Homeಕರ್ನಾಟಕಡೇರಿ ಫಾರಂ, ಗೋಶಾಲೆಗಳಿಗೆ ಅನುಮತಿ ಕಡ್ಡಾಯ: ಮಾಲಿನ್ಯ ನಿಯಂತ್ರಣದ ಹೆಸರಿನಲ್ಲಿ ರೈತರ ಬದುಕಿಗೆ ಕೊಳ್ಳಿ!

ಡೇರಿ ಫಾರಂ, ಗೋಶಾಲೆಗಳಿಗೆ ಅನುಮತಿ ಕಡ್ಡಾಯ: ಮಾಲಿನ್ಯ ನಿಯಂತ್ರಣದ ಹೆಸರಿನಲ್ಲಿ ರೈತರ ಬದುಕಿಗೆ ಕೊಳ್ಳಿ!

ಬೃಹತ್ ಮಟ್ಟದಲ್ಲಿ ಪರಿಸರ ನಾಶ ಮಾಡುವ ಕಾರ್ಪೊರೇಟ್ ಕಂಪನಿಗಳಿಗೆ ಅನುಮತಿ ನೀಡುವ ಕೆಎಸ್‌ಪಿಸಿಬಿ ರೈತರ ಶೋಷಣೆಗೆ ಮುಂದಾಗಿರುವುದು ಖಂಡನೀಯ.

- Advertisement -
- Advertisement -

ಇನ್ನು ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಹಸು ಮತ್ತು ದನಗಳನ್ನು ಸಾಕುವವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (ಕೆಎಸ್‌ಪಿಸಿಬಿ) ಅನುಮತಿ ಪತ್ರ ಪಡೆಯುವುದು ಕಡ್ಡಾಯ ಎಂದು ಅದು ಮಾರ್ಗಸೂಚಿ ಸಿದ್ಧಪಡಿಸಿರುವುದಾಗಿ ಪತ್ರಿಕೆಗಳು ವರದಿ ಮಾಡಿವೆ. ಅದರಂತೆ ಡೇರಿ ಫಾರಂಗಳು ಮತ್ತು ಗೋಶಾಲೆಗಳು ಸೆಗಣಿ, ಗಂಜಲ ಸಹಿತ ಘನತ್ಯಾಜ್ಯ ನಿರ್ವಹಣೆಗೆ ಜಲ ಕಾಯ್ದೆ 1974 ಮತ್ತು ವಾಯುಸಂರಕ್ಷಣೆ ಮಾಲಿನ್ಯ ನಿಯಂತ್ರಣ ಕಾಯ್ದೆ 1981ರ ಅನ್ವಯ ಡೇರಿ ಮತ್ತು ಗೋಶಾಲೆಗಳು ನಗರ, ಪಟ್ಟಣ, ಹಳ್ಳಿಗಳ ಸರಹದ್ದಿನಿಂದ ೨೦೦ ಮೀಟರ್ ದೂರದಲ್ಲಿರಬೇಕು, ಜಲಮೂಲಗಳಿಂದ ದೂರದಲ್ಲಿರಬೇಕು, ರಾಜ್ಯ ಮತ್ತು ರಾಷ್ಟ್ರ ಹೆದ್ದಾರಿಗಳಿಂದ ದೂರದಲ್ಲಿರಬೇಕೆಂಬ ಕಠಿಣ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಹೇಳಲಾಗಿದೆ.

ಈ ಹೊಸ ಮಾರ್ಗಸೂಚಿಗಳು ಈಗಾಗಲೇ ಕೃಷಿಯಲ್ಲಿ ಸಂಕಷ್ಟ ಅನುಭವಿಸುತ್ತಿರುವ ರೈತರ ಮೇಲೆ ಮತ್ತಷ್ಟು ಹೊರೆಯಾಗಲಿವೆ. ಈ ಕುರಿತು ಮೈಸೂರು ವಿಶ್ವವಿದ್ಯಾಲಯ ಮಾನಸ ಗಂಗೋತ್ರಿಯಲ್ಲಿ ಸಾವಯವ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಡಾ.ಮಹೇಂದ್ರ ಕೆ.ಆರ್ ಅವರ ಅನಿಸಿಕೆ ಇಲ್ಲಿದೆ.

