Homeಕರ್ನಾಟಕಕವಿ ಬಿದಲೋಟಿ ರಂಗನಾಥ್, ಶೋಭಾನಾಯಕ್‌ಗೆ ಗವಿ ಸಿದ್ದಬಳ್ಳಾರಿ ಕಾವ್ಯ ಪ್ರಶಸ್ತಿ

ಕವಿ ಬಿದಲೋಟಿ ರಂಗನಾಥ್, ಶೋಭಾನಾಯಕ್‌ಗೆ ಗವಿ ಸಿದ್ದಬಳ್ಳಾರಿ ಕಾವ್ಯ ಪ್ರಶಸ್ತಿ

- Advertisement -
- Advertisement -

ರಾಜ್ಯಮಟ್ಟದ 2020ರ ಸಾಲಿನ ಕವಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಯು ತುಮಕೂರು ಜಿಲ್ಲೆ ಮಧುಗಿರಿಯ ಕವಿ ಬಿದಲೋಟಿ ರಂಗನಾಥ್ ಅವರ ಕವನಸಂಕಲನ ಹಸ್ತಪ್ರತಿ “ದೇವರಿಲ್ಲದ ಸಾಕ್ಷಿಗೆ ರುಜು” ಮತ್ತು ಉತ್ತರಕನ್ನಡ ಜಿಲ್ಲೆಯ ಶೋಭಾನಾಯಕ್ ಅವರ “ಶಯ್ಯಾಗೃಹದ ಸುದ್ದಿಗಳು” ಕವನಸಂಕಲನ ಹಸ್ತಪ್ರತಿಗೆ ಲಭಿಸಿದೆ.

ನಾಡಿನ ಖ್ಯಾತ ಸಾಹಿತಿ, ಜನಪರ ಹೋರಾಟಗಾರರೂ ಆಗಿದ್ದ ಕೊಪ್ಪಳದ ಗವಿಸಿದ್ದ ಬಳ್ಳಾರಿ ಅವರ ಹೆಸರಿನಲ್ಲಿ ಪ್ರತಿವರ್ಷ ಕವನ ಸಂಕಲನದದ ಹಸ್ತಪ್ರತಿಗೆ ರಾಜ್ಯಮಟ್ಟದಲ್ಲಿ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಿ ಪ್ರಶಸ್ತಿ ನೀಡಲಾಗುತ್ತಿದ್ದು, 2020 ನೇ ಸಾಲಿನ “ಗವಿಸಿದ್ದ ಬಳ್ಳಾರಿ ಕಾವ್ಯ ಪ್ರಶಸ್ತಿ” ಯನ್ನು ಈ ಬಾರಿ ಬಿದಲೋಟಿ ರಂಗನಾಥ್ ಮತ್ತು ಶೋಭಾನಾಯಕ್ ಅವರ ಕವನ ಸಂಕಲನಗಳು ಸಮಾನಂತರವಾಗಿ ಆಯ್ಕೆಯಾಗಿವೆ.

ಹಿರಿಯ ಕವಿಗಳಾದ ಸತೀಶ ಕುಲಕರ್ಣಿ ಮತ್ತು ಈಶ್ವರ್ ಹತ್ತಿ ತೀರ್ಪುಗಾರರಾಗಿದ್ದರು. ಈ ಸಲ ಪ್ರಶಸ್ತಿಗೆ ಒಟ್ಟು 56 ಹಸ್ತಪ್ರತಿಗಳು ಬಂದಿದ್ದವು.

ವಿಜೇತರಿಗೆ 5,000 ರೂ. ನಗದು ಬಹುಮಾನ ಮತ್ತು ಫಲಕಗಳನ್ನು ಡಿಸೆಂಬರ್ ತಿಂಗಳು ಕೊಪ್ಪಳದಲ್ಲಿ ನಡೆಯುವ ಗವಿಸಿದ್ದ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ವಿತರಿಸಲಾಗುವುದೆಂದು ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಮತ್ತು ತಳಮಳ ಪ್ರಕಾಶನದ ಪರವಾಗಿ ಮಹೇಶ ಬಳ್ಳಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಯುವ ಬರಹಗಾರ, ಪತ್ರಕರ್ತರಾದ ಎನ್ ರವಿಕುಮಾರ್ ಟೆಲೆಕ್ಸ್‌ರವರ “ನೆರ್ಕೆ ಗೋಡೆಯ ರತ್ನಪಕ್ಷಿ” ಹಸ್ತಪ್ರತಿಗೆ ಪ್ರಶಸ್ತಿ ನೀಡಲಾಗಿತ್ತು.


ಇದನ್ನೂ ಓದಿ: ಹೊಸ ಅಲೆ ಸೃಷ್ಟಿಸಿದ ‘ಮಹಾನಾಯಕ’ ಧಾರಾವಾಹಿ: ವರ್ಷದ ಅತ್ಯುನ್ನತ ಡಬ್ಬಿಂಗ್ ವಿಭಾಗದಲ್ಲಿ ಪ್ರಶಸ್ತಿ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read