Homeಕರ್ನಾಟಕಬೆಂಗಳೂರಿನಲ್ಲಿ ಆಟೋ ದರ ಹೆಚ್ಚಳ; ಎಷ್ಟು ದೂರಕ್ಕೆ ಎಷ್ಟಾಗುತ್ತದೆ? ಇಲ್ಲಿದೆ ಸುಲಭ ಲೆಕ್ಕ!

ಬೆಂಗಳೂರಿನಲ್ಲಿ ಆಟೋ ದರ ಹೆಚ್ಚಳ; ಎಷ್ಟು ದೂರಕ್ಕೆ ಎಷ್ಟಾಗುತ್ತದೆ? ಇಲ್ಲಿದೆ ಸುಲಭ ಲೆಕ್ಕ!

- Advertisement -
- Advertisement -

ಡಿಸೆಂಬರ್‌ 1 ರ ಬುಧವಾರದಿಂದ ಆಟೋ ರಿಕ್ಷಾದ ಹೊಸ ದರಗಳು ಜಾರಿಗೆ ಬಂದಿವೆ. ಇದು 8 ವರ್ಷಗಳ ಬಳಿಕ ರಾಜಧಾನಿಯಲ್ಲಿ ಮಾಡಲಾಗಿರುವ ಆಟೋರಿಕ್ಷಾ ದರಗಳನ್ನು ಪರಿಷ್ಕರಣೆಯಾಗಿದೆ. ಇಂಧನ ದರಗಳು, ವಾಹನ ಬಿಡಿಬಾಗಗಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ದರ ಏರಿಕೆ ಮಾಡುವುದು ದುಡಿಯುವ ವರ್ಗಕ್ಕೆ ಅನಿವಾರ್ಯವಾಗಿದೆ. ದರ ಏರಿಕೆಯಾಗಿದ್ದು ನಿಜವಾದರೂ, ಹಲವು ಆಟೋಗಳಲ್ಲಿ ಹಳೆಯ ಮೀಟರುಗಳೇ ಚಲಾವಣೆಯಲ್ಲಿದೆ. ಕಳೆದ ನವೆಂಬರ್‌ನಲ್ಲಿ ಸರ್ಕಾರವು ದರ ಹೆಚ್ಚಳಕ್ಕೆ ಅನುಮತಿ ನೀಡಿರುವುದರಿಂದ ಮುಂದಿನ ಫೆಬ್ರವರಿ ತಿಂಗಳ ಒಳಗಡೆ ಮೀಟರ್‌ಗಳನ್ನು ಅಪ್‌ಡೇಟ್‌‌ ಮಾಡಿಕೊಳ್ಳಲು ಚಾಲಕರಿಗೆ ಸಮಯ ನೀಡಲಾಗಿದೆ.

ಈ ಹಿಂದೆ ಬೆಂಗಳೂರಿನಲ್ಲಿ ಎರಡು ಕಿ.ಮೀ. ವರೆಗೆ ಕನಿಷ್ಠ ದರ 25 ರೂಪಾಯಿ ಇತ್ತು. ಈಗ ಈ ಕನಿಷ್ಠ ದರವು 30 ರೂಗೆ ಹೆಚ್ಚಾಗಿದೆ. ಜೊತೆಗೆ ನಂತರದ ಪ್ರತಿ ಕಿ.ಮೀ ಗೆ 15 ರೂ. ಆಗಿದೆ. ದರ ಹೆಚ್ಚಳದ ಬಗ್ಗೆ ಸರ್ಕಾರದಿಂದ ಅಧಿಸೂಚನೆ ಬಂದು ಕೇವಲ ಒಂದೇ ತಿಂಗಳು ಆಗಿರುವುದರಿಂದ ಮುಂದಿನ ವರ್ಷದ ಫೆಬ್ರವರಿವೆರೆಗೆ ಆಟೋದಲ್ಲಿನ ಮೀಟರ್‌ ಅಪ್‌ಡೇಟ್‌ ಮಾಡಲು ಚಾಲಕರಿಗೆ ಸಮಯವಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಆಟೋರಿಕ್ಷಾ ದರ ಏರಿಕೆ: ಕನಿಷ್ಠ ಬೆಲೆ 25 ರೂ.ನಿಂದ 30 ರೂಪಾಯಿಗೆ ಹೆಚ್ಚಳ

ಪ್ರಸ್ತುತ ಹೆಚ್ಚಿನ ಆಟೋಗಳಲ್ಲಿ ಹಳೆಯ ಮೀಟರ್‌ ಇರುವುದರಿಂದ ಆಟೋ ಚಾಲಕರಿಗೆ ಮತ್ತು ಪ್ರಯಾಣಿಕರಿಗೆ ಗೊಂದಲಗಳಿರುವ ಕಾರಣಕ್ಕೆ ನಾನುಗೌರಿ.ಕಾಂ ಓದುಗರಿಗಾಗಿ ಕೆಲವು ಮಾದರಿಗಳನ್ನು ನೀಡಿದ್ದ ಕೆಳಗಿನಂತಿವೆ.

