Homeದಿಟನಾಗರಫ್ಯಾಕ್ಟ್‌ಚೆಕ್: ಪಾಕಿಸ್ತಾನದ ಪ್ರತಿಭಟನೆಯೊಂದರಲ್ಲಿ ಭಾರತದ ಬಾವುಟವನ್ನು ಬಳಸಲಾಗಿದೆಯೇ?

ಫ್ಯಾಕ್ಟ್‌ಚೆಕ್: ಪಾಕಿಸ್ತಾನದ ಪ್ರತಿಭಟನೆಯೊಂದರಲ್ಲಿ ಭಾರತದ ಬಾವುಟವನ್ನು ಬಳಸಲಾಗಿದೆಯೇ?

70 ವರ್ಷಗಳಿಂದ ಭಾರತದಲ್ಲಿ ಪಾಕಿಸ್ತಾನ ಧ್ವಜವನ್ನು ಹಾರಿಸಿ ನಮ್ಮನ್ನು ಕೆರಳಿಸುತ್ತಿದ್ದರು. ಈಗ ಪಾಕಿಸ್ತಾನದಲ್ಲಿ ಭಾರತದ ಧ್ವಜ ಹಾರಾಡುತ್ತಿದೆ ಎಂದು ಚಿತ್ರವೊಂದನ್ನು ಹಂಚಿಕೊಳ್ಳಲಾಗುತ್ತಿದೆ.

- Advertisement -
- Advertisement -

ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಪ್ರತಿಭಟನೆಯ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಆ ಪ್ರತಿಭಟನೆಯಲ್ಲಿ ಭಾರತದ ಬಾವುಟವನ್ನು ಬಳಸಿರುವುದಾಗಿ ಹಲವರು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

ಶುಭಮ್‌ರಾಜ್ ಎಂಬುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇದಕ್ಕೆ ಸಂಬಂಧಿಸಿದ ಚಿತ್ರವೊಂದನ್ನು ಹಂಚಿಕೊಂಡಿದ್ದು, “70 ವರ್ಷಗಳಿಂದ ಭಾರತದಲ್ಲಿ ಪಾಕಿಸ್ತಾನ ಧ್ವಜವನ್ನು ಹಾರಿಸಿ ನಮ್ಮನ್ನು ಕೆರಳಿಸುತ್ತಿದ್ದರು. ಈಗ ಪಾಕಿಸ್ತಾನದಲ್ಲಿ ಭಾರತದ ಧ್ವಜ ಹಾರಾಡುತ್ತಿದೆ” ಎಂದು ಬರೆದುಕೊಂಡಿದ್ದಾರೆ.

 

ಈ ಪೋಸ್ಟ್‌ನ ಆರ್ಕೈವ್ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಲವ್ ಜಿಹಾದ್ ಹೆಸರಿನಲ್ಲಿ ದ್ವೇಷ ಹರಡುವ ಸುಳ್ಳು ಸುದ್ದಿ, ವಿಡಿಯೋ ಹಂಚಿಕೊಳ್ಳಲಾಗುತ್ತಿದೆ!

ಇದೇ ಹೇಳಿಕೆಯೊಂದಿಗೆ ನೂರಾರು ಜನ ಸಾಮಾಜಿಕ ಮಾಧ್ಯಮ ಬಳಕೆದಾರರು, ಫೇಸ್‌ಬುಕ್ ಮತ್ತು ಟ್ವಿಟ್ಟರ್ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದರ ಆರ್ಕೈವ್ ಆವೃತ್ತಿಯನ್ನು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್:

ಈ ಪೋಸ್ಟ್‌ನ ಕೆಲವು ಕೀವರ್ಡ್‌ಗಳನ್ನು (ಕರಾಚಿಯಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆಗಳು) ತೆಗೆದು ಗೂಗಲ್ ಹುಡುಕಾಟ ನಡೆಸಿದಾಗ, ಹಲವು ಸುದ್ದಿ ಸಂಸ್ಥೆಗಳ ವರದಿಗಳು ಪತ್ತೆಯಾದವು.

ರಾಯಿಟರ್ಸ್ ಪ್ರಕಾರ, “ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರನ್ನು ಉಚ್ಚಾಟಿಸುವ ಅಭಿಯಾನದ ಭಾಗವಾಗಿ ಅಕ್ಟೋಬರ್ 18 ರಂದು ಕರಾಚಿಯಲ್ಲಿ ನೂರಾರು ವಿರೋಧ ಪಕ್ಷದ ಬೆಂಬಲಿಗರು ಒಟ್ಟುಗೂಡಿದ್ದರು” ಎಂದು ವರದಿ ಮಾಡಿದೆ.

ನಂತರ ಈ ಫೋಟೋ ಮೂಲಕ ರಿವರ್ಸ್‌ ಇಮೇಜ್ ಹುಡುಕಾಟ ಮಾಡಿದಾಗ, ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ಮಾಡಿರುವ ಟ್ವೀಟ್ ಪತ್ತೆಯಾಯಿತು.

ಭಾರತದಲ್ಲಿ ವೈರಲ್ ಆಗುತ್ತಿರುವ ಚಿತ್ರವನ್ನು ಈ ಮೇಲೆ ಟ್ವೀಟ್ ಮಾಡಿರುವ ಚಿತ್ರದೊಂದಿಗೆ ಹೋಲಿಸಿ ನೋಡಿದಾಗ, ಭಾರತದ ಬಾವುಟವನ್ನು ಹಾರಿಸಲಾಗಿದೆ ಎನ್ನುವ ಚಿತ್ರವನ್ನು ಫೋಟೋಶಾಪ್ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನದಲ್ಲಿ ಭಾರತದ ಬಾವುಟ ಹಾರಾಡುತ್ತಿದೆ ಎಂದು ಹಂಚಿಕೊಂಡಿರುವ ಚಿತ್ರವನ್ನು ಜೂಮ್ ಮಾಡಿ ಅದಕ್ಕೆ ಭಾರತದ ಬಾವುಟವನ್ನು ಫೋಟೋಶಾಪ್ ಮಾಡಲಾಗಿದೆ.

ಕರಾಚಿಯಲ್ಲಿ ನಡೆದ ಸರ್ಕಾರ ವಿರೋಧಿ ರ್ಯಾಲಿಯಲ್ಲಿ ಭಾರತೀಯ ಧ್ವಜವನ್ನು ಹಾರಿಸಲಾಗಿದೆ ಎಂದು ಸುಳ್ಳು ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ: ಕೇರಳದ ಹಿಂದೂ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ? ಇಲ್ಲಿದೆ ಫ್ಯಾಕ್ಟ್‌ಚೆಕ್‌ ವಿವರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...