Homeಕರ್ನಾಟಕಬೆಂಗಳೂರು: 1,000 ಕ್ಕೂ ಹೆಚ್ಚು ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಂಡ ಟ್ರಾಫಿಕ್ ಪೊಲೀಸ್

ಬೆಂಗಳೂರು: 1,000 ಕ್ಕೂ ಹೆಚ್ಚು ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಂಡ ಟ್ರಾಫಿಕ್ ಪೊಲೀಸ್

ಕರೆದ ಸ್ಥಳಕ್ಕೆ ಹೋಗದ 270 ಆಟೋ ಮತ್ತು ಹೆಚ್ಚಿನ ದರ ವಿಧಿಸಿದ 312 ಆಟೋಗಳ ವಿರುದ್ಧ ಪ್ರಕರಣದ ದಾಖಲಾಗಿದೆ

- Advertisement -
- Advertisement -

ಬೆಂಗಳೂರಿನ ಆಟೋ ಚಾಲಕರ ವಿರುದ್ಧ ನಗರದ ಟ್ರಾಫಿಕ್ ಪೊಲೀಸರು ಸೋಮವಾರ ವಿಶೇಷ ಕಾರ್ಯಾಚರಣೆ ನಡೆಸಿದ್ದು, ನಿಯಮ ಉಲ್ಲಂಘಿಸಿದ ಸಾವಿರಕ್ಕಿಂತಲೂ ಹೆಚ್ಚಿನ ಆಟೋ ಚಾಲಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡಿದ, ಸವಾರಿಯನ್ನು ನಿರಾಕರಿಸಿದ ಹಾಗೂ ಸಂಚಾರಿ ನಿಯಮ ಉಲ್ಲಂಘಿಸಿದ 312 ಆಟೋಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ನಿನ್ನೆ ನಡೆಸಿದ ವಿಶೇಷ ಕಾರ್ಯಚರಣೆಯಲ್ಲಿ, ಟ್ರಾಫಿಕ್ ಪೊಲೀಸರು 270 ಆಟೋ ಚಾಲಕರವ ವಿರುದ್ಧ ಸವಾರಿ ನಿರಾಕರಿಸಿದಕ್ಕಾಗಿ ಮತ್ತು 312 ಆಟೋ ಚಾಲಕರ ವಿರುದ್ಧ ಪ್ರಯಾಣಿಕರಿಗೆ ಹೆಚ್ಚಿನ ಶುಲ್ಕ ವಿಧಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಒಟ್ಟು 1,116 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಹೆಚ್ಚಿನ ಹಣಕ್ಕಾಗಿ ಬೇಡಿಕೆ ಸೇರಿದಂತೆ, ಪ್ರಯಾಣಿಕರು ಬಯಸಿದ ಸ್ಥಳಗಳಿಗೆ ಕರೆದೊಯ್ಯಲು ನಿರಾಕರಿಸಿದ ಬಗ್ಗೆ ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ” ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಆಟೋ ದರ ಹೆಚ್ಚಳ; ಎಷ್ಟು ದೂರಕ್ಕೆ ಎಷ್ಟಾಗುತ್ತದೆ? ಇಲ್ಲಿದೆ ಸುಲಭ ಲೆಕ್ಕ!

“ಅನೇಕ ಪೊಲೀಸರು ಗ್ರಾಹಕರಂತೆ ನಟಿಸಿ ಆಟೋ ಹತ್ತಿದ್ದಾರೆ. ಈ ವೇಳೆ ಆಟೋ ಚಾಲಕರು ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಾಗ ಅಥವಾ ಸವಾರಿಗಳನ್ನು ನಿರಾಕರಿಸಿದಾಗ, ಅದಕ್ಕೆ ಅನುಗುಣವಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ”

“ಚಾಲನೆಯ ಸಮಯದಲ್ಲಿ, ಆಟೋ ಚಾಲಕರು ಸಮವಸ್ತ್ರದಲ್ಲಿ ಇಲ್ಲದಿರುವುದು, ಚಾಲನೆ ಮಾಡುವಾಗ ಮೊಬೈಲ್ ಫೋನ್‌ಗಳನ್ನು ಬಳಸುವುದು, ದೋಷಯುಕ್ತ ನಂಬರ್ ಪ್ಲೇಟ್‌ಗಳು ಮತ್ತು ಇತರ ಸಂಚಾರಿ ಅಪರಾಧಗಳಿಗಾಗಿ ಕೂಡಾ ಪ್ರಕರಣ ದಾಖಲಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ದೂರುಗಳು ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ನಗರದ 44 ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ದಿಢೀರ್ ಕಾರ್ಯಾಚರಣೆ ನಡೆಸಿದ್ದಾರೆ. ಎಂ.ಜಿ. ರಸ್ತೆ, ರೆಸಿಡೆನ್ಸಿ ರಸ್ತೆ, ಕ್ವೀನ್ಸ್ ರಸ್ತೆ, ಸದಾಶಿವನಗರ, ಕಾರ್ಪೊರೇಷನ್ ಸರ್ಕಲ್, ಅಶೋಕನಗರ, ವಿಲ್ಸನ್ ಗಾರ್ಡನ್, ಇಂದಿರಾನಗರ, ಪುಲಕೇಶಿನಗರ, ಶಿವಾಜಿನಗರ, ಮಡಿವಾಳ, ಆಡುಗೋಡಿ, ಎಲೆಕ್ಟ್ರಾನಿಕ್ಸ್ ಸಿಟಿ, ಮೈಕೋ ಲೇಔಟ್, ವೈಟ್‌ಫೀಲ್ಡ್, ಎಚ್‌ಎಸ್‌ಆರ್ ಲೇಔಟ್, ಸಿಟಿ ಮಾರ್ಕೆಟ್, ಮಲ್ಲೇಶ್ವರಂ, ಪೀಣ್ಯ, ಹೆಬ್ಬಾಳ, ಚಿಕ್ಕಜಾಲ, ಜಯನಗರ, ಬನಶಂಕರಿ ಮತ್ತಿತರರ ಪ್ರದೇಶಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಹೈಕೋರ್ಟ್‌‌ ಆದೇಶದ ನಂತರ ತನ್ನ ಕನಿಷ್ಠ ಆಟೋ ದರವನ್ನು ರೂ. 35 ಕ್ಕೆ ಇಳಿಸಿದ ಉಬರ್‌‌

ಈ ಸಂದರ್ಭದಲ್ಲಿ ಪೊಲೀಸರು 312 ವಾಹನಗಳನ್ನು ವಶಪಡಿಸಿಕೊಂಡಿದ್ದು, ಚಾಲಕರು ದಂಡ ಪಾವತಿಸಿದ ನಂತರ 307 ವಾಹನಗಳನ್ನು ಬಿಡುಗಡೆ ಮಾಡಿದ್ದಾರೆ. ಇನ್ನೂ ಐದು ವಾಹನಗಳು ಪೊಲೀಸರ ವಶದಲ್ಲಿವೆ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಹೇಳಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...