HomeUncategorizedಬಿಹಾರ ಚುನಾವಣೆ: ಉಚಿತ ಕೊರೊನಾ ಲಸಿಕೆ ಪ್ರಸ್ತಾಪ; ಟ್ರೋಲ್‌ ಆದ ಬಿಜೆಪಿ ಪ್ರಣಾಳಿಕೆ!

ಬಿಹಾರ ಚುನಾವಣೆ: ಉಚಿತ ಕೊರೊನಾ ಲಸಿಕೆ ಪ್ರಸ್ತಾಪ; ಟ್ರೋಲ್‌ ಆದ ಬಿಜೆಪಿ ಪ್ರಣಾಳಿಕೆ!

ಟ್ವೀಟ್ ಮಾಡಿರುವ ಆಮ್ ಆದ್ಮಿ ಪಾರ್ಟಿ, ’ಬಿಜೆಪಿ ಆಡಳಿತದಲ್ಲಿಲ್ಲದ ರಾಜ್ಯಗಳ ಕತೆ ಏನು? ಬಿಜೆಪಿಗೆ ಮತ ಹಾಕದ ಭಾರತೀಯರಿಗೆ ಉಚಿತ ಕೋವಿಡ್ ಲಸಿಕೆ ಸಿಗುವುದಿಲ್ಲವೇ?" ಎಂದು ಕೇಳಿದೆ.

- Advertisement -
- Advertisement -

ಮುಂದಿನ ವಾರ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ “ಎಲ್ಲರಿಗೂ ಉಚಿತ ಕೊರೊನಾ ವೈರಸ್ ಲಸಿಕೆ” ನೀಡುವ ಭರವಸೆಯು ಭಾರಿ ಟೀಕೆಗೆ ಗುರಿಯಾಗಿದೆ. ಆಡಳಿತ ಪಕ್ಷವು ತನ್ನ ರಾಜಕೀಯ ಕಾರ್ಯಕ್ಕೆ ಲಸಿಕೆಯನ್ನು ಬಳಸುವ ಪ್ರಯತ್ನದಲ್ಲಿದೆ ಎಂಬ ಆರೋಪಗಳು ಕೇಳಿಬಂದಿವೆ.

ಇಂದು ಬಿಡುಗಡೆಯಾದ ಬಿಜೆಪಿ ಪ್ರಣಾಳಿಕೆಯಲ್ಲಿ 19 ಲಕ್ಷ ಉದ್ಯೋಗಗಳು ಸೇರಿದಂತೆ ಎಲ್ಲರಿಗೂ ಉಚಿತ ಕೊರೊನಾ ವೈರಸ್ ಲಸಿಕೆ ನೀಡುವ ಭರವಸೆ ನೀಡಿದೆ. ಜೊತೆಗೆ ಮುಂದಿನ ಐದು ವರ್ಷಗಳ ಕಾಲ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಪಕ್ಷ ಒತ್ತಿ ಹೇಳಿದೆ.

“ಕೊರೊನಾ ಲಸಿಕೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಗೆ ಲಭ್ಯವಾದ ತಕ್ಷಣ, ಬಿಹಾರದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತ ಲಸಿಕೆ ಸಿಗುತ್ತದೆ. ಇದು ನಮ್ಮ ಮತದಾನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾದ ಮೊದಲ ಭರವಸೆ” ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಇಂದು ಹೇಳಿದ್ದರು.

ಪ್ರಣಾಳಿಕೆ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಪಕ್ಷಗಳು, ಸಾರ್ವಜನಿಕರು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಕೊರೊನಾ ಸಾಂಕ್ರಾಮಿಕ ರೋಗದ ಲಸಿಕೆಯನ್ನು ರಾಜಕೀಯ ಲಾಭಕ್ಕೆ ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಬಿಹಾರ ಚುನಾವಣೆ: ಚಿರಾಗ್ ಪಾಸ್ವಾನ್ ಪರ ನಿಂತ ತೇಜಸ್ವಿ ಯಾದವ್ – ನಿತೀಶ್‌ ಕುಮಾರ್‌ಗೆ ತಲೆನೋವು!

