ಕನ್ನಡ ರಾಜ್ಯೋತ್ಸವದಂದು ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಧ್ವಜ ಹಾರಿಸದೇ ಕೇವಲ ರಾಷ್ಟ್ರಧ್ವಜ ಮಾತ್ರ ಹಾರಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿರುವ ಕನ್ನಡಿಗರು, ಟ್ವಿಟರ್‌ನಲ್ಲಿ ಬಿಜೆಪಿ ಸರ್ಕಾರದ ವಿರುದ್ದ “#ನಮ್ಮಧ್ವಜ_ನಮ್ಮಹೆಮ್ಮೆ” ಹ್ಯಾಶ್‌ಟ್ಯಾಗ್ ಮೂಲಕ ಟ್ರೆಂಡ್ ಮಾಡಿದ್ದಾರೆ.
ಕರವೇ ಕರೆ ನೀಡಿದ್ದ ಟ್ವಿಟರ್ ಅಭಿಯಾನಕ್ಕೆ ಸಾವಿರಾರು ಕನ್ನಡಿಗರು ದನಿಗೂಡಿಸಿದ್ದು, ಕರ್ನಾಟಕ ಟ್ರೆಂಡಿಂಗ್‌ನಲ್ಲಿ #ನಮ್ಮಧ್ವಜ_ನಮ್ಮಹೆಮ್ಮೆ ಹ್ಯಾಷ್‌ಟ್ಯಾಗ್ ನಂಬರ್ ಒನ್ ಸ್ಥಾನದಲ್ಲಿದ್ದು, ಆಲ್ ಇಂಡಿಯಾ ಮಟ್ಟದಲ್ಲಿ 29ನೇ ಸ್ಥಾನ ಪಡೆದಿದೆ. ಒಂದು ಗಂಟೆಯ ಅವಧಿಯಲ್ಲಿಯೇ 5,000 ಹೆಚ್ಚು ಟ್ವೀಟ್‌ಗಳು ದಾಖಲಾಗಿವೆ.

ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ನಾರಾಯಣ ಗೌಡ್ರು, “ಕನ್ನಡ ಧ್ವಜಾರೋಹಣ ಮಾಡದ ಕರ್ನಾಟಕ ಸರ್ಕಾರದ ಮಂತ್ರಿಗಳಿಗೆ ಧಿಕ್ಕಾರ. ಕನ್ನಡವೆಂಬುದು ನಮ್ಮ ಗುರುತು, ನಮ್ಮ ಜೀವ, ನಮ್ಮ ಉಸಿರು, ನಮ್ಮ ಬದುಕು. ಕನ್ನಡ ಬೇಡ ಎನ್ನುವವರು ಕರ್ನಾಟಕಕ್ಕೂ ಬೇಡ. ಕನ್ನಡ ಧ್ವಜಕ್ಕೆ ಅಪಮಾನಿಸಿದವರು ಕನ್ನಡ ದ್ರೋಹಿಗಳು. ಈ ಪ್ರಮಾದಕ್ಕೆ ಕಾರಣರಾದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಜಾಗೊಳಿಸಿ” ಎಂದು ಆಗ್ರಹಿಸಿದ್ದಾರೆ.