ರಾಜ್ಯದಲ್ಲಿ ಡೈರಿ ಉದ್ಯಮವು ಸ್ವಾವಲಂಬನೆಯ ಕಲ್ಪವೃಕ್ಷವಾಗಿ ಬೆಳೆದಿದೆ.. ಬಹುತೇಕ ಡೈರಿಗಳು ಮಹಿಳಾ ಸ್ವ ಸಹಾಯ ಸಹಕಾರ ಸಂಘಗಳಿಂದ ನಡೆಯುತ್ತಿವೆ. ಜಾನುವಾರು ಸಾಕಣೆ ಮಹಿಳೆಯರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಡಗೊಳಿಸಿ ಎಲ್ಲರನ್ನು ಒಳಗೊಳ್ಳುವಂತೆ ಮಾಡಿದೆ.. ಸಾಮಾಜಿಕ ಸಹಬಾಳ್ವೆ ರೂಪಿಸುವಲ್ಲಿ ಡೈರಿ ಉದ್ಯಮದ ಮಾತ್ರ ಮಹತ್ವದ್ದು. ಜೊತೆಗೆ ಬರ, ನೆರೆ ಜೊತೆಗೆ ಸಮರ್ಪಕ ಬೆಲೆ ಸಿಗದೇ ಬಹಿಪಾಲು ನಷ್ಟವನ್ನೇ ಅನುಭವಿಸುವ ರೈತರಿಗೆ ದೈನಂದಿನ ಖರ್ಚು ಮತ್ತು ಮಕ್ಕಳ ವಿದ್ಯಾಭಾಸಕ್ಕೆ ಬಲ ತುಂಬುತ್ತಿರುವುದು ಕೂಡ ಇದೆ ಡೈರಿ ಉದ್ಯಮ.. ಭೂರಹಿತರು ಕೂಲಿ ಕಾರ್ಮಿಕರು ಕೂಡ ಜಾನುವಾರು ಸಾಕಣೆಯಿಂದ ತಮ್ಮ ಬದುಕು ಹಸನಾಗಿಸಿಕೊಂಡಿದ್ದಾರೆ..

ಆದರೆ ಮಾಲಿನ್ಯ ನಿಯಂತ್ರಣದ ಹೆಸರಿನಲ್ಲಿ ಅವೈಜ್ಞಾನಿಕ ಕಾನೂನು ಹೇರಿ ಸರ್ಕಾರ ಈ ಸ್ವಾವಲಂಬಿ ಜನರ ಬದುಕಿಗೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಹೂಡಲು ಹೊರಟಿದೆ. ವ್ಯವಸಾಯದ ಜೊತೆಗೆ ಹಸು ಎಮ್ಮೆ ಕೋಳಿ ಕುರಿ ಮೇಕೆ ಇನ್ನಿತರ ಜಾನುವಾರು ಸಾಕಿ ಸ್ವಾವಲಂಬಿ ಬದುಕು ರೂಪಿಸಿಕೊಂಡಿದ್ದ ರೈತರ ಜೀವನಕ್ಕೆ ಅಂಕುಶ ಹಾಕಿ ಜನ ಸಾಮಾನ್ಯರಿಗೆ ಕಿರುಕುಳ ನೀಡಲು ಹೊರಟಿದೆ..

ಗೋಶಾಲೆ ಮತ್ತು ಡೈರಿಪಾರಂ ನಿಯಂತ್ರಿಸಲು ಸಾಧುವಲ್ಲದ ಅವೈಜ್ಞಾನಿಕ ಕಾನೂನು ರೂಪಿಸಿದೆ. ಆ ಕಾನೂನಿನ ಅನ್ವಯ ದನ ಜಾನುವಾರುಗಳನ್ನು ಸಾಕಾಣಿಕೆ ಮಾಡಬೇಕೆನ್ನುವ ಮಂದಿ ಸರ್ಕಾರದ ಕಠಿಣ ನಿಬಂಧನೆಗಳನ್ನ ಪೂರೈಸಲೇಬೇಕು. ಇದೆಲ್ಲ ಪೂರೈಸಲು ಹೊರಟರೆ ಜನರು ಡೈರಿ ಕಸುಬಿನಿಂದ ವಿಮುಖರಾಗುವ ಸಾಧ್ಯತೆಯೇ ಹೆಚ್ಚು.

