Homeಕರ್ನಾಟಕಉಳವಿಯಲ್ಲಿ ಚನ್ನಬಸವಣ್ಣನ ದಿಟ್ಟ ಹೋರಾಟ : ಶರಣ ಚಳುವಳಿಯ ಮಹತ್ವದ ಮೈಲಿಗಲ್ಲು!

ಉಳವಿಯಲ್ಲಿ ಚನ್ನಬಸವಣ್ಣನ ದಿಟ್ಟ ಹೋರಾಟ : ಶರಣ ಚಳುವಳಿಯ ಮಹತ್ವದ ಮೈಲಿಗಲ್ಲು!

ಕಲ್ಯಾಣ ಕ್ರಾಂತಿಯ ನಂತರ ನೆಲೆ ತಪ್ಪಿದ ಶರಣರು ಗುಂಪು ಗುಂಪಾಗಿ ಎಲ್ಲೆಲ್ಲೊ ಚದುರಿ ಹೋಗುತ್ತಾರೆ. ಬಸವಣ್ಣನ ಸೋದರಳಿಯ ಚನ್ನಬಸವಣ್ಣ ತನ್ನ ತಾಯಿ ನಾಗಲಾಂಬಿಕೆ ಮತ್ತು ಶರಣ ತಂಡವೊಂದರೊಂದಿಗೆ ಜೋಯಿಡಾದ ದಟ್ಟ ಅರಣ್ಯದ ಮಧ್ಯದ ಉಳವಿಗೆ ಬರುತ್ತಾರೆ.

- Advertisement -
- Advertisement -

ಹಚ್ಚ ಹಸಿರು ಕಾನನ-ಗಿರಿ-ತೊರೆಗಳ ಅನನ್ಯ ಪ್ರಕೃತಿ ಸೌಂದರ್ಯದ ಮಡಿಲಲ್ಲಿರುವ ಉತ್ತರಕನ್ನಡದ ಜೋಯಿಡಾ ತಾಲ್ಲೂಕಿನ ‘ಉಳವಿ’ 12ನೇ ಶತಮಾನದಲ್ಲಾದ ಶರಣ ಚಳುವಳಿಯ ಅಚ್ಚಳಿಯದ ಗುರುತುಗಳಲ್ಲೊಂದು. ಕಾರವಾರದಿಂದ 75 ಕಿ.ಮೀ ದೂರದಲ್ಲಿರುವ ಉಳವಿಯನ್ನು ಕಾಳಿ ನದಿ ದಾಟಿ ತಲುಪಬಹುದು; ರಸ್ತೆ ಮೂಲಕವಾದರೆ ದಾಂಡೇಲಿಯಿಂದ 11 ಕಿ.ಮೀ ಅಂತರದಲ್ಲಿರುವ ಪಾಟೋಲಿ ಕ್ರಾಸ್‍ಗೆ ಬಂದರೆ, ಎರಡು ಮಾರ್ಗಗಳಿವೆ. ‘ಉಳವಿ’ ಎಂದರೆ ‘ನಾನು ಇಲ್ಲಿ ಉಳಿಯುವೆ’ ಎಂದರ್ಥ ಎಂಬ ಅಭಿಪ್ರಾಯವಿದೆ.

PC : ಪ್ರಜಾವಾಣಿ, (ಬಸವಣ್ಣ)

