Homeಮುಖಪುಟಗಡ್ಡ ಬಿಟ್ಟಿದ್ದಕ್ಕೆ ಸಬ್‌ಇನ್ಸ್‌‌ಪೆಕ್ಟರನ್ನು ಅಮಾನತು ಮಾಡಿದ ಉತ್ತರ ಪ್ರದೇಶ ಸರ್ಕಾರ!

ಗಡ್ಡ ಬಿಟ್ಟಿದ್ದಕ್ಕೆ ಸಬ್‌ಇನ್ಸ್‌‌ಪೆಕ್ಟರನ್ನು ಅಮಾನತು ಮಾಡಿದ ಉತ್ತರ ಪ್ರದೇಶ ಸರ್ಕಾರ!

ಉತ್ತರ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಮೂರು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಇಂತ್ಸಾರ್‌ ಅಲಿ, ತಾನು ಗಡ್ಡ ಇಟ್ಟುಕೊಳ್ಳಲು ಅನುಮತಿ ಅರ್ಜಿ ಸಲ್ಲಿಸಿದ್ಧೇನೆ ಎಂದಿದ್ದಾರೆ

- Advertisement -
- Advertisement -

ಅನುಮತಿಯಿಲ್ಲದೆ ಗಡ್ಡವನ್ನು ಇಟ್ಟುಕೊಂಡಿದ್ದಾರೆಂದು ಆರೋಪಿಸಿ ಉತ್ತರ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಬ್‌ ಇನ್ಸ್‌‌ಪೆಕ್ಟರ್ ಇಂತ್ಸಾರ್‌ ಅಲಿಯನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಮೂರು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಇಂತ್ಸಾರ್‌ ಅಲಿ‌, ತಾನು ಗಡ್ಡ ಇಟ್ಟುಕೊಳ್ಳಲು ಅನುಮತಿ ಅರ್ಜಿ ಸಲ್ಲಿಸಿದ್ಧೇನೆ, ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಬೀದಿ ಅಲೆಯುತ್ತಿದ್ದವ ಬಿಜೆಪಿ ರಾಜ್ಯಾಧ್ಯಕ್ಷ- ಸಿದ್ದರಾಮಯ್ಯ ವ್ಯಂಗ್ಯ

ಘಟನೆಯ ಬಗ್ಗೆ ಮಾತನಾಡಿದ ಬಾಗಪತ್ ಎಸ್‌ಪಿ ಅಭಿಷೇಕ್ ಸಿಂಗ್, ಪೊಲೀಸ್ ಕೈಪಿಡಿಯ ಪ್ರಕಾರ ಸಿಖ್ಖರಿಗೆ ಮಾತ್ರ ಗಡ್ಡವನ್ನು ಇಟ್ಟುಕೊಳ್ಳಲು ಅವಕಾಶವಿದ್ದು, ಉಳಿದ ಎಲ್ಲ ಪೊಲೀಸರು ಕ್ಲೀನ್ ಶೇವ್ ಮಾಡಬೇಕು ಎಂದು ನಿಯಮವಿದೆ ಎಂದು ಹೇಳಿದ್ದಾರೆ.

“ಯಾವುದೇ ಪೊಲೀಸ್ ಸಿಬ್ಬಂದಿ ಗಡ್ಡ ಇಟ್ಟುಕೊಳ್ಳಲು ಬಯಸಿದರೆ, ಅವನು ಅದಕ್ಕೆ ಅನುಮತಿ ಪಡೆಯಬೇಕು. ಇಂತ್ಸಾರ್‌ ಅಲಿಯನ್ನು ಪದೇ ಪದೇ ಅನುಮತಿ ಪಡೆಯಲು ಕೇಳಲಾಗುತ್ತಿತ್ತು ಆದರೆ ಅವರು ಅದನ್ನು ಪಾಲಿಸಲಿಲ್ಲ ಮತ್ತು ಗಡ್ಡವನ್ನು ಅನುಮತಿಯಿಲ್ಲದೆ ಇಟ್ಟುಕೊಂಡಿದ್ದರು ” ಎಂದು ಎಸ್ಪಿ ಆರೋಪಿಸಿದ್ದಾರೆ.

ಇದನ್ನೂ ಓದಿ: ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್‌ಗೆ ತಪ್ಪದ ಕಂಟಕ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಪ್ರಕರಣ: ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣಗೆ ಮಧ್ಯಂತರ ಜಾಮೀನು

0
ಮನೆಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎಚ್.ಡಿ ರೇವಣ್ಣ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ಗುರುವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 47ರ ಹರೆಯದ ಮನೆ ಕೆಲಸದಾಕೆಗೆ ಲೈಂಗಿಕ...