ಉತ್ತರಪ್ರದೇಶದ ರಾಜ್ಯಸಭಾ ಚುನಾವಣೆಗೆ ಬಹುಜನ ಸಮಾಜ ಪಕ್ಷದ (BSP) ಅಧಿಕೃತ ಅಭ್ಯರ್ಥಿ ರಾಮ್‌ಜೀ ಗೌತಮ್ ಅವರನ್ನು ನಾಮನಿರ್ದೇಶನವನ್ನು ವಿರೋಧಿಸಿದ್ದ ಪಕ್ಷದ ಏಳು ಬಂಡಾಯ ಶಾಸಕರನ್ನು ಮುಖ್ಯಸ್ಥೆ ಮಾಯಾವತಿ ಇಂದು ಅಮಾನತುಗೊಳಿಸಿದ್ದಾರೆ. 7 ಶಾಸಕರಲ್ಲಿ ಚೌಧರಿ ಅಸ್ಲಂ ಅಲಿ, ಹಕೀಮ್ ಲಾಲ್ ಬೈಂದ್, ಮೊಹಮ್ಮದ್ ಮುಜತಾಬಾ ಸಿದ್ದಿಕಿ, ಅಸ್ಲಂ ರೈನಿ, ಸುಷ್ಮಾ ಪಟೇಲ್, ಹರ್ಗೋವಿಂದ್ ಭಾರ್ಗವ ಮತ್ತು ಬಂದನಾ ಸಿಂಗ್ ಸೇರಿದ್ದಾರೆ.
ಬಂಡಾಯ ಶಾಸಕರು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಬುಧವಾರ ಭೇಟಿಯಾಗಿದ್ದು, ಅವರು ಪಕ್ಷ ಬದಲಿಸಬಹುದು ಎಂಬ ಊಹಾಪೋಹಗಳಿಗೆ ಬಲ ನೀಡಿದ್ದರು.
ಇದನ್ನೂ ಓದಿ: ಕಾಂಗ್ರೆಸ್‌ಗೆ ಪಕ್ಷಾಂತರಗೊಂಡಿದ್ದ 6 ಶಾಸಕರ ಕುರಿತ ಬಿಎಸ್‌ಪಿ ಅರ್ಜಿ ವಜಾಗೊಳಿಸಿದ ಸುಪ್ರೀಂ
ಅವರಲ್ಲಿ ನಾಲ್ವರು, ರಾಮ್‌ಜೀ ಗೌತಮ್ ಅವರ ಹೆಸರನ್ನು ರಾಜ್ಯಸಭಾ ಚುನಾವಣೆಗೆ ನಾಮನಿರ್ದೇಶನ ಮಾಡುವ ಬಗ್ಗೆ ತಮ್ಮ ಸಹಿಯನ್ನು ನಕಲಿ ಮಾಡಲಾಗಿದೆ ಎಂದು ಅಫಿಡವಿಟ್ ಸಹ ಸಲ್ಲಿಸಿದ್ದರೆಂದು ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ.
ಇದರ ನಡುವೆಯೇ ಖಾಲಿ ಬಿದ್ದಿರುವ 10 ಉತ್ತರ ಪ್ರದೇಶದ ಸ್ಥಾನಗಳಿಗೆ ನವೆಂಬರ್ 9 ರ ಚುನಾವಣೆಗೆ BSP ಅಭ್ಯರ್ಥಿಯಾಗಿ ರಾಮ್‌ಜೀ ಗೌತಮ್ ಅವರ ನಾಮನಿರ್ದೇಶನವನ್ನು ರಿಟರ್ನಿಂಗ್ ಅಧಿಕಾರಿ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಸಿಎಎ, ಎನ್‌ಪಿಆರ್, ಆರ್ಥಿಕತೆಯ ವಿರುದ್ಧ ಪ್ರತಿಪಕ್ಷಗಳ ಸಭೆ ಇಂದು: ಟಿಎಂಸಿ, ಬಿಎಸ್‌ಪಿ, ಆಪ್ ಗೈರು..
ಮಾಯಾವತಿ ಅವರ ಪಕ್ಷವು ಸೋಮವಾರ ರಾಜ್ಯಸಭಾ ಚುನಾವಣೆಗೆ ರಾಮ್‌ಜೀ ಗೌತಮ್‌ಗೆ ಸಾಕಷ್ಟು ಬೆಂಬಲವಿಲ್ಲದಿದ್ದರೂ ಸಹ ಅವರನ್ನು ಕಣಕ್ಕಿಳಿಸಿತ್ತು. ಇತರ ಬಿಜೆಪಿಯೇತರ ಪಕ್ಷಗಳು ಅವರ ಉಮೇದುವಾರಿಕೆಯನ್ನು (ನಾಮನಿರ್ದೇಶನ) ಬೆಂಬಲಿಸುವ ನಿರೀಕ್ಷೆಯಿದೆ ಎಂದು BSP ನಾಯಕರು ಸೂಚಿಸಿದ್ದರು.
ಒಟ್ಟಾರೆಯಾಗಿ, ಬಿಜೆಪಿಯ ಎಂಟು ಮಂದಿ ಸೇರಿದಂತೆ 11 ಅಭ್ಯರ್ಥಿಗಳು ಉತ್ತರಪ್ರದೇಶದ 10 ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಖಾಲಿಯಿರುವ ಉತ್ತರ ಪ್ರದೇಶದ ಈ 10 ರಾಜ್ಯಸಭಾ ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ಈ ಹಿಂದೆ ಭಾರತೀಯ ಜನತಾ ಪಕ್ಷ (ಬಿಜೆಪಿ), 4 ಎಸ್‌ಪಿ, 2 ಬಿಎಸ್‌ಪಿ ಮತ್ತು 1 ಕಾಂಗ್ರೆಸ್ ಗೆದ್ದುಕೊಂಡಿದೆ.
ಇದನ್ನೂ ಓದಿ: ಯುಪಿ ಉಪಚುನಾವಣೆ: ಹೆಚ್ಚುತ್ತಿರುವ ಅಪರಾಧಗಳ ನೆರಳಲ್ಲಿ ಮತದಾರರು ಯಾರ ಕೈಹಿಡಿಯಲಿದ್ದಾರೆ?