ಪತ್ರಿಕಾಗೋಷ್ಠಿಯನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಆಮ್ ಆದ್ಮಿ ಪಾರ್ಟಿ, ’ಬಿಜೆಪಿ ಆಡಳಿತದಲ್ಲಿಲ್ಲದ ರಾಜ್ಯಗಳ ಕತೆ ಏನು? ಬಿಜೆಪಿಗೆ ಮತ ಹಾಕದ ಭಾರತೀಯರಿಗೆ ಉಚಿತ ಕೋವಿಡ್ ಲಸಿಕೆ ಸಿಗುವುದಿಲ್ಲವೇ?” ಎಂದು ಕೇಳಿದೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ. ಭಾರತ ಸರ್ಕಾರ ಇದೀಗ ಕೊರೊನಾವನ್ನು ತಂತ್ರವನ್ನಾಗಿಸಿಕೊಂಡಿದೆ. ಲಸಿಕೆ ಪಡೆಯಲು ರಾಜ್ಯವಾರು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿ, ಜೊತೆಗೆ ನಿಮ್ಮ ಸುಳ್ಳು ಭರವಸೆಗಳನ್ನು ಕೂಡ” ಎಂದಿದ್ದಾರೆ.

 

ಕಾಂಗ್ರೆಸ್ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರು ಟ್ವೀಟ್ ಮಾಡಿ, ” ನೀವು ನನಗೆ ಮತಗಳನ್ನು ನೀಡಿ, ನಾನು ನಿಮಗೆ ಲಸಿಕೆ ನೀಡುತ್ತೇನೆ” ಇದು ಭಯಾನಕ ಸಿನಿಕತನ! ಚುನಾವಣಾ ಆಯೋಗವು ಆಕೆಯ ಮೇಲೆ ಮತ್ತು ನಾಚಿಕೆಯಿಲ್ಲದ ಅವರ ಸರ್ಕಾರದ ಮೇಲೆ ಕ್ರಮ ಕೈಗೊಳ್ಳುತ್ತದೇಯೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಬಿಹಾರ: ಟ್ರಂಪ್ ಬಂದು ವಿಶೇಷ ಸ್ಥಾನಮಾನ ನೀಡುತ್ತಾರಾ?- ನಿತೀಶ್‌ಗೆ ತೇಜಸ್ವಿ ಯಾದವ್ ಪ್ರಶ್ನೆ!

 

ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯಚಿತ್ರಗಳು ವೈರಲ್ ಆಗುತ್ತಿವೆ. ಸತೀಶ್ ಆಚಾರ್‍ಯ ಅವರ ’ಲಸಿಕೆ ರಾಜಕೀಯ’ ವ್ಯಂಗ್ಯಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ.

ಬಿಜೆಪಿಯೇತರ ರಾಜ್ಯಗಳಲ್ಲಿ ಕೊರೊನಾ ಲಸಿಕೆ ಸಿಗುವುದಿಲ್ಲವೆ ಎಂದು ಹಲವು ಮಂದಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಫೇಸ್‌ಬುಕ್‌ನಲ್ಲಿ “ಬಿಹಾರದ ಜನರೇ, ಬಿಜೆಪಿಗೆ ವೋಟ್ ಹಾಕಿದ್ರೆ, 1.25 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ಕೊಟ್ಟ ಹಾಗೆ ಫ್ರೀ ಕೋವಿಡ್ ಲಸಿಕೆಯನ್ನೂ ಕೊಡ್ತಾರೆ” ಎಂಬ ಫೋಸ್ಟ್‌ಗಳು ಶೇರ್ ಆಗುತ್ತಿವೆ.

ಇದನ್ನೂ ಓದಿ: ಬಿಹಾರ ಅಭಿವೃದ್ಧಿ; ಮುಖ್ಯಮಂತ್ರಿ ಅಭ್ಯರ್ಥಿಗಳ ನೇರ ಚರ್ಚೆ: ನಿತೀಶ್‌ಗೆ ತೇಜಸ್ವಿ ಯಾದವ್ ಸವಾಲು!