ಕನ್ನಡ ಧ್ವಜಾರೋಹಣ ಮಾಡದ ಕರ್ನಾಟಕ ಸರ್ಕಾರದ ಮಂತ್ರಿಗಳಿಗೆ ಧಿಕ್ಕಾರ. ಕನ್ನಡವೆಂಬುದು ನಮ್ಮ ಗುರುತು,ನಮ್ಮ ಜೀವ, ನಮ್ಮ ಉಸಿರು,ನಮ್ಮ ಬದುಕು. ಕನ್ನಡ ಬೇಡ ಎನ್ನುವವರು ಕರ್ನಾಟಕಕ್ಕೂ ಬೇಡ. ಕನ್ನಡ ಧ್ವಜಕ್ಕೆ ಅಪಮಾನಿಸಿದವರು ಕನ್ನಡ ದ್ರೋಹಿಗಳು. ಈ ಪ್ರಮಾದಕ್ಕೆ ಕಾರಣರಾದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಜಾಗೊಳಿಸಿ. #ನಮ್ಮಧ್ವಜ_ನಮ್ಮಹೆಮ್ಮೆ pic.twitter.com/eAPg3cUojH
— Narayanagowdru T.A. (@narayanagowdru) November 2, 2020
ಇದನ್ನೂ ಓದಿ: ರಾಜ್ಯೋತ್ಸವದಂದು ಕನ್ನಡ ಧ್ವಜ ಹಾರಿಸದ ಸರ್ಕಾರದ ನಡೆಗೆ ಕನ್ನಡಿಗರ ಆಕ್ರೋಶ: ಟ್ವಿಟರ್ ಆಂದೋಲನಕ್ಕೆ ಕರೆ
ಕರ್ನಾಟಕ ರಕ್ಷಣಾ ವೇದಿಕೆ ಸರಣಿ ಟ್ವೀಟ್ ಮಾಡಿದ್ದು, ಸರ್ಕಾರದ ವಿರುದ್ದ ತೀವ್ರ ಅಸಮಧಾನ ವ್ಯಕ್ತಪಡಿದೆ. “ಕನ್ನಡ ಬಾವುಟ ನಮ್ಮೆಲ್ಲರ ಸ್ವಾಭಿಮಾನದ ಪ್ರತೀಕ. ಅದನ್ನು ನಾಡಜನರೆಲ್ಲರೂ ಅಭಿಮಾನಪೂರ್ವಕವಾಗಿ ಒಪ್ಪಿಕೊಂಡು ಆದರಿಸಿದ್ದಾರೆ. ಕರ್ನಾಟಕವನ್ನು ಆಳಿದ ಎಲ್ಲ ಸರ್ಕಾರಗಳೂ ಕನ್ನಡ ಧ್ವಜಾರೋಹಣ ನಡೆಸುತ್ತ ಕನ್ನಡಿಗರ ಭಾವನೆಗಳನ್ನು ಗೌರವಿಸಿದೆ. ಬಿಜೆಪಿ ಸರ್ಕಾರದ ಮಂತ್ರಿಗಳು ಈ ಪರಂಪರೆಯನ್ನು ನಾಶಪಡಿಸಲು ಯತ್ನಿಸುತ್ತಿದ್ದಾರೆ” ಎಂದು ಕಿಡಿಕಾರಿದೆ.
ಕನ್ನಡ ರಾಜ್ಯೋತ್ಸವದ ದಿನ ಎಲ್ಲ ಜಿಲ್ಲಾಕೇಂದ್ರಗಳಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಕನ್ನಡ ಧ್ವಜ ಹಾರಿಸುವುದು ಮೊದಲಿನಿಂದ ನಡೆದುಕೊಂಡುಬಂದ ಪರಿಪಾಠ. ಆದರೆ ಬಿಜೆಪಿ ಸರ್ಕಾರದ ಮಂತ್ರಿಗಳು ಈ ಬಾರಿ ಕನ್ನಡ ಧ್ವಜಾರೋಹಣ ಮಾಡದೆ ಕನ್ನಡ ದ್ರೋಹವೆಸಗಿದ್ದಾರೆ. ಇದನ್ನು ಸ್ವಾಭಿಮಾನಿ ಕನ್ನಡಿಗರು ಸಹಿಸುವುದಿಲ್ಲ. #ನಮ್ಮಧ್ವಜ_ನಮ್ಮಹೆಮ್ಮೆ
