Homeಚಳವಳಿ’ಹೋರಾಟಕ್ಕಾಗಿ ಮತ್ತೆ ಬೀದಿಗೆ ಇಳಿಯಲಿದ್ದೇವೆ’: ಸುಪ್ರೀಂ ತೀರ್ಪಿಗೆ ಖಂಡನೆ

’ಹೋರಾಟಕ್ಕಾಗಿ ಮತ್ತೆ ಬೀದಿಗೆ ಇಳಿಯಲಿದ್ದೇವೆ’: ಸುಪ್ರೀಂ ತೀರ್ಪಿಗೆ ಖಂಡನೆ

- Advertisement -
- Advertisement -

ಸ್ವರಾಜ್ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್, ಸುಪ್ರೀಂಕೋರ್ಟ್ ವಕೀಲ ಪ್ರಶಾಂತ್‌ ಭೂಷಣ್ ಹಾಗೂ ಲೇಖಕಿ ಅರುಂಧತಿ ರಾಯ್ ಸೇರಿಂದತೆ ಹಲವಾರು ಸಾಮಾಜಿಕ ಹೋರಾಟಗಾರರು “ಹೋರಾಟಕ್ಕಾಗಿ ಮತ್ತೆ ಬೀದಿಗೆ ಇಳಿಯಲಿದ್ದೇವೆ” ಎಂದು ಘೋಷಿಸಿದರು.

ಪ್ರತಿಭಟನೆಗಾಗಿ ಸಾರ್ವಜನಿಕ ಪ್ರದೇಶವನ್ನು ಆಕ್ರಮಿಸಿಕೊಳ್ಳುವಂತಿಲ್ಲ ಹಾಗೂ ಪ್ರತಿಭಟನೆಯನ್ನು ನಿಯೋಜಿತ ಸ್ಥಳದಲ್ಲಿ ನಡೆಸಬೇಕು ಎಂದು ಈ ತಿಂಗಳ ಆರಂಭದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ”ಕನ್ಸರ್ನ್‌ಡ್ ಸಿಟಿಝನ್ಸ್ ಕಲೆಕ್ಟಿವ್” ನಾಗರಿಕರ ತಂಡ ಗುರುವಾರ ಹೊಸದಿಲ್ಲಿಯ ಪ್ರೆಸ್‌ಕ್ಲಬ್‌‌ ಆಫ್‌‌ ಇಂಡಿಯಾದಲ್ಲಿ ನಡೆಸಲಾಗಿದ್ದ ಚರ್ಚೆಯಲ್ಲಿ ಖಂಡಿಸಿದೆ.

ಇದನ್ನೂ ಓದಿ: ಶಾಹೀನ್ ಬಾಗ್: ನಿರ್ದಿಷ್ಟ ಸ್ಥಳಗಳಲ್ಲಿ ಮಾತ್ರ ಪ್ರತಿಭಟಿಸಬೇಕು ಎಂದ ಸುಪ್ರೀಂ

ಸಾಂಧರ್ಬಿಕ ಚಿತ್ರ

ತಂಡದಲ್ಲಿ ಸಫಾಯಿ ಕರ್ಮಚಾರಿ ಆಂದೋಲನದ ಸ್ಥಾಪಕ ಹಾಗೂ ಸಂಚಾಲಕ ಬೆಜವಾಡ ವಿಲ್ಸನ್, ಸಾಮಾಜಿಕ ಹೋರಾಟಗಾರ್ತಿ, ಜೆಎನ್‌ಯು ಪ್ರಾಧ್ಯಾಪಕಿ ನಿವೇದಿತಾ ಮೆನನ್, ಸುಪ್ರೀಂ ಕೋರ್ಟ್ ವಕೀಲ ಸಂಜಯ್ ಹೆಗ್ಡೆ, ನಾಗರಿಕ ಹಕ್ಕು ಸಂಘಟನೆ ಯುನೈಟೆಡ್ ಎಗೈನ್ಸ್‌ಟ್ ಹೇಟ್‌ನ ಸಹ ಸಂಸ್ಥಾಪಕ ನದೀಮ್ ಖಾನ್ ಮೊದಲಾದವರು ಇದ್ದರು.

“ಕಳೆದ ಕೆಲವು ವರ್ಷಗಳಿಂದ ಭಿನ್ನಾಭಿಪ್ರಾಯವನ್ನು ದಮನಗೊಳಿಸಲಾಗುತ್ತಿದೆ. ಆದರೆ ನನ್ನ ಭರವಸೆ, ನಮ್ಮ ಪೀಳಿಗೆಯವರು ಹೋರಾಡಿದರು, ಭವಿಷ್ಯದ ಪೀಳಿಗೆಗಳು ಸಹ ಇದನ್ನು ಅನುಸರಿಸುತ್ತವೆ ಎಂಬುದಾಗಿದೆ” ಎಂದು ಸಂಜಯ್ ಹೆಗ್ಡೆ ಹೇಳಿದರು.