ಶೋಷಣೆರಹಿತ ಸಮಸಮಾಜದ ಕನಸು ಕಂಡ ಸಾಮಾಜಿಕ ಹೋರಾಟದ ಹರಿಕಾರ ಬಸವಣ್ಣನವರ ಅಕ್ಕ ನಾಗಲಾಂಬಿಕೆಯ ಮಗ ಚನ್ನಬಸವಣ್ಣಾದಿ ಶರಣರು ವೈದಿಕಶಾಹಿಯ ಕ್ರೌರ್ಯ ತಾಳಲಾರದೆ ವಚನ ಸಾಹಿತ್ಯ ಸಂರಕ್ಷಣೆಗಾಗಿ ಈ ಕಾಡು-ಮೇಡಿನ ಉಳವಿಗೆ ಬಂದುಳಿದಿದ್ದರು. ಹಾಗಾಗಿ ಉಳವಿ ಎಂಬ ಹೆಸರು ಬಂತೆನ್ನಲಾದ ಈ ಊರಿಗೆ ಮೊದಲು ‘ವೃಶಾಪುರ’ ಎನ್ನಲಾಗುತ್ತಿತ್ತಂತೆ. ಪ್ರಪಂಚದಲ್ಲೇ ಮೊಟ್ಟಮೊದಲು ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತೆ ತತ್ವದರ್ಶನಗಳು ಹುಟ್ಟಿಕೊಂಡ ದಿನಮಾನವೆಂದರೆ ಅದು ಶರಣರ ಯುಗ! ಕಾಯಕ ವರ್ಗ ಸಮಾನತೆಯ ಬದುಕಿಗಾಗಿ ಒಂದೆಡೆ ಸೇರಿ ವೈಚಾರಿಕ-ವೈಜ್ಞಾನಿಕವಾಗಿ ಸತ್ಯ ಶೋಧಿಸುತ್ತಲೇ ಅಸಮಾನತೆಯ ವರ್ಣ ವ್ಯವಸ್ಥೆ, ಅಮಾನವೀಯ ಜಾತಿ ವ್ಯವಸ್ಥೆ, ಅಜ್ಞಾನದ ಲಿಂಗತಾರತಮ್ಯ ಹಾಗೂ ಅವಿವೇಕದ ಕಂದಾಚಾರಗಳಂಥ ವೈದಿಕ ಸ್ಥಾಪಿತ ಹೇಯ-ಬರ್ಬರ ವ್ಯವಸ್ಥೆಯ ವಿರುದ್ಧ ಬಂಡೆದ್ದು ಚಳುವಳಿ ರೂಪಿಸಿದ್ದ ಕ್ರಾಂತಿಕಾರಿ ಕಾಲವದು. ಇಂಥದೊಂದು ಕ್ರಾಂತಿ ವಿಶ್ವದಲ್ಲೇ ಮೊದಲು ನಡೆದದ್ದು ಕನ್ನಡ ನಾಡಲ್ಲಿ.

