Homeಅಂತರಾಷ್ಟ್ರೀಯಕೊರೊನಾ ಉಲ್ಬಣ: ರಾಷ್ಟ್ರೀಯ ತುರ್ತು ಪರಿಸ್ಥಿತಿ ಹೇರಿದ ಸ್ಪೇನ್

ಕೊರೊನಾ ಉಲ್ಬಣ: ರಾಷ್ಟ್ರೀಯ ತುರ್ತು ಪರಿಸ್ಥಿತಿ ಹೇರಿದ ಸ್ಪೇನ್

- Advertisement -
- Advertisement -

ಸ್ಪೇನ್‌ನಲ್ಲಿ ಕೊರೊನಾ ಸೋಂಕು ಉಲ್ಬಣವಾದ ಹಿನ್ನೆಲೆ ಭಾನುವಾರ ಎರಡನೇ ಬಾರಿ ರಾಷ್ಟ್ರವ್ಯಾಪಿ ತುರ್ತು ಪರಿಸ್ಥಿತಿ ಘೋಷಿಸಿದೆ. ಜೊತೆಗೆ ದೇಶಾದ್ಯಂತ ರಾತ್ರಿ ಕರ್ಫ್ಯೂಗೆ ಆದೇಶಿಸಲಾಗಿದೆ ಎಂದು ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಹೇಳಿದ್ದಾರೆ.

ಕ್ಯಾನರಿ ದ್ವೀಪಗಳನ್ನು ಹೊರತುಪಡಿಸಿ, ರಾತ್ರಿ 11 ಗಂಟೆಗೆಯಿಂದ ಬೆಳಗ್ಗೆ 6 ಗಂಟೆಯವರೆಗೆ ರಾಷ್ಟ್ರವ್ಯಾಪಿ ಕರ್ಫ್ಯೂ ವಿಧಿಸಲು ತಮ್ಮ ಸರ್ಕಾರ ತುರ್ತು ಪರಿಸ್ಥಿತಿಯನ್ನು ಬಳಸುತ್ತಿದೆ ಎಂದು ಪ್ರಧಾನಿ ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ.

ಸ್ಪೇನ್‌ನ 19 ಪ್ರಾದೇಶಿಕ ನಾಯಕರು ತಮ್ಮ ವ್ಯಾಪ್ತಿಯಲ್ಲಿ ಕಠಿಣವಾದ ಕರ್ಫ್ಯೂ ವಿಧಿಸಲು, ಪ್ರಾದೇಶಿಕ ಗಡಿಗಳನ್ನು ಮುಚ್ಚುವುದು ಮತ್ತು ಆರು ಜನರಿಗಿಂತ ಹೆಚ್ಚಿನ ಜನ ಸೇರದಂತೆ ನಿರ್ಬಂಧಿಸುವ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಪ್ರಧಾನಿ ಹೇಳಿದರು.

“ಸದ್ಯದ ವಾಸ್ತವವೆಂದರೆ ಯುರೋಪ್ ಮತ್ತು ಸ್ಪೇನ್ ಕೊರೋನಾ ಸಾಂಕ್ರಾಮಿಕ ರೋಗದ ಎರಡನೇ ಎಲೆಯಲ್ಲಿ ಮುಳುಗಿವೆ” ಎಂದು ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಆತಂಕ ವ್ಯಕ್ತಪಡಿಸಿದ್ದಾರೆ. ತುರ್ತು ಪರಿಸ್ಥಿತಿಯನ್ನು ಮುಂದಿನ ಆರು ತಿಂಗಳವರೆಗೆ ಅಂದರೆ ಮೇ ತಿಂಗಳವರೆಗೆ ವಿಸ್ತರಿಸುವ ಬಗ್ಗೆಯೂ ಚರ್ಚಿಸಿದ್ದಾರೆ. ಸ್ಪೇನ್‌ನ ಬಹುಪಾಲು ಪ್ರಾದೇಶಿಕ ನಾಯಕರು ಹೊಸ ತುರ್ತು ಪರಿಸ್ಥಿತಿಗೆ ಒಪ್ಪಿಕೊಂಡಿದ್ದಾರೆ ಎಂದು ಪ್ರಧಾನಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬಿಹಾರ ಚುನಾವಣೆ: ಉಚಿತ ಕೊರೊನಾ ಲಸಿಕೆ ಪ್ರಸ್ತಾಪ; ಟ್ರೋಲ್‌ ಆದ ಬಿಜೆಪಿ ಪ್ರಣಾಳಿಕೆ!

ರಾಷ್ಟ್ರೀಯ ತುರ್ತು ಪರಿಸ್ಥಿತಿಯು ಸರ್ಕಾರಕ್ಕೆ ಅಸಾಧಾರಣ ಅಧಿಕಾರವನ್ನು ನೀಡುತ್ತದೆ. ಇದರಲ್ಲಿ ಸ್ಪೇನ್‌ನ ಸಂವಿಧಾನದಲ್ಲಿ ಖಾತರಿಪಡಿಸಿದ ಮೂಲಭೂತ ಸ್ವಾತಂತ್ರ್ಯಗಳಾದ ಚಳುವಳಿಯ ಹಕ್ಕನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಸಾಮರ್ಥ್ಯವಿದೆ.

ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಸ್ಪೇನ್‌ನ ಸರ್ಕಾರ ಈಗಾಗಲೇ ಎರಡು ತುರ್ತು ಪರಿಸ್ಥಿತಿಗಳನ್ನು ಘೋಷಿಸಿದೆ. ರಾಷ್ಟ್ರದಾದ್ಯಂತ ಕಟ್ಟುನಿಟ್ಟಾದ ಗೃಹಬಂಧನವನ್ನು ಅನ್ವಯಿಸಲು, ಅಂಗಡಿ- ಮಳಿಗೆಗಳನ್ನು ಮುಚ್ಚಲು ಮತ್ತು ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಹೋರಾಟಕ್ಕಾಗಿ ಖಾಸಗಿ ಉದ್ಯಮವನ್ನು ನೇಮಿಸಿಕೊಳ್ಳಲು ಮಾರ್ಚ್‌ನಲ್ಲಿ ಮೊದಲ ಬಾರಿಗೆ ಘೋಷಿಸಲಾಗಿತ್ತು. ಜೂನ್‌ನಲ್ಲಿ ತುರ್ತು ಪರಿಸ್ಥಿತಿ ತೆಗೆದುಹಾಕಲಾಗಿತ್ತು. ಎರಡನೆಯದು ಮ್ಯಾಡ್ರಿಡ್‌ನಲ್ಲಿ ಎರಡು ವಾರಗಳವರೆಗೆ ಜಾರಿಗೆ ಬಂದಿತು.

ಸ್ಪ್ಯಾನಿಷ್ ಆರೋಗ್ಯ ಸಚಿವ ಸಾಲ್ವಡಾರ್ ಇಲ್ಲಾ ತಮ್ಮ ಸಂಸ್ಥೆ ಮತ್ತು ಪ್ರಾದೇಶಿಕ ಆರೋಗ್ಯ ಅಧಿಕಾರಿಗಳು ರಾತ್ರಿಯ ಕರ್ಫ್ಯೂಗಳನ್ನು ಹೇಗೆ ಜಾರಿಗೆ ತರಬೇಕೆಂದು ಅಧ್ಯಯನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಬಹುಶಃ ಫ್ರಾನ್ಸ್‌ನ ಪ್ರಮುಖ ನಗರಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ರಾತ್ರಿ 9 ಗಂಟೆಯಿಂದ ಕರ್ಫ್ಯೂ ಜಾರಿಯಾಗಬಹುದು ಎಂದಿದ್ದರು.

ಸ್ಪೇನ್‌ನ ಆರ್ಥಿಕತೆಯ ದುರ್ಬಲ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಎಲ್ಲಾ ಸರ್ಕಾರಿ ಅಧಿಕಾರಿಗಳು ಮತ್ತೊಂದು ಸಂಪೂರ್ಣ ಲಾಕ್‌ಡೌನ್ ಮತ್ತು ಉದ್ಯಮ ಸ್ಥಗಿತಗೊಳಿಸುವಿಕೆಯಿಂದ ಹಿಂಜರಿಯುತ್ತಿದ್ದಾರೆ. ಈಗಾಗಲೇ ಸ್ಪೇನ್ ಆರ್ಥಿಕ ಹಿಂಜರಿತ ಮತ್ತು ನಿರುದ್ಯೋಗದಲ್ಲಿ ಮುಳುಗಿದೆ.


ಇದನ್ನೂ ಓದಿ: ಲಾಕ್‌ಡೌನ್‌ನಿಂದಾಗಿ ಆರ್ಥಿಕತೆ ನೆಲಕಚ್ಚಿದ್ದಾಗ ಅಂಬಾನಿ ಪ್ರತಿ ಗಂಟೆಗೆ ಸಂಪಾದಿಸಿದ್ದು ಎಷ್ಟು ಗೊತ್ತೇ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮಗಳ ಪರೀಕ್ಷೆ, ಸಂತ್ರಸ್ತರಿಗೆ ಪರಿಹಾರ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

0
ಔಷಧೀಯ ಕಂಪನಿ ಅಸ್ಟ್ರಾಜೆನೆಕಾ ತನ್ನ ಕೋವಿಶೀಲ್ಡ್ ಲಸಿಕೆ ಅಪರೂಪದ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಒಪ್ಪಿಕೊಂಡ ಹಿನ್ನೆಲೆ, ವಕೀಲರೊಬ್ಬರು ಈ ಲಸಿಕೆಯ ಅಡ್ಡ ಪರಿಣಾಮಗಳು ಮತ್ತು ಅಪಾಯದ ಅಂಶಗಳನ್ನು ಪರೀಕ್ಷಿಸಲು ವೈದ್ಯಕೀಯ...