹ್ನವಿ ಪನ್ವಾರ್‌ರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪುರಸ್ಕೃತರು ತಲಾ 25 ಸಾವಿರ ನಗದು ಮತ್ತು ಫಲಕ ಪಡೆಯಲಿದ್ದಾರೆ ಎಂದರು.
ಇದನ್ನೂ ಓದಿ: ಮಹಿಳೆಯರ ಈ ಮಹತ್ವದ ಆಂದೋಲನದ ಜೊತೆ ನಾನಿದ್ದೇನೆ