ಪ್ರಯಾಣದ ದೂರ (ಕಿ. ಮೀ)ನಲ್ಲಿಡಿಸೆಂಬರ್‌ 1 ರಿಂದ ಅನ್ವಯಾಗಲಿರುವ ಹೊಸ ದರ
ಮೊದಲ 2 ಕಿ.ಮೀ ವರೆಗೆ30 ರೂ.
2.2 ಕಿ.ಮೀ 33 ರೂ.
2.4 ಕಿ.ಮೀ 36 ರೂ.
2.6 ಕಿ.ಮೀ 39 ರೂ.
2.8 ಕಿ.ಮೀ 42 ರೂ.
03 ಕಿ.ಮೀ 45 ರೂ.
3.2 ಕಿ.ಮೀ48 ರೂ.
3.4 ಕಿ.ಮೀ 51 ರೂ.
3.6 ಕಿ.ಮೀ 54 ರೂ.
ಹೀಗೇ ಪ್ರತಿ 0.2 ಕಿ.ಮಿಗೆ ಮೂರು ರೂ ಹೆಚ್ಚಾಗುತ್ತಾ ಹೋಗುತ್ತದೆ. (ಅಂದರೆ ಪ್ರತಿ 0.1 ಕಿ.ಮೀ.ಗೆ 1.5 ರೂ)
ಚಿತ್ರದಲ್ಲಿರುವ ಮೀಟರ್‌ ಹಳೆಯ ದರವೇ(37) ತೋರಿಸುತ್ತಿದೆ. ಹೊಸ ದರದ ಅನ್ವಯ, 2.9 ಕಿ.ಮೀ ಗೆ 43.5 ರೂ ಅಗಲಿದೆ. (2.9×15=43.5)

ಜೊತೆಗೆ, ಹೊಸ ಪರಿಷ್ಕೃತ ದರದಂತೆ, ಕಾಯುವಿಕೆಯ ದರ ಮೊದಲ 5 ನಿಮಿಷ ಉಚಿತವಾಗಿದೆ. ನಂತರ ಪ್ರತಿ  15 ನಿಮಿಷಕ್ಕೆ 5 ರೂಪಾಯಿ ಹೆಚ್ಚುವರಿಯಾಗಿ ಪ್ರಯಾಣಿಕರು ಪಾವತಿಸಬೇಕಾಗಿದೆ. ಅಲ್ಲದೆ, ಪ್ರಯಾಣಿಕರ ಲಗೇಜು 20 ಕೆಜಿ ಒಳಗಿದ್ದರೆ ಉಚಿತವೆಂದು ಪರಿಗಣಿಸಬೇಕಾಗಿದೆ. ಪ್ರಯಾಣಿಕರ ಲಗೇಜು 20 ಕೆಜಿಗಿಂತಲೂ ಅಧಿಕವಾಗಿದ್ದರೆ, ಪ್ರತಿ 20 ಕೆಜಿ ಲಗೇಜಿಗೆ 5 ರೂಪಾಯಿ ಹೆಚ್ಚುವರಿಯಾಗಿ ಪಾವತಿಸಬೇಕಾಗಿದೆ. ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ಒಳಗೆ ಸಾಮಾನ್ಯ ದರದ ಜೊತೆಗೆ ಅದರ ಅರ್ಧ ಪಟ್ಟು ದರವನ್ನು ಪ್ರಯಾಣಿಕರು ಆಟೋಗೆ ಪಾವತಿಸಬೇಕಾಗಿದೆ.

ಪೆಟ್ರೋಲ್, ಡೀಸೆಲ್, ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆಯಿಂದಾಗಿ ಆಟೋ ಚಾಲಕರು ಸರ್ಕಾರಕ್ಕೆ ಬೆಲೆ ಏರಿಕೆ ಮಾಡಲು ಮನವಿ ಸಲ್ಲಿಸಿದ್ದರು. ಚಾಲಕರ ಈ ಮನವಿಯನ್ನು ಪುರಸ್ಕರಿಸಿ ದರ ಹೆಚ್ಚಳಕ್ಕೆ ಅನುಮತಿ ನೀಡಿದೆ. ಬೆಂಗಳೂರಿನಲ್ಲಿ 8 ವರ್ಷಗಳ ಬಳಿಕ ಆಟೋರಿಕ್ಷಾ ದರಗಳನ್ನು ಪರಿಷ್ಕರಣೆ ಮಾಡಲಾಗಿದೆ. 8 ವರ್ಷಗಳ ಹಿಂದೆ 2013 ರಲ್ಲಿ ಆಟೋರಿಕ್ಷಾ ದರವನ್ನು ಕೊನೆಯ ಬಾರಿಗೆ ಏರಿಕೆ ಮಾಡಲಾಗಿತ್ತು.

ಇದನ್ನೂ ಓದಿ: ತೈಲ ದರ ಹೆಚ್ಚಳ: ಆಟೋ ಎಳೆದ ಶಶಿ ತರೂರ್, ಸೈಕಲ್ ಸವಾರರಾದ ತೇಜಸ್ವಿ ಯಾದವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...