ಅಭಿವ್ಯಕ್ತಿ ಸ್ವಾತಂತ್ರ್ಯದ ಅನುಭವ ಮಂಟಪ ನಿರ್ಮಿಸಿ ಬಸವಣ್ಣ ಅದರ ನಾಯಕತ್ವವನ್ನು ತಳಸಮುದಾಯಗಳಿಗೆ ಕೊಡುತ್ತಾರೆ. 770 ಶರಣರ(ಪ್ರತಿನಿಧಿಗಳ) ಈ ಅನುಭವ ಪಂಟಪ ಪ್ರಪಂಚದ ಮೊದಲ ಪಾರ್ಲಿಮೆಂಟ್. ಈ ಪಾರ್ಲಿಮೆಂಟ್‍ನ ಮೊದಲ ಸ್ಪೀಕರ್(ಶೂನ್ಯ ಪೀಠಾಧ್ಯಕ್ಷ) ದಲಿತ ಅಲ್ಲಮಪ್ರಭು! ಅಲ್ಲಿ ಸಮಗಾರ ಹರಳಯ್ಯ, ಮಡಿವಾಳ ಮಾಚಯ್ಯ, ಮಾದಾರ ದೊಳಯ್ಯ, ಬ್ರಾಹ್ಮಣ ಮಧುವರಸ, ಚನ್ನಬಸವಣ್ಣ, ಕುರುಬರ ಬೊಮ್ಮಣ್ಣ, ಡೋಹರ ಕಕ್ಕಯ್ಯ…ಮುಂತಾದ ಶರಣರು ಮತ್ತು ಮಹಿಳಾ ಶರಣೆಯರಾದ ಅಕ್ಕಮಹಾದೇವಿ, ಗಂಗಾಂಬಿಕೆ, ನೀಲಾಂಬಿಕೆ, ಸೂಳೆಸಂಕವ್ವ, ಸತ್ಯಕ್ಕ ಹೀಗೆ ಹಲವು ಜಾತಿಯ ಶರಣ-ಶರಣೆಯರು ಸೇರಿ ಸಮಾಜದ ಗುಣಾವಗುಣ, ನಾಡಿನ ಸಮಸ್ಯೆ, ತಮ್ಮ ಕಾರ್ಯನಿರತ ಅನುಭವಗಳನ್ನೆಲ್ಲ ಗಂಭೀರವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು. ವಿಶ್ವದ ಯಾವ ದೇಶದಲ್ಲೂ ಸಂವಿಧಾನವೇ ರಚನೆಯಾಗದ ಸಂದರ್ಭದಲ್ಲಿ ದಲಿತರು, ಹಿಂದುಳಿದವರು ಮತ್ತು ಮಹಿಳೆಯರು ಸಮಾನತೆ, ಸ್ವಾತಂತ್ರ್ಯ, ಸೋದರತೆ, ಮೀಸಲಾತಿ, ಧಾರ್ಮಿಕ ಹಕ್ಕುಗಳ ಬಗೆಗೆ ಎಲ್ಲ ವೈಚಾರಿಕ-ವೈಜ್ಞಾನಿಕ ವಚನ ರಚಿಸಿದ್ದು ಅಚ್ಚಳಿಯದೆ ಐತಿಹಾಸಿಕ ದಾಖಲೆಯೇ ಸರಿ!

ವರ್ಣ ವ್ಯವಸ್ಥೆಯ ಕಟ್ಟಕಡೆಯ ಅಸ್ಪೃಶ್ಯ ದಲಿತ ಸಮುದಾಯದ ಸಮಗಾರ ಹರಳಯ್ಯ ಕೂಡ ಈ ವ್ಯವಸ್ಥೆಯಲ್ಲಿ ಲಿಂಗ ದೀಕ್ಷೆ ಪಡೆಯುತ್ತಾರೆ; ಬಿಜ್ಜಳನ ಆಸ್ಥಾನದ ಮಧುವರಸ ತನ್ನ ಪೂರ್ವಿಕರು ಮಾಡಿದ ಮೋಸ-ವಂಚನೆ ಗೊತ್ತಾಗಿ ಬಸವಣ್ಣನ ಬಳಿ ಬಂದು ಲಿಂಗವಂತನಾಗುತ್ತಾನೆ. ಇದು ಜಾತಿ ವಿನಾಶದ ನಾಂದಿಗೆ ಸುಸಂದರ್ಭವೆಂದು ಬಗೆದ ಬಸವಣ್ಣ ಮತ್ತು ಶರಣರು ಮಧುವರಸನ ಮಗಳು ಕಲ್ಯಾಣವತಿ ಮತ್ತು ಹರಳಯ್ಯನ ಮಗ ಶೀಲವಂತನಿಗೆ ಮದುವೆ ಮಾಡಿಸಲು ಮುಂದಾಗುತ್ತಾರೆ.

PC : ಬಸವ ಸೇನೆ, (ಚನ್ನಬಸವಣ್ಣ)