ಇದನ್ನೂ ಓದಿ: ಶಾಹಿನ್ ಬಾಗ್‍ಗಳು ಬಂಧುತ್ವ ಬೆಸೆಯುತ್ತಿವೆ

ಲೇಖಕಿ ಅರುಂಧತಿ ರಾಯ್ ಮಾತನಾಡಿ, “ಜನರು ನಿರಂತರವಾಗಿ ದ್ವೇಷದಿಂದ ತುಂಬಿದ ವಾತಾವರಣದಲ್ಲಿ ವಾಸಿಸುವುದು ಅವಮಾನಕರವಾಗಿದೆ” ಎಂದರು.

ಸಾಂಧರ್ಬಿಕ ಚಿತ್ರ

ಜೆಎನ್‌ಯುನಲ್ಲಿ ನಜೀಬ್ ಅಹ್ಮದ್ ಅವರ ನಾಪತ್ತೆ ಪ್ರಕರಣದಲ್ಲಿ ಆರೋಪಿಗಳ ಮೊಬೈಲ್ ಪ್ಯಾಟರ್ನ್ ಲಾಕ್ ತೆರೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿಕೊಂಡ ಅದೇ ಪೊಲೀಸರು ಈಗ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನೂರಾರು ಸಾಮಾಜಿಕ ಕಾರ್ಯಕರ್ತರ ಫೋನ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ ಎಂದು ನದೀಂ ಖಾನ್ ಹೇಳಿದರು.

ಜನರು ಶಾಂತಿಯುತವಾಗಿ ನಡೆಸುತ್ತಿದ್ದ ಪ್ರತಿಭಟನೆಯನ್ನು ನಿಲ್ಲಿಸಲು ಪ್ರಯತ್ನಿಸಿದ ಪೊಲೀಸರು ಹಾಗೂ ಸರಕಾರದ ಕ್ರಮವನ್ನು ತಂಡವು ತೀವ್ರವಾಗಿ ಟೀಕಿಸಿತು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪಾಕಿಸ್ತಾನದ ಪ್ರತಿಭಟನೆಯೊಂದರಲ್ಲಿ ಭಾರತದ ಬಾವುಟವನ್ನು ಬಳಸಲಾಗಿದೆಯೇ?

ಸಾಂಧರ್ಬಿಕ ಚಿತ್ರ

‘‘ಪ್ರಜಾಪ್ರಭುತ್ವ ಹಾಗೂ ಭಿನ್ನಾಭಿಪ್ರಾಯ ಜೊತೆ ಜೊತೆಯಲ್ಲಿ ಸಾಗಬೇಕು. ಆದರೆ, ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಪ್ರತಿಭಟನೆ ನಿಯೋಜಿತ ಪ್ರದೇಶದಲ್ಲಿ ಮಾತ್ರ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ದಂಡಿ ಯಾತ್ರೆ ನಿಯೋಜಿತ ಪ್ರದೇಶದಲ್ಲಿ ನಡೆದಿದೆಯೇ ? ಜಲಿಯನ್ ವಾಲಾಬಾಗ್ ಪ್ರತಿಭಟನೆ ನಿಯೋಜಿತ ಪ್ರದೇಶದಲ್ಲಿ ನಡೆದಿದೆಯೇ ?’’ ಎಂದು ತಂಡ ಬಿಡುಗಡೆ ಮಾಡಿದ ಜಂಟಿ ಹೇಳಿಕೆ ತಿಳಿಸಿದೆ.

ಪ್ರತಿಭಟನೆ ಪ್ರಜಾಪ್ರಭುತ್ವದ ತಿರುಳು. ಈ ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕನ್ನು ಅಪರಾಧೀಕರಣಗೊಳಿಸುವ ಮೂಲಕ ನಮ್ಮ ಹಕ್ಕನ್ನು ನಿಗ್ರಹಿಸುವ ಎಲ್ಲ ಪ್ರಯತ್ನದ ವಿರುದ್ಧ ನಾವು ಹೋರಾಟ ನಡೆಸಲಿದ್ದೇವೆ ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ದೇಹಕ್ಕೆ ಕಬ್ಬಿಣದ ಮುಳ್ಳುತಂತಿ ಸುತ್ತಿಕೊಂಡು ಅತ್ಯಾಚಾರದ ವಿರುದ್ಧ ಪ್ರತಿಭಟನೆ?- ವಾಸ್ತವವೇನು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...