ಇನ್ನು ಜಾನುವಾರುಗಳಿಂದ ಉಂಟಾಗುವ ಎಲ್ಲ ರೀತಿಯ ಘನ ದ್ರವ ತ್ಯಾಜ್ಯಗಳು ಸಾವಯವ ಸಂಯುಕ್ತಗಳಿಂದ ಪರಿಸರಕ್ಕೆ ಮಾರಕವೆನಿಸುವ ಹಾನಿಯಾಗುವುದಿಲ್ಲ. ಇವೆಲ್ಲ ವಿಘಟನೆ ಆಗುವ ಸಂಯುಕ್ತಗಳು. ಇನ್ನು ರಾಸುಗಳ ಗೊಬ್ಬರ ಮತ್ತು ಗಂಜಲವನ್ನ ಸಾವಯವ ವ್ಯವಸಾಯಕ್ಕೆ ಗೊಬ್ಬರದ ಮೂಲವನ್ನಾಗಿ ಬಳಸಬಹುದು ಮತ್ತು ಇವು ಪರಿಸರಕ್ಕೆ ಪೂರಕವಾದದ್ದು. ಇನ್ನು ಇಂತಹ ಗೊಬ್ಬರಗಳಿಂದ ಬೆಳೆದ ಬೆಳೆ, ಇನ್ನಿತರ ಮೂಲದಲ್ಲಿ ಬೆಳೆದ ಬೆಳೆಗಿಂತ ಹೆಚ್ಚಿನ ಗುಣಮಟ್ಟ ಹೊಂದಿರುತ್ತವೆ. ಇಷ್ಟೆಲ್ಲ ಅನುಕೂಲತೆ ಇದ್ದರು ಇದನ್ನ ನಿಯಂತ್ರಣ ಮಾಡಲು ಸರ್ಕಾರವೇ ಮುಂದಾಗಿರೋದು ಸಂಪೂರ್ಣ ಜನವಿರೋಧಿ ನಡವಳಿಕೆ.

ಜಾನುವಾರುಗಳಿಂದ ಉತ್ಪಾದನೆ ಆಗುವ ಹಾಲು, ಹಾಲಿನ ಪದಾರ್ಥಗಳು ಗಂಭೀರವೆನಿಸುವ ಯಾವುದೇ ಹಾನಿಕಾರಕ ರಾಸಾಯನಿಕ ಹೊಂದಿಲ್ಲ. ನಗರ ಪ್ರದೇಶಗಳಲ್ಲಿ ರಾಸಾಯನಿಕ ಔಷಧ ಆಟೋಮೊಬೈಲ್ ಮತ್ತು ಇ ತ್ಯಾಜ್ಯಗಳಿಂದ ಉಂಟಾಗುವ ವಿಷಪೂರಿತ ರಾಸಾಯನಿಕಗಳಾದ ಮರ್ಕ್ಯೂರಿ, ಅರ್ಸೆನಿಕ್, ಸಲ್ಪರ್ ನಂತಹ ವಿಷಪೂರಿತ ವಸ್ತುಗಳ ಬಿಡುಗಡೆ ಮತ್ತು ಹೊರಸೂಸುವಿಕೆಯನ್ನ ಪರಿಮಿತಿ ಪರಿಶೀಲಿಸದ, ಪರಿಶೀಲನೆ ನಾಟಕವಾಡಿ, ಪರಿಸರಕ್ಕೆ ಎಂತಹುದೇ ಅಪಾಯಕಾರಿ ರಾಸಾಯನಿಕ ಹೊರಸೂಸಿ ಜನರ ಜೀವಕ್ಕೆ ಎರವಾದರು ಕಾರ್ಪೊರೇಟ್ ಕುಳಗಳಿಂದ ಅಮೇದ್ಯ ತಿಂದು ಆ ಕಂಪನಿಗಳಿಗೆ ನಿರಪೇಕ್ಷ ಪ್ರಮಾಣ ಪತ್ರ ನೀಡಿ ಜೀವ ವೈವಿದ್ಯತೆಗೆ ಧಕ್ಕೆ ಉಂಟಾಗಿ ಮಾನವನು ಸಹ ಅಸ್ತಮಾ, ಶ್ವಾಸಕೋಶಕ್ಕೆ ಸಂಬಂದಿಸಿದ ಗಂಭೀರ ಸ್ವರೂಪದ ಕಾಯಿಲೆಗೆ ತುತ್ತಾಗುವ ಅವಕಾಶ ಇದ್ದರು ಕಣ್ಮುಚ್ಚಿ ಕುಳಿತಿರುವ ಮಾಲಿನ್ಯ ನಿಯಂತ್ರಣ ಮಂಡಳಿ, ರೈತರ ವಿಚಾರದಲ್ಲಿ ಮಾತ್ರ ರಾಕ್ಷಸೀಯ ಪ್ರವೃತ್ತಿ ಮೆರೆದಿದೆ..