ಇದು ಕರ್ಮಠ ಮನುವಾದಿಗಳನ್ನು ಬೆಚ್ಚಿಬೀಳಿಸುತ್ತದೆ! ಕೆರಳಿದ ವೈದಿಕರು ಇದೊಂದು ಧರ್ಮಬಾಹಿರ, ರಾಜಧರ್ಮ ವಿರುದ್ಧದ ಮದುವೆಯೆಂದು ಗುಲ್ಲೆಬ್ಬಿಸಿ ಗಲಾಟೆ-ಹಿಂಸೆ-ರಕ್ತಪಾತಕ್ಕೆ ಪ್ರಚೋದಿಸುತ್ತಾರೆ! ರಾಜ ಬಿಜ್ಜಳ ಮತ್ತು ವೈದಿಕಶಾಹಿಯ ವಿರೋಧ, ಈ ಮಾನವಹಕ್ಕು ಮತ್ತು ಮಾನವೀಯತೆ ಪ್ರತಿಪಾದಿಸುವ ಈ ಅಂತರ್ಜಾತಿ ವಿವಾಹಕ್ಕಿದ್ದರೂ ಶರಣರು ಅಂಜದೆ-ಅಳುಕದೆ ಮದುವೆ ಮಾಡಿಮುಗಿಸುತ್ತಾರೆ. ತಮ್ಮ ಶೋಷಕ ವೃತ್ತಿಗಿದು ಗಂಡಾಂತರಕಾರಿ ಪರಿವರ್ತನೆಯೆಂದು ಭಾವಿಸಿದ ಸತಾತನವಾದಿಗಳು ಸಿಕ್ಕಸಿಕ್ಕ ಶರಣರ ಮಾರಣಹೋಮ ನಡೆಸುತ್ತಾರೆ; ವಿಭೂತಿ-ರುದ್ರಾಕ್ಷಿ-ವಚನಗಳನ್ನು ಕಂಡಲ್ಲಿ ಸುಟ್ಟುಹಾಕುತ್ತಾರೆ. ಶರಣ ಕಣ್ಣುಗಳನ್ನು ಕೀಳಿಸಿ, ಆನೆ ಕಾಲಿಗೆ ಕಟ್ಟಿ ಎಳೆಸುತ್ತಾರೆ. ಗಜ ಕಾಲುಗಳಿಂದ ನೂರಾರು ಶರಣರ ತಲೆ ತುಳಿಸಿ ಕೊಂದುಹಾಕುತ್ತಾರೆ. ಶರಣ ಸಿದ್ಧಾಂತದ ಸಂಪತ್ತಾಗಿದ್ದ ವಚನಗಳ ಉಳಿಸಲು ಶರಣರು ದೇಶಾಂತರ ಹೋಗಬೇಕಾಗಿ ಬರುತ್ತದೆ. ಇವೆಲ್ಲಾ ಶರಣರ ಬಗ್ಗೆ ಮೂಡಿರುವ ಪುರಾಣಗಳಲ್ಲಿ ದಾಖಲಾಗಿರುವ ಸಂಗತಿಗಳು.

