ಮಧ್ಯ ಮುಂಬೈಯ ನಾಗ್ಬಾಡದಲ್ಲಿರುವ ಸಿಟಿ ಸೆಂಟರ್ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಪಕ್ಕದಲ್ಲಿರುವ 55 ಅಂತಸ್ತಿನ ಕಟ್ಟಡದಲ್ಲಿನ ಸುಮಾರು 3,500 ಜನರನ್ನು ಹತ್ತಿರದ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಹತ್ರಾಸ್ ಅತ್ಯಾಚಾರ ಸಂತ್ರಸ್ಥೆಯ ತಂದೆಗೆ ಧಮಕಿ ಹಾಕುತ್ತಿರುವ ಜಿಲ್ಲಾಧಿಕಾರಿ ವಿಡಿಯೋ ವೈರಲ್
ಗುರುವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯನ್ನು ನಂದಿಸುವ ಪ್ರಯತ್ನಗಳು ಇಂದು ಬೆಳಿಗ್ಗೆ ತನಕ ಮುಂದುವರೆದವು. ಬೆಂಕಿಗೆ ಕಾರಣ ಏನೆಂದು ತನಿಖೆ ನಡೆಸಲಾಗುತ್ತಿದ್ದು ಘಟನೆಯಲ್ಲಿ ಯಾವ ನಾಗರಿಕರಿಗೂ ಗಾಯವಾಗಿಲ್ಲ ಎಂದು ವರದಿಯಾಗಿದೆ. ಆದರೆ ಬೆಂಕಿಯನ್ನು ನಿಯಂತ್ರಿಸುವ ವೇಳೆ ಅಗ್ನಿಶಾಮಕದ ದಳದ ಇಬ್ಬರು ಸಿಬ್ಬಂದಿಗೆ ಗಾಯವಾಗಿದೆ ಎನ್ನಲಾಗಿದೆ.
#WATCH: Firefighting operation underway at a mall in Nagpada area in Mumbai where a fire broke out last night.
It has been declared a level-5 fire. #Maharashtra pic.twitter.com/YDpgpRHXcm
— ANI (@ANI) October 23, 2020
ಮಾಲ್‌ನ ಎರಡನೇ ಹಾಗೂ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳದಲ್ಲಿ ಇಪ್ಪತ್ನಾಲ್ಕು ಅಗ್ನಿಶಾಮಕ ಟ್ರಕ್‌ಗಳು ಇದ್ದು, ಮುಂಬೈಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಶಶಿಕಾಂತ್ ಕೇಲ್ ಸೇರಿದಂತೆ ಸುಮಾರು 250 ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಮತ್ತು ಇತರ ಅಧಿಕಾರಿಗಳು ಗುರುವಾರ ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ’ಓ ಭರತವರ್ಷದ ನಾಯಕರೆ, ಅವಮಾನದಲ್ಲೇ ಮುಳುಗಿ ಸಾಯಿರಿ’; ಜಿಗ್ನೇಶ್ ಮೇವಾನಿ ಆಕ್ರೋಶ


