ಇಂದು ಫ್ರಾನ್ಸ್‌ನ ಚರ್ಚ್‌ನಲ್ಲಿ ಭಯಾನಕ ಘಟನೆಯೊಂದು ನಡೆದಿದ್ದು, ಚಾಕು ಹಿಡಿದ ದಾಳಿಕೋರನೊಬ್ಬ ”ಅಲ್ಲಾಹು ಅಕ್ಬರ್” ಎಂದು ಕೂಗುತ್ತಾ ಅಲ್ಲಿದ್ದವರ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ 3 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಮೆಡಿಟರೇನಿಯನ್ ನಗರದ ಚರ್ಚ್‌ನಲ್ಲಿ ನಡೆದ ಚಾಕು ದಾಳಿಯ ಬಗ್ಗೆ ’ಫ್ರೆಂಚ್ ಭಯೋತ್ಪಾದನಾ ವಿರೋಧಿ ಪ್ರಾಸಿಕ್ಯೂಟರ್’ ತನಿಖೆ ನಡೆಸುತ್ತಿದ್ದಾರೆ. ಭಯೋತ್ಪಾದನಾ ಪ್ರೇರಿತ ದಾಳಿಯ ಬಗ್ಗೆ ತನಿಖೆಯನ್ನು ಆರಂಭಿಸಲಾಗಿದೆ ಎಂದು ಪ್ರಾಸಿಕ್ಯೂಟರ್ ಕಚೇರಿ ಮತ್ತು ರಾಷ್ಟ್ರೀಯ ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ನಡೆದ ದಾಳಿಯ ನಂತರ ಹಲ್ಲೆಕೋರನನ್ನು ಬಂಧಿಸಲಾಗಿದ್ದು, ಬಂಧನದ ಸಮಯದಲ್ಲಿ ಗಾಯಗೊಂಡಿದ್ದ ಆರೋಪಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆತ ಏಕಾಂಗಿಯಾಗಿ ಇಂತಹ ಕೆಲಸ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೈಸ್ ನಗರದ ಚರ್ಚ್‌ನಲ್ಲಿ ನಡೆದ ಈ ಭಯೋತ್ಪಾದಕ ಘಟನೆಯಲ್ಲಿ “ಅಲ್ಲಾಹು ಅಕ್ಬರ್” ಎಂದು ಕೂಗುತ್ತಿರುವ ದಾಳಿಕೋರನೊಬ್ಬ ಚಾಕುವಿನಿಂದ ಮಹಿಳೆಯೊಬ್ಬಳ ಶಿರಚ್ಚೇದನ ಮಾಡಿದ್ದಾನೆ. ಜೊತೆಗೆ ಇತರ ಇಬ್ಬರು ಕೊಲ್ಲಲ್ಪಟ್ಟಿದ್ದಾರೆ.
ಪೊಲೀಸರಿಂದ ಬಂಧನಕ್ಕೊಳಗಾದ ನಂತರವೂ ದಾಳಿಕೋರನು “ಅಲ್ಲಾಹು ಅಕ್ಬರ್” ಎಂಬ ಪದವನ್ನು ಪದೇ ಪದೇ ಕೂಗಿದ್ದಾನೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಕೊರೊನಾ ಉಲ್ಬಣ: ರಾಷ್ಟ್ರೀಯ ತುರ್ತು ಪರಿಸ್ಥಿತಿ ಹೇರಿದ ಸ್ಪೇನ್
ಈ ದಾಳಿಯನ್ನು ಭಯೋತ್ಪಾದಕತೆ ಎಂದು ಬಣ್ಣಿಸಿದ ನೈಸ್ ನಗರದ ಮೇಯರ್ ಕ್ರಿಶ್ಚಿಯನ್ ಎಸ್ಟ್ರೋಸಿ ತಮ್ಮ ಟ್ವಿಟರ್‌ನಲ್ಲಿ, “ಇದು ನಗರದ ನೊಟ್ರೆಡೇಮ್ ಚರ್ಚ್‌ನಲ್ಲಿ ಸಂಭವಿಸಿದೆ. ಚರ್ಚ್ ಒಳಗೆ ಕೊಲ್ಲಲ್ಪಟ್ಟ ಜನರಲ್ಲಿ ಒಬ್ಬರು ಚರ್ಚ್ ವಾರ್ಡನ್ ಎಂದು ತಿಳಿದುಬಂದಿದೆ. ಮಹಿಳೆಯೊಬ್ಬರು ಚರ್ಚ್ ಒಳಗಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿ, ಕಟ್ಟಡದ ಎದುರಿನ ಬಾರ್‌ಗೆ ಓಡಿಹೋದರು. ಚಾಕು ದಾಳಿಕೋರನನ್ನು ವಶಕ್ಕೆ ತೆಗೆದುಕೊಳ್ಳುವಾಗ ಪೊಲೀಸರು ಗುಂಡು ಹಾರಿಸಿದ್ದಾರೆ” ಎಂದು ಹೇಳಿದ್ದಾರೆ.