ಕಲ್ಯಾಣ ಕ್ರಾಂತಿಯ ನಂತರ ನೆಲೆ ತಪ್ಪಿದ ಶರಣರು ಗುಂಪು ಗುಂಪಾಗಿ ಎಲ್ಲೆಲ್ಲೊ ಚದುರಿ ಹೋಗುತ್ತಾರೆ. ಬಸವಣ್ಣನ ಸೋದರಳಿಯ ಚನ್ನಬಸವಣ್ಣ ತನ್ನ ತಾಯಿ ನಾಗಲಾಂಬಿಕೆ ಮತ್ತು ಶರಣ ತಂಡವೊಂದರೊಂದಿಗೆ ಜೋಯಿಡಾದ ದಟ್ಟ ಅರಣ್ಯದ ಮಧ್ಯದ ಉಳವಿಗೆ ಬರುತ್ತಾರೆ. ಚನ್ನಬಸವಣ್ಣ ನೇತೃತ್ವದ ಶರಣರ ತಂಡ ಪಶ್ಚಿಮ ಘಟ್ಟಗಳ ದುರ್ಗಮ ಕಾಡಿನ ದಾರಿ ಹಿಡಿದ ಮೂಲ ಉದ್ದೇಶವೇ ವಿಧ್ವಂಸಕ ವೈದಿಕರಿಂದ ವಚನ ಸಾಹಿತ್ಯ ಕಾಪಾಡುವುದಾಗಿತ್ತು. ತನ್ನ 12ನೇ ವರ್ಷದಷ್ಟು ಸಣ್ಣ ವಯಸ್ಸಿನಲ್ಲೇ ಅನುಭವ ಮಂಟಪದ ಚರ್ಚಾವೇದಿಕೆಯಲ್ಲಿ ಭಾಗವಹಿಸಿದ್ದ ಹೆಗ್ಗಳಿಕೆಯ ಚನ್ನಬಸವಣ್ಣ ಅಪಾರ ವಿದ್ವತ್ತಿನ ಶರಣ. ಆಧ್ಯಾತ್ಮಿಕ ತರ್ಕ, ಸಮಾನತೆಯ ವಿಚಾರಧಾರೆ, ಪ್ರಬುದ್ಧ ವಚನ ರಚನೆಗಳ ಮೂಲಕ ಅಜ್ಞಾನ, ಅಸಮಾನತೆ, ಅಸ್ಪೃಶ್ಯತೆಯಂಥ ಸಾಮಾಜಿಕ ಅನಿಷ್ಠಗಳನ್ನು ತೊಲಗಿಸಲು ಪ್ರಯತ್ನಿಸಿದ್ದವನು. ಸಾಂಪ್ರದಾಯಿಕ ವಚನಗಳ ಪರಿಷ್ಕರಿಸಿ ಷಟ್‍ಸ್ಥಲ ವಚನ ಸಂಪ್ರದಾಯ ಶುರುಮಾಡಿದ್ದವನು. ತಮ್ಮ 24ನೇ ವಯಸ್ಸಿನಲ್ಲಿ ಚನ್ನಬಸವಣ್ಣ ಉಳವಿಯಲ್ಲೇ ಜೀವಂತ ಸಮಾಧಿಯಾದರೆಂಬ ಉಲ್ಲೇಖಗಳಿವೆ.

ಸಮಾಧಿ ಸ್ಥಳದಲ್ಲಿ ದೇವಸ್ಥಾನ ಕಟ್ಟಲಾಗಿದೆ. ಉಳವಿ ಧಾರ್ಮಿಕ ಕಾರಣಕ್ಕಾಗಷ್ಟೇ ಅಲ್ಲ, ನಿಸರ್ಗ ಸೊಬಗು, ಗುಹೆಗಳು ಮತ್ತು ನೀರ್ಗೋಲುಗಳಿಂದ ಆಕರ್ಷಣೀಯ ತಾಣವೂ ಆಗಿದೆ. ಉಳವಿ ಸುತ್ತಮುತ್ತ ಚನ್ನಬಸವ ಜಲಪಾತ, ವಚನಕಾರ ಹರಳಯ್ಯ ಚಿಲುಮೆ, ಶರಣೆ ಅಕ್ಕನಾಗಮ್ಮ ಗವಿ, ರುದ್ರಾಕ್ಷಿ ಮಂಟಪ, ವಿಭೂತಿ ಕಣಜ, ಆಕಳ ಗವಿ, ಬೊಮ್ಮಯ್ಯ ನದಿ, ಮಹಾಗವಿ ಮತ್ತು ಪಂಚಲಿಂಗೇಶ್ವರ ಗವಿಗಳಿವೆ. ಸಮಾನತೆಗಾಗಿ ಶ್ರಮಿಸಿದ ಶರಣಚಳವಳಿಯನ್ನು ಮುಗಿಸಿದ ವೈದಿಕರ ಪಾತಕ ಪುರಾಣ ಹೇಳುವ ರೂಪಕಗಳಾಗಿ ನಿಂತಿವೆ.


ಇದನ್ನೂ ಓದಿ: ವಚನ ಚಳವಳಿಯನ್ನು ಪ್ರತಿಫಲಿಸುವ ಲಿಂಗಾಯತ ರಾಜಕೀಯ ಹುಟ್ಟಬಲ್ಲದೇ?
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...