Homeಮುಖಪುಟನಟಿ ಮೇಘನಾ ರಾಜ್‌ಗೆ ಗಂಡು ಮಗು ಜನನ : ಉಭಯ ಕುಟುಂಬಗಳಲ್ಲಿ ಸಂಭ್ರಮ

ನಟಿ ಮೇಘನಾ ರಾಜ್‌ಗೆ ಗಂಡು ಮಗು ಜನನ : ಉಭಯ ಕುಟುಂಬಗಳಲ್ಲಿ ಸಂಭ್ರಮ

- Advertisement -
- Advertisement -

ದಿವಂಗತ ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ಅವರ ಪತ್ನಿ, ನಟಿ ಮೇಘನಾ ರಾಜ್ ಇಂದು ಬೆಳಗ್ಗೆ‌ ಗಂಡು ಮಗುವಿಗೆ ಜನ್ಮನೀಡಿದ್ದಾರೆ. ಉಭಯ ಕುಟುಂಬಗಳಲ್ಲಿ ಸಂಭ್ರಮ ಮನೆಮಾಡಿದ್ದು, ಸಂತಸ ಹಂಚಿಕೊಂಡಿದ್ದಾರೆ.

ಇಂದು ಬೆಳಗ್ಗೆ 11:07ಕ್ಕೆ ಬೆಂಗಳೂರಿನ ಕೆ.ಆರ್‌. ರಸ್ತೆಯ ಅಕ್ಷಯ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ 2017 ರ ಇದೇ ದಿನ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ದಿನವೇ ಸರ್ಜಾ ಮತ್ತು ಅವರ ಸುಂದರ್‌ರಾಜ್‌ ಕುಟುಂಬಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಸರ್ಜಾ ಕುಟುಂಬಕ್ಕೆ ಜೂನಿಯರ್ ಸರ್ಜಾ ಆಗಮನವಾಗಿದೆ.

ಚಿರಂಜೀವಿ ಸರ್ಜಾ ತಮ್ಮ ನಟ ಧ್ರುವ ಸರ್ಜಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ‘ಗಂಡು ಮಗು, ಜೈ ಹನುಮಾನ್‌’ ಎಂದು ಸ್ಟೇಟಸ್ ಅಪ್‌ಡೇಟ್‌ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಮಗುವಿನ ಪೋಟೋಗಳನ್ನು ಶೇರ್ ಮಾಡುತ್ತಾ ಸಂತಸ ಹಂಚಿಕೊಂಡಿದ್ದಾರೆ. ಧ್ರುವ ಸರ್ಜಾ ಅವರು ಆಸ್ಪತ್ರೆಯ ವಾರ್ಡ್‌ ಬಾಗಿಲಲ್ಲಿ ಮಗು ಎತ್ತಿಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಕನ್ನಡಿಗರ ಮನಸೆಳೆದಿದ್ದ ಚಿರಂಜೀವಿ ಸರ್ಜಾ ನಟನೆಯ ’ಅಮ್ಮಾ ಐ ಲವ್‌ ಯೂ’

ನಿನ್ನೆ ತಾನೇ ಮೇಘನಾ ರಾಜ್ ಅವರನ್ನು ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಧ್ರುವ ಸರ್ಜಾ ಅಣ್ಣನ ಮಗುವಿಗಾಗಿ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ತೊಟ್ಟಿಲನ್ನು ಖರೀದಿಸಿದ್ದರು. ಕುಟುಂಬ ಸದಸ್ಯರು ಆಸ್ಪತ್ರೆಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.

ಇತ್ತಿಚೆಗೆ ನಟಿ ಮೇಘನಾ ರಾಜ್‌ಗೆ ನಡೆದ ಸೀಮಂತ ಕಾರ್ಯಕ್ರಮದ ಚಿತ್ರಗಳು, ವೀಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಅನೇಕ ಕಲಾವಿದರು ಮೇಘನಾ ಕೈಹಿಡಿದು ಚಿರು ನಡೆಯುತ್ತಿರುವಂತೆ ಚಿತ್ರಿಸಿದ್ದ ಚಿತ್ರಗಳು ಜನರ ಕಣ್ಣಾಲಿಗಳನ್ನು ತುಂಬಿಸಿದ್ದವು.

ಕೆಲ ತಿಂಗಳ ಹಿಂದೆ ನಟ ಚಿರಂಜೀವಿ ಸರ್ಜಾ ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಆ ಸಮಯದಲ್ಲಿ ನಟಿ ಮೇಘನಾ ಐದು ತಿಂಗಳ ಗರ್ಭಿಣಿಯಾಗಿದ್ದರು.


ಇದನ್ನೂ ಓದಿ: ತೆಲಂಗಾಣ ಪ್ರವಾಹ: ತೆಲುಗು ಚಿತ್ರ ರಂಗದಿಂದ ನೆರವಿನ ’ಮಹಾಮಳೆ’!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...