#Nice06 est une nouvelle fois touchée dans son coeur par l'islamofascisme que je ne cesse de dénoncer.
J'adresse tout mon soutien et toute ma compassion aux familles des victimes de ce barbare.
Je veux remercier les forces de l'ordre mobilisées et particulièrement la @PMdeNice pic.twitter.com/zgm4UPi1sR
— Christian Estrosi (@cestrosi) October 29, 2020
ಇದನ್ನೂ ಓದಿ: Explainer: ಜೀನೋಮ್ ಎಡಿಟಿಂಗ್‌ಗೆ ರಸಾಯನಶಾಸ್ತ್ರದ ನೊಬೆಲ್ ಮತ್ತು ವಿವಾದ
“ಸಾಕು, ಇನ್ನು ಸಾಕು. ನಮ್ಮ ಪ್ರದೇಶದಿಂದ ಇಸ್ಲಾಮೋ-ಫ್ಯಾಸಿಸಂ ಅನ್ನು ಖಚಿತವಾಗಿ ತೊಡೆದುಹಾಕಲು ಮತ್ತು ಹಿಂಸೆಯಿಂದ ಫ್ರಾನ್ಸ್ ಮುಕ್ತವಾಗಲು ಈಗ ಸಮಯ ಬಂದಿದೆ” ಎಂದು ಮೇಯರ್ ಆಕ್ರೋಶ ವ್ಯಕ್ತಪಡಿಸಿದರು.
ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ನೈಸ್ ನಗರಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೇಯರ್ ಎಸ್ಟ್ರೋಸಿ ಹೇಳಿದ್ದಾರೆ. ಪ್ಯಾರಿಸ್‌ನಲ್ಲಿ ರಾಷ್ಟ್ರೀಯ ಅಸೆಂಬ್ಲಿಯ ಶಾಸಕರು ಸಂತ್ರಸ್ತರಿಗೆ ಒಗ್ಗಟ್ಟಿನಿಂದ ಒಂದು ನಿಮಿಷದ ಮೌನವನ್ನು ಆಚರಿಸಿದರು.
ಈ ತಿಂಗಳ ಆರಂಭದಲ್ಲಿ ಇಂತಹದ್ದೇ ಘಟನೆಯೊಂದು ಪ್ಯಾರಿಸ್ ಉಪನಗರದಲ್ಲಿ ವರದಿಯಾಗಿದ್ದು, ವಿದ್ಯಾರ್ಥಿಯಿಂದಲೇ ಶಿಕ್ಷಕನ ಮೇಲಿನ ಹಲ್ಲೆ ಮತ್ತು ಶಿರಚ್ಚೇದನ ನಡೆದಿತ್ತು. ಇಂದಿನ ಈ ದಾಳಿ ಇದಕ್ಕೆ ಸಂಪೂರ್ಣ ಹೊಂದಿಕೆಯಾಗುತ್ತದೆ.
ಇದನ್ನೂ ಓದಿ: ಭಾರತವು ವಿಶ್ವದ ಆರ್ಥಿಕತೆಯಲ್ಲಿ 3ನೇ ಸ್ಥಾನಕ್ಕೆ ಬರಲು ಇನ್ನೂ 30 ವರ್ಷ ಬೇಕು: ಅಧ್ಯಯನ



ಅಲ್ಲಾಹನ ಹೆಸರಲ್ಲಿ ಮಹಿಳೆಯರ ಕೊಲೆ.
ಇದನ್ನು ಯಾವುದೇ ಕಾರಣಕ್ಕೂ ಇಸ್ಲಾಮ್ ಧರ್ಮ ಒಪ್ಪುವುದಿಲ್ಲ.
ಇದರ ಹಿಂದೆ ಯಾವುದೋ ಪಿತೂರಿ ಇರಬಹುದು ಸರಿಯಾದ ತನಿಖೆ ನಡೆದು ಅಪರಾಧಿ ಗೆ ಕಠಿಣವಾದ ಶಿಕ್ಷೆಯಾಗಬೇಕು.