ಬಿಜೆಪಿ ಆಳ್ವಿಕೆಯಲ್ಲಿ ದೇಶಾದ್ಯಂತ ಮಹಿಳೆಯರ ಮೇಲೆ ಅಪರಾಧಗಳು ಹೆಚ್ಚುತ್ತಿರುವುದನ್ನು ವಿರೋಧಿಸಿ ದೇಹಕ್ಕೆ ಕಬ್ಬಿಣದ ಮುಳ್ಳುತಂತಿ ಸುತ್ತಿಕೊಂಡ ಈ ಮಹಿಳೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದು ನಿಜವೆ ಎಂಬುದನ್ನು ಪರಿಶೀಲಿಸೋಣ.

ಪೋಸ್ಟ್‌ನ ಆರ್ಕೈವ್ ಮಾಡಲಾದ ಆವೃತ್ತಿ ಇಲ್ಲಿದೆ.

ಈ ಫೋಟೊವನ್ನು ರಿವರ್ಸ್‌ ಇಮೇಜ್ ಸರ್ಚ್ ಮಾಡಿದಾಗ ಅದೇ ಮಹಿಳೆ, ಅದೇ ಶೈಲಿ ಉಡುಪು ತೊಟ್ಟ, ಆದರೆ ವಿಭಿನ್ನ ಭಂಗಿಯಲ್ಲಿರುವ ಫೋಟೊವೊಂದು ವೆಬ್‌ಸೈಟ್‌ ಒಂದರಲ್ಲಿ ಕಂಡುಬಂದಿದೆ. ವೆಬ್‌ಸೈಟ್‌ ವಿವರಣೆ ಪ್ರಕಾರ ಶ್ರೀಲಂಕಾ ಮಹಿಳೆಯು ಪಾಕ್ ಜಲಸಂಧಿ ಮೂಲದ ಒಸರಿಯಾ ಶೈಲಿಯ ಉಡುಪನ್ನು ಪ್ರದರ್ಶಿಸುತ್ತಿದ್ದಾರೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಹುಡುಕಾಡಿದಾಗ, ಶ್ರೀಲಂಕಾದ ಯೂಟ್ಯೂಬ್ ಚಾನೆಲ್‌ ಒಂದು ಇದೇ ವಿಡಿಯೋವನ್ನು ಒಳಗೊಂಡಿದೆ. ವಿಡಿಯೋ ವಿವರಣೆಯಲ್ಲಿ “ಶ್ರೀಲಂಕಾದಲ್ಲಿ ಪ್ರೇಮಿಗಳ ದಿನ” ಎಂದು ಬರೆಯಲಾಗಿದೆ. ಈ ವಿಡಿಯೋ 13, ಫೆಬ್ರವರಿ 2020 ರಲ್ಲಿ ಅಪ್‌ಲೋಡ್‌ ಆಗಿದೆ.

ಇದೇ ಮಹಿಳೆಯ ಇದೇ ವೇಷಭೂಷಣದ ಚಿತ್ರವೂ ಇದೇ ರೀತಿಯ ಪ್ರತಿಪಾದನೆಯೊಂದಿಗೆ 2019 ರಲ್ಲಿಯೂ ಸಹ ವೈರಲ್ ಆಗಿತ್ತು. ಆಗ ಫ್ಯಾಕ್ಟ್ಲಿ ಅದರ ಸತ್ಯಾಸತ್ಯತೆಯನ್ನು ಬಯಲುಗೊಳಿಸಿತ್ತು. ಅದನ್ನು ಇಲ್ಲಿ ಓದಬಹುದು.

ಉತ್ತರಪ್ರದೇಶದ ಹತ್ರಾಸ್‌ನಲ್ಲಿ 19 ವರ್ಷದ ಯುವತಿಯ ಸಾಮೂಹಿಕ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಈ ರೀತಿಯ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ದಾರಿತಪ್ಪಿಸುವ ಪ್ರತಿಪಾದನೆಗಳೊಂದಿಗೆ ಹಂಚಿಕೆಯಾಗುತ್ತಿವೆ.

ಒಟ್ಟಿನಲ್ಲಿ ದೇಹಕ್ಕೆ ಕಬ್ಬಿಣದ ಮುಳ್ಳುತಂತಿ ಸುತ್ತಿಕೊಂಡ ಈ ಮಹಿಳೆ ಶ್ರೀಲಂಕದವರಾಗಿದ್ದು, ಅವರು ಒಸರಿಯಾ ಶೈಲಿಯ ಉಡುಪನ್ನು ಪ್ರದರ್ಶಿಸುತ್ತಿದ್ದಾರೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಲವ್ ಜಿಹಾದ್ ಹೆಸರಿನಲ್ಲಿ ದ್ವೇಷ ಹರಡುವ ಸುಳ್ಳು ಸುದ್ದಿ, ವಿಡಿಯೋ ಹಂಚಿಕೊಳ್ಳಲಾಗುತ್ತಿದೆ!

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here