— ಕರವೇ (KRV) (@karave_KRV) November 2, 2020
ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಕೂಡಾ ಸರಣಿ ಟ್ವೀಟ್ ಮಾಡಿದ್ದಾರೆ. “ಹಿಂದಿ ಹೇರಿಕೆ ತಡೆಯಿರಿ ಅಂದ್ರೆ ಅದಕ್ಕೆ ತಾಕತ್ ಇಲ್ಲಾ. ಬ್ಯಾಂಕ್ ಪರೀಕ್ಷೆಗಳನ್ನು ಕನ್ನಡದಲ್ಲಿ ತನ್ನಿ ಅಂದ್ರೆ ಅದಕ್ಕೆ ತಾಕತ್ ಇಲ್ಲಾ. ಕನ್ನಡ ವಿರೋಧಿ ನೀತಿ ಅನುಸರಿಸುವ ಎಂಇಎಸ್ ವಿರುದ್ಧ ಕ್ರಮ ತಗೊಂಡಿಲ್ಲ. ಕನ್ನಡಿಗರಿಗೆ ಉದ್ಯೋಗ ಕಾನೂನು ಮಾಡಲು ಶಕ್ತಿ ಇಲ್ಲ. ಆದ್ರೆ ನಾಡ ಧ್ವಜ ಹಾರಿಸದೆ ದ್ರೋಹ ಎಸಗಿದ ನಿಮಗೆ ಕನ್ನಡಿಗರ ಕ್ಷಮೆ ಇಲ್ಲ” ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಜಗತ್ತು ಇರೋವರೆಗೂ ನಮ್ಮ ನಾಡ ಧ್ವಜವನ್ನು ನೆಲ ಮುಟ್ಟಿಸೋ ಗಂಡು ಇನ್ನು ಹುಟ್ಟಿಲ್ಲ,ಹುಟ್ಟೋಲ್ಲಾ.
ನೀವು ಹಾರಿಸದರೆಷ್ಟು ಬಿಟ್ಟರೆಷ್ಟು ಪ್ರತಿ ಕನ್ನಡಿಗ ತನ್ನ ಹೃದಯದಲ್ಲಿ ಸದಾ ಹಾರಿಸಿಯೇ ತಿರುತ್ತಾನೆ.
ಇಂದು ಧ್ವಜ ಬೇಡ ಅನ್ನೋರು ನಾಳೆ ಕನ್ನಡವು ಬೇಡ,ಕನ್ನಡಿಗರು ಬೇಡ ಅನ್ನೋಕು ಹೇಸಲ್ಲ ನೀವುಗಳು..ನಾಚಿಕೆ ಆಗ್ಬೇಕು#ನಮ್ಮಧ್ವಜ_ನಮ್ಮಹೆಮ್ಮೆ pic.twitter.com/65U2aPOLlP— ರೂಪೇಶ್ ರಾಜಣ್ಣ(RUPESH RAJANNA) (@rajanna_rupesh) November 2, 2020
ಇದನ್ನೂ ಓದಿ: ’ಕನ್ನಡ ಕಂಕಣ ದಿನ’; ಕರ್ನಾಟಕ ರಣಧೀರ ಪಡೆಯಿಂದ ವಿಭಿನ್ನ ರಾಜ್ಯೋತ್ಸವ!
ಜಯತೀರ್ಥ ನಾಡಗೌಡ ಅವರು, “ಜರ್ಮನಿಯಲ್ಲಿ 88 ಲಕ್ಷ ಜನಸಂಖ್ಯೆಯಿದೆ. ಅಲ್ಲಿನ ರಾಜ್ಯಗಳಿಗೆ ತನ್ನದೆ ಆದ ಧ್ವಜವಿದ್ದ ಹೊರತೂ ಅಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ ಕರ್ನಾಟಕ ಸರ್ಕಾರಕ್ಕೆ ಮಾತ್ರ ಯಾಕೆ ಸಮಸ್ಯೆ” ಎಂದು ಪ್ರಶ್ನಿಸಿದ್ದಾರೆ.