ಬಿಹಾರದವರೆ -ಬಿಜೆಪಿಗೆ ವೋಟ್ ಹಾಕಿದ್ರೆ,₹1.25 ಲಕ್ಷ ಕೋಟಿ ಪ್ಯಾಕೇಜ್ ಕೊಟ್ಟ ಹಾಗೆ ಫ್ರೀ ಕೋವಿಡ್ ಲಸಿಕೆಯನ್ನೂ ಕೊಡ್ತಾರೆ ??‍♂️

Posted by Sharath Chandra on Thursday, October 22, 2020

 

ಕರ್ನಾಟಕ ವಿದ್ಯಾರ್ಥಿ ಸಂಘದ (ಕೆವಿಎಸ್‌) ಸಂಚಾಲಕರಾದ ಸರೋವರ್ ಬೆಂಕಿಕೆರೆ ಕರ್ನಾಟಕದವರಿಗೆ ಕರೋನಾ ಲಸಿಕೆ ಬೇಕು ಅಂದ್ರೆ ಚುನಾವಣೆ ಬರಬೇಕು ಅಂತಾನ? ಔಷಧ ಲಸಿಕೆಯನ್ನೂ ರಾಜಕೀಯಗೊಳಿಸಿಬಿಟ್ರಲ್ಲ ಗ್ರೇಟ್, ಗ್ರೇಟರ್, ಗ್ರೇಟೆಸ್ಟ್ ಕಣ್ರಿ ನೀವು ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರಣಾಳಿಕೆಯಲ್ಲಿ ನೀಡಲಾಗಿರುವ ಭರವಸೆಯ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ಐಟಿ ವಿಭಾಗದ ಅಮಿತ್ ಮಾಳವಿಯಾ,”ಬಿಜೆಪಿಯ ಪ್ರಣಾಳಿಕೆ ಉಚಿತ ಕೋವಿಡ್ ಲಸಿಕೆಯ ಭರವಸೆ ನೀಡುತ್ತದೆ. ಎಲ್ಲಾ ಕಾರ್ಯಕ್ರಮಗಳಂತೆ ಕೇಂದ್ರವು ರಾಜ್ಯಗಳಿಗೆ ಅತ್ಯಲ್ಪ ದರದಲ್ಲಿ ಲಸಿಕೆಗಳನ್ನು ನೀಡುತ್ತದೆ. ಆರೋಗ್ಯವು ರಾಜ್ಯ ವಿಷಯವಾಗಿರುವುದರಿಂದ ಲಸಿಕೆ ಉಚಿತವಾಗಿ ನೀಡಬೇಕೆ ಅಥವಾ ಬೇಡವೇ ಎಂದು ರಾಜ್ಯಕ್ಕೆ ಸರ್ಕಾರಗಳು ಅದನ್ನು ನಿರ್ಧರಿಸಬೇಕು. ಬಿಜೆಪಿ ಬಿಹಾರದಲ್ಲಿ ಅದನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ” ಎಂದಿದ್ದಾರೆ.

ಲಸಿಕೆ ವಿತರಣೆ ಮತ್ತು ಬೆಲೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಸರ್ಕಾರ ಈವರೆಗೆ ಉತ್ತರಿಸಿಲ್ಲ. ಲಸಿಕೆಗಳ ಸಂಗ್ರಹಣೆ ಮತ್ತು ವಿತರಣೆಗಾಗಿ ಸರ್ಕಾರದ ಸಿದ್ಧತೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಹಲವಾರು ಸಭೆಗಳಲ್ಲಿ ಭಾಗವಹಿಸಿದ್ದಾರೆ.


ಇದನ್ನೂ ಓದಿ: ಬಿಹಾರ: ನಿಯಮಗಳ ಉಲ್ಲಂಘನೆ, ಪಕ್ಷಗಳಿಗೆ ಚುನಾವಣಾ ಆಯೋಗ ಎಚ್ಚರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...