ಇದಕ್ಕೆ ಅನುಗುಣವಾಗಿ ಕಳೆದ ಬಾರಿ ಪಾಲ್ಗೊಳ್ಳಲು ಉದ್ದೇಶಿಸಿದ್ದ RCEP ಒಪ್ಪಂದದ ಕುರಿತಾಗಿ ಏಷ್ಯದ ಇನ್ನಿತರ ದೇಶಗಳಾದ ಜಪಾನ್, ಮಲೇಷ್ಯಾ, ಥಾಯ್ಲೆಂಡ್ ಸಿಂಗಾಪುರ ಚೀನಾ, ಮಾರಿಷಸ್, ಕೊರಿಯಾ ಇನ್ನಿತರ ರಾಷ್ಟ್ರಗಳು ಭಾರತದ ಭಾಗವಹಿಸುವಿಕೆ ಬಗ್ಗೆ ಇನ್ನು ಮುಕ್ತ ಮನಸ್ಸು ಹೊಂದಿರುವದಾಗಿ ಹೇಳಿವೆ. ಇದಕ್ಕೆ ಪೂರಕವೆಂಬಂತೆ ಸಿಂಗಾಪುರ ಸಚಿವರು ಭಾರತದ ಭಾಗವಹಿಸುವಿಕೆ ಸ್ವಾಗತ ಮಾಡುವುದಾಗಿ ಹೇಳಿದ್ದಾರೆ.
ಈ ಒಪ್ಪಂದಕ್ಕೆ ಸಹಿ ಹಾಕುವ ಭಾಗವಾಗಿ ಸರ್ಕಾರ ರೈತರಿಗೆ ಅಂಕುಶ ಹಾಕಲು ಹೊರಟಿದೆಯೆ ಅನ್ನುವ ಅನುಮಾನ ಬಾರದೆ ಇರದು.

ಕೈಯಲ್ಲಿ ಶರಣು ಕಂಕುಳಲ್ಲಿ ದೊಣ್ಣೆ ಎನ್ನುವಂತೆ ಗೋಹತ್ಯೆ ನಿಷೇಧ ,ಗೋರಕ್ಷಣೆ ಬಗ್ಗೆ ಪುಂಖಾನುಪುಂಖವಾಗಿ ಬೊಗಳೆ ಬಿಡುವ, ಅದರಿಂದಲೇ ಅಧಿಕಾರದ ಸುಖ ಅನುಭವಿಸುತ್ತಿರುವ ಮಾರ್ಜಾಲ ವೇಷದ ಬಂಡವಾಳಶಾಹಿ ಪ್ಯಾಸಿಸ್ಟ್ ಸರ್ಕಾರ ಜನಸಾಮಾನ್ಯರ ಮೇಲೆ ಗಧಾ ಪ್ರಹಾರ ನಡೆಸಲು ಹೊರಟಿದೆ..

ಪ್ರಜಾಪ್ರಭುತ್ವ ಬೊಕ್ಕ ಬೋರಲು ಬಿದ್ದು ಫ್ಯಾಸಿಸಂ ಮೆರೆಯುತ್ತಿರುವ ಕಾಲದಲ್ಲಿ, ಜನವಿರೋಧಿ ರಾಕ್ಷಸೀಯ ಪ್ರವೃತ್ತಿ ಹೊಂದಿರುವ ಪ್ಯಾಸಿಸ್ಟ್ ಆಡಳಿತ ಕೋನೆಗಾಣಿಸಲು ಬೃಹತ್ ಜನಾಂದೋಲನ ರೂಪುಗೊಂಡು ಇಂತಹ ನೀತಿಗಳನ್ನು ವಿರೋಧಿಸಬೇಕಾದದ್ದು ಸದ್ಯದ ತುರ್ತು ಅಗತ್ಯಗಳಲ್ಲೊಂದು.

  • ಡಾ. ಮಹೇಂದ್ರ ಕೆ.ಆರ್

(ತುಮಕೂರು ಜಿಲ್ಲೆಯ ಸಿರ ತಾಲೂಕಿನ ಗ್ರಾಮೀಣ ಪ್ರದೇಶದವರು, ಮೈಸೂರು ವಿಶ್ವವಿದ್ಯಾಲಯ ಮಾನಸ ಗಂಗೋತ್ರಿಯಲ್ಲಿ ಸಾವಯವ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.. ವನ್ಯಜೀವಿ ಪರಿಸರ, ಕಾಡುಮೇಡಿನ ಅಲೆದಾಟ, ಹೊಸತನದ ಹುಡುಕಾಟ, ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಉಪಕಸುಬುಗಳು,ಕತೆ ಕಾದಂಬರಿ, ಮೂಲವಿಜ್ಞಾನದ ಕುರಿತಂತೆ ಇವರಿಗೆ ಹೆಚ್ಚಿನ ಆಸಕ್ತಿ.)


