ತೈಲ ಬೆಲೆ ಹೆಚ್ಚಳ ಹಿನ್ನೆಲೆ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗುತ್ತಿದೆ. ವಿರೋಧ ಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಬೀದಿಗಿಳಿದಿವೆ. ವಿಭಿನ್ನ ರೀತಿಯ ಪ್ರತಿಭಟನೆಗೆ ತೈಲ ದರ ಹೆಚ್ಚಳ ಕಾರಣವಾಗುತ್ತಿದ್ದು. ಶುಕ್ರವಾರ ಕೇರಳದಲ್ಲಿ ಸಂಸದ ಶಶಿ ತರೂರ್ ಆಟೋ ಎಳೆದರೆ, ಇತ್ತ ಬಿಹಾರದಲ್ಲಿ ತೇಜಸ್ವಿ ಯಾದವ್ ಸೈಕಲ್ ಸವಾರಿ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ಇಂಧನ ಬೆಲೆ ಏರಿಕೆ ವಿರುದ್ಧ ಕೇರಳದಲ್ಲಿ ಪ್ರತಿಭಟನೆ ನಡೆಯುತ್ತಲೇ ಇದೆ. ಯುವ ಜನತೆ ವಿಭಿನ್ನ ರೀತಿಯಲ್ಲಿ ಸರ್ಕಾರದ ಗಮನ ಸೆಳೆಯುತ್ತಿದ್ದಾರೆ. ಕೇರಳ ಸಚಿವಾಲಯದ ಹೊರಗೆ ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ಮತ್ತು ಇತರ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ತೈಲ ದರ ಹೆಚ್ಚಾದ ಹಿನ್ನೆಲೆ ಆಟೋ ಚಾಲಕರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಜೊತೆಗೆ ಆಟೋಗಳಿಗೆ ಹಗ್ಗ ಹಾಕಿ ಎಳೆದುಕೊಂಡು ಹೋಗುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಬೆಲೆ ಏರಿಕೆ: ಮದುಮಕ್ಕಳಿಗೆ ಪೆಟ್ರೋಲ್, ಗ್ಯಾಸ್ ಸಿಲಿಂಡರ್, ಈರುಳ್ಳಿ ಉಡುಗೊರೆ!
#WATCH | Kerala: Shashi Tharoor, Congress MP from Thiruvananthapuram, and other party workers protest against fuel price rise, outside Kerala Secretariat pic.twitter.com/2F2pKTwNIh
— ANI (@ANI) February 26, 2021
ಬಿಹಾರ ವಿಧಾನಸಭೆ ಬಜೆಟ್ ಅಧಿವೇಶನದ 6 ನೇ ದಿನವಾದ ಶುಕ್ರವಾರ, ವಿರೋಧ ಪಕ್ಷದ ನಾಯಕ, ಆರ್‌ಜೆಡಿ ಮುಖಂಡ ತೇಜಶ್ವಿ ಯಾದವ್ ಅಧಿವೇಶನದಲ್ಲಿ ಭಾಗವಹಿಸಲು ಸೈಕಲ್ ಮೂಲಕ ವಿಧಾನಸಭೆಯನ್ನು ತಲುಪಿದರು. ಸೋಮವಾರ ಕೂಡ ತೇಜಸ್ವಿ ಅಸೆಂಬ್ಲಿಗೆ ಟ್ಯ್ರಾಕ್ಟರ್‌ನಲ್ಲಿ ಬಂದಿದ್ದರು. ಇಂಧನ ಬೆಲೆ ಹೆಚ್ಚಳದ ವಿರುದ್ಧ ತೇಜಸ್ವಿ ಯಾದವ್ ಪ್ರತಿಭಟನೆ ನಡೆಸುತ್ತಿರುವ ಪರಿ ಇದಾಗಿದೆ.
ನಂತರ ಟ್ವೀಟ್ ಮಾಡಿರುವ ತೇಜಶ್ವಿ ಯಾದವ್, “ಹೆಚ್ಚುತ್ತಿರುವ ತೈಲ ಬೆಲೆಗಳನ್ನು ವಿರೋಧಿಸಿ, ಅಸೆಂಬ್ಲಿಗೆ ಇಂದು ಸೈಕ್ಲಿಂಗ್ ಮೂಲಕ ತಲುಪಿದೆ. ಬಡವರ ರಕ್ತ ಹೀರಿಕೊಂಡ ಶ್ರೀಮಂತರ ಪ್ರೀತಿಯ ಸರ್ಕಾರ ಪೆಟ್ರೋಲ್, ಡೀಸೆಲ್, ಅನಿಲದ ಬೆಲೆಯನ್ನು ಹೆಚ್ಚಿಸಿ, ಸಾಮಾನ್ಯ ಜನರನ್ನು ಸಾಯುವಂತೆ ಮಾಡಿದೆ. ಡಬಲ್ ಎಂಜಿನ್ ಸರ್ಕಾರ ಬಡವರನ್ನು ಲೂಟಿ ಮಾಡುತ್ತಿದೆ’ ಎಂದಿದ್ದಾರೆ.
ಇದನ್ನೂ ಓದಿ: ದೆಹಲಿ: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಯೂತ್ ಕಾಂಗ್ರೆಸ್ ಪ್ರತಿಭಟನೆ
ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಎಲೆಕ್ಟ್ರಿಕ್ ಸ್ಕೋಟರ್ ಓಡಿಸುವ ಮೂಲಕ ಇಂಧನ ಬೆಲೆ ಹೆಚ್ಚಳದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಕೊಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಓಡಿಸಿಕೊಂಡು ತಮ್ಮ ಕಚೇರಿಗೆ ಹೋಗಿದ್ದಾರೆ. ಇಂಧನ ಬೆಲೆ ಏರಿಕೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೂ ಅವರು ಎಲೆಕ್ಟ್ರಿಕ್ ಸ್ಕೂಟರ್ ಬಳಸಿ ಹೋಗಿದ್ದರು.
ಇದನ್ನೂ ಓದಿ: ಲೀ ಪೆಟ್ರೋಲ್ ದರ ರೂ. 06!, ರಾಮದೇವ್ ಯೋಗ ಭಂಗಿಯಲ್ಲಿ ನೋಡಿದರೆ: ತರೂರ್ ವ್ಯಂಗ್ಯ

ಈ ಬಾರಿಯ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರದ ವಿರುದ್ಧ ಸಿಗುವ ಯಾವುದೇ ಅವಕಾಶವನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಟ್ಟು ಕೊಡುತ್ತಿಲ್ಲ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ, ರೈತರಿಗೆ ಬೆಂಬಲ ನೀಡಿದ್ದಾರೆ. ಈಗ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಏರಿಕೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ದಿಢೀರ್ ಏರಿಕೆ: ಕತ್ತೆ, ಕುದುರೆ ಮೊರೆ ಹೋದ ಜನತೆ