Germany with population of roughly around 88 millions, has no problems with state flags. Why is GOK has problem with it? #ನಮ್ಮಧ್ವಜ_ನಮ್ಮಹೆಮ್ಮೆ https://t.co/dXJuhs2UkI
— Jayateerth Nadagouda (@jayateerthbn) November 2, 2020
ಭರತ್. ಪಿ ಅವರು, “ಸಿ.ಟಿ. ರವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅವಮಾನ, ಮುಖ್ಯಮಂತ್ರಿಗಳೇ ಈ ವ್ಯಕ್ತಿಯನ್ನು ಮೊದಲು ಕಿತ್ತುಹಾಕಿ” ಎಂದು ಆಗ್ರಹಿಸಿದ್ದಾರೆ.
@CTRavi_BJP an Insult to Kannada & Cultural Department @CMofKarnataka sack this fellow first.#ನಮ್ಮಧ್ವಜ_ನಮ್ಮಹೆಮ್ಮೆ pic.twitter.com/5Hc5urnqYS
— ಭರತ್.ಪಿ (@Bharathpkgl) November 2, 2020
ಇದನ್ನೂ ಓದಿ: ಕನ್ನಡ ಏಕೀಕರಣದಿಂದಲೂ ಕನ್ನಡ ಭಾಷೆಯ ಏಳ್ಗೆಗಾಗಿ, ಬಸವ ತತ್ವಕ್ಕಾಗಿ ಶ್ರಮಿಸುತ್ತಿರುವ ಭಾಲ್ಕಿ ಮಠ
ಮಂಜು ಎನ್ನುವವರು, “ನಿಮ್ಮ ಅಸ್ಮಿತೆಯನ್ನು ಕಳೆದುಕೊಳ್ಳದೆ ದೇಶವನ್ನು ಪ್ರೀತಿಸಬಹುದು, ನೋಡ್ರೀ ಹುಸಿ ದೇಶ ಭಕ್ತರೆ” ಎಂದು ಅಮೆರಿಕ ಸಂಯುಕ್ತ ಸಂಸ್ಥಾನದ ರಾಜ್ಯಗಳು ಪ್ರತ್ಯೇಕ ಧ್ವಜ ಹೊಂದಿರುವ ಚಿತ್ರವನ್ನು ರೀಟ್ವೀಟ್ ಮಾಡಿ ಉದಾಹರಣೆ ಸಮೇತ ಪೋಸ್ಟ್ ಮಾಡಿದ್ದಾರೆ.
ನೋಡ್ರಿ ಹುಸಿ ದೇಶ ಭಕ್ತರೇ ?.
You can Love your country even W/o loosing your identity!. #ನಮ್ಮಧ್ವಜ_ನಮ್ಮಹೆಮ್ಮೆ https://t.co/10ZtwhUkHg pic.twitter.com/CkHjGvEbad
— Manju (@ManjuKBye) November 2, 2020
ವಿಷ್ಣು, ಕನ್ನಡ ರಾಜ್ಯೋತ್ಸವದ ದಿನ ಕನ್ನಡ ಧ್ವಜವನ್ನು ಆರೋಹಣ ಮಾಡದವರಿಗೆ ನಾಚಿಕೆಯಾಗಬೇಕು ಎಂದು ಟ್ವೀಟ್ ಮಾಡಿದ್ದಾರೆ.
Shame on those who have not hoisted Karnataka Flag on the occasion of Kannada Rajyotsava.????#ನಮ್ಮಧ್ವಜ_ನಮ್ಮಹೆಮ್ಮೆ pic.twitter.com/xBPGWMkR4X
— Vishnu (@iamvishnu111) November 2, 2020
ಇದನ್ನೂ ಓದಿ: ಕನ್ನಡಕ್ಕೆ ಕನ್ನಡದ್ದೆ ಊಟ ಉಂಟಾ? ಡಾ. ಕೆ.ಸಿ ರಘು