ಇದನ್ನೂ ಓದಿ: Explainer: ಕೃಷಿ ಮಸೂದೆಗಳಿಂದ ರೈತರಿಗೆ ಲಾಭವಾಗಲಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಒಟ್ನಲ್ಲಿ ಸರ್ಕಾರ ರೈತರ ತಿಪ್ಪೆಗೂ ಕಂದಾಯ ಕಟ್ಟಿಸಿಕೊಳ್ಳುವ ಹಾಗಿದೆ. ಒಂದು, ಊರು ನಗರ, ಹೆದ್ದಾರಿ, ರೈಲ್ವೆ ಇದಕ್ಕೆಲ್ಲ ತಮ್ಮ ಜಮೀನು ಕೊಟ್ಟಿದ್ದೇ ರೈತರು. ಅವರು ಹಣವನ್ನು ಪಡೆದಿರಬಹದು ಕೆಲವು ಸಲ ದಾನವಾಗಿಯೂ ಕೊಟ್ಟಿರಬಹುದು.ಸರ್ಕಾರದ ಕೆಲಸಗಳಿಗೆ ಜಮೀನು ಕೊಡಲು ಇಷ್ಟವಿಲ್ಲದವರೂ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗದೆ ಬಿಟ್ಟು ಕೊಟ್ಟಿರಬಹುದು. ಹೀಗೆ ದೇಶದ ಅಭಿವೃದ್ಧಿಯಲ್ಲಿ ಹೆಚ್ಚಿನ ಪಾಲು ರೈತರಿಂದಲೇ ಆಗಿರುವಾಗ ಕಾನೂನುಗಳು ರೈತರಿಗೆ ಪೂರಕವಾಗಿರಬೇಕೇ ಹೊರತು ಮಾರಕವಾಗಬಾರದು. ಒಬ್ಬ ಡಾಕ್ಟರ್, ಇಂಜಿನಿಯರ್, ಶಿಕ್ಷಕರು ಹೀಗೆ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಇವರಿಗೆ ಪ್ರಿಯವಾದ ಕಂಪನಿಗಳು ಅವರು ತಮ್ಮ ತಮ್ಮ ದೇ ಒಂದೇ ಕೆಲಸ ಕೆಲಸ ಮಾಡಿಕೊಂಡು ಸಮೃದ್ದವಾಗಿರುತ್ತಾರೆ. ಆದರೆ ರೈತನಿಗೆ ಅವನು ಒಂದೇ ಕೆಲಸ ಅಂತಿಲ್ಲ ವ್ಯವಸಾಯದ ಜೊತೆಗೆ ಹಸು ಕೋಳಿ ಕುರಿ ಸಾಕಾಣಿಕೆ ಅದರ ಜೊತೆ ಕೂಲಿಕೆಲಸ ಎಲ್ಲಾ ಮಾಡಿದರೂ ಒಂದರಲ್ಲಿ ಆದಾಯ ಬಂದರೆ ಇನ್ನೊಂದರಲ್ಲಿ ನಷ್ಟ ಅನ್ನುವ ಸ್ಥಿತಿ. ಅದರಲ್ಲೂ ಸರ್ಕಾರ ಕೊಡುವ ಸವಲತ್ತುಗಳನ್ನು ಪಡೆಯಬೇಕೆಂದರೆ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಕಛೇರಿಗಳಿಗೆ ಅಲೆಯಬೇಕು. ಇನ್ನೂ ಸರ್ಕಾರ ಇಂತಹ ಕಾನೂನುಗಳನ್ನು ತಂದರೆ ರೈತ ಬೆಳೆ ಬೆಳೀಬೇಕೋ ಇಲ್ಲ ತನ್ನ ಕಸುಬಿಗೆ ಸರ್ಕಾರದ ಅನುಮತಿಯ ಮುದ್ರೆ ಪಡೆಯಲು ಅಧಿಕಾರಿಗಳ ಬಳಿ ಅಲೆಯಬೇಕೋ?. ಲಾಸೋ ಲಾಭವೋ ಪ್ರಾಮಾಣಿಕವಾಗಿ ದುಡಿಮೆಗೆ ಹೊಂದಿಕೊಂಡಿರುವ ರೈತನಿಗೆ ದುಡೀಲಿಕ್ಕಾದರೂ ಬಿಡಬೇಕು. ಸವಲತ್ತು ಹಾಗೂ ಕಾನೂನುಗಳ ಹೆಸರಿನಿಂದ ಅವನ ದುಡಿಮೆಗೆ ಕಲ್ಲು ಹಾಕಬಾರದು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...