ಸಮಾಜವಾದಿ ಪಕ್ಷದ (SP) ಎರಡನೇ ಅಭ್ಯರ್ಥಿಯನ್ನು ಸೋಲಿಸುವ ಸಲುವಾಗಿ, ತಮ್ಮ ಪಕ್ಷ ಮುಂಬರುವ ಉತ್ತರ ಪ್ರದೇಶ ಪರಿಷತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (BJP) ಅಥವಾ ಬೇರೆ ಯಾವುದೇ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಲಿದೆ ಎಂದು ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು BSP ಮುಖ್ಯಸ್ಥೆ ಮಾಯಾವತಿ ಹೇಳಿದರು.
ಎಎನ್‌ಐ ಜೊತೆ ಮಾತನಾಡಿದ ಮಾಯಾವತಿ, “ಯುಪಿ ಯಲ್ಲಿ ಮುಂದಿನ ಪರಿಷತ್ ಚುನಾವಣೆಯಲ್ಲಿ SP ಅಭ್ಯರ್ಥಿಯನ್ನು ಸೋಲಿಸಲು ನಾವು ನಿರ್ಧರಿಸಿದ್ದೇವೆ. ನಾವು ನಮ್ಮೆಲ್ಲಾ ಬಲವನ್ನು ಹಾಕಿ ಮತ್ತು ನಮ್ಮ ಮತವನ್ನು BJP ಅಭ್ಯರ್ಥಿಗೆ ಅಥವಾ ಬೇರೆ ಪಕ್ಷದ ಯಾವುದೇ ಅಭ್ಯರ್ಥಿಗೆ ನೀಡುತ್ತೇವೆ” ಎಂದು ಮಾಯಾವತಿ ಹೇಳಿದರು.
ಇದನ್ನೂ ಓದಿ: ಯುಪಿ ರಾಜ್ಯಸಭೆ ಚುನಾವಣೆ: 7 ಬಂಡಾಯ ಶಾಸಕರನ್ನು ಅಮಾನತುಗೊಳಿಸಿದ BSP!
इसके बाद भी कुछ बाकी है? pic.twitter.com/WGNxMWq9gh
— Priyanka Gandhi Vadra (@priyankagandhi) October 29, 2020
ಇದನ್ನೂ ಓದಿ: ಯುಪಿ ಉಪಚುನಾವಣೆ: ಹೆಚ್ಚುತ್ತಿರುವ ಅಪರಾಧಗಳ ನೆರಳಲ್ಲಿ ಮತದಾರರು ಯಾರ ಕೈಹಿಡಿಯಲಿದ್ದಾರೆ?
ಕಳೆದ ವರ್ಷ ನಡೆದ ಲೋಕಸಭೆ ಚುನಾವಣೆಯ ನಂತರ BSP ಮತ್ತು SP ಮೈತ್ರಿ ಮುರಿದುಬಿದ್ದಿತ್ತು. ಅಂದಿನಿಂದಲೂ ಎರಡೂ ಪಕ್ಷಗಳೂ ಪರಸ್ಪರ ಎದುರಾಳಿಯಂತೆ ವರ್ತಿಸುತ್ತಿವೆ.
“ನಾವು ಅವರೊಂದಿಗೆ ಕೈಜೋಡಿಸಬಾರದಿತ್ತು. ನಾವು ಸ್ವಲ್ಪ ಆಳವಾಗಿ ಯೋಚಿಸಬೇಕಾಗಿತ್ತು. ತರಾತುರಿಯಲ್ಲಿ ನಾವು ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಹಾಗೆ ಮಾಡುವ ಮೂಲಕ ನಾವು ಬಹಳ ದೊಡ್ಡ ತಪ್ಪು ಮಾಡಿದ್ದೇವೆ” ಎಂದು ಅವರು ಹೇಳಿದರು.
“ಲೋಕಸಭಾ ಚುನಾವಣೆಯ ಸಮಯದಲ್ಲಿ ಕೋಮುವಾದಿ ಪಡೆಗಳ ವಿರುದ್ಧ ಹೋರಾಡಲು ನಮ್ಮ ಪಕ್ಷ SP ಜೊತೆ ಕೈಜೋಡಿಸಿತ್ತು. ಅವರ ಕುಟುಂಬದ ಜಗಳದಿಂದಾಗಿ, BSPಯೊಂದಿಗಿನ ‘ಘಟ್‌ಬಂಧನ್’ನಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗಲಿಲ್ಲ. ಚುನಾವಣೆಯ ನಂತರ ಅವರು ನಮಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದರು” ಎಂದು ಮಾಯಾವತಿ ಹೇಳಿದರು.
ಇದನ್ನೂ ಓದಿ: ದೇಶಾದ್ಯಂತ ನಡೆಯುವ ದಲಿತರ ಮೇಲಿನ ಹಲ್ಲೆಗಳಲ್ಲಿ ಶೇ.25 ಯುಪಿಯೊಂದರಲ್ಲಿ ವರದಿಯಾಗುತ್ತವೆ!


