ಆದಿತ್ಯನಾಥ್ ಮತ್ತು ರಾಹುಲ್ ಗಾಂಧಿ ಇಬ್ಬರದೂ ಒಂದೇ ಭಾವನೆ: ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಹುಲ್ ಗಾಂಧಿ ಮತ್ತು ಆದಿತ್ಯನಾಥ್ ಅವರನ್ನು ಸಮೀಕರಿಸಿದ್ದು, “ಎಡಪಕ್ಷಗಳ ವಿಚಾರದಲ್ಲಿ ಇಬ್ಬರ ಭಾವನೆಯೂ ಒಂದೇ” ಎಂದು ಹೇಳಿದ್ದಾರೆ.

“ವಯನಾಡ್ ಸಂಸದ ರಾಹುಲ್‌ ಗಾಂಧಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಕೇರಳದ ಬಗ್ಗೆ ಭಿನ್ನ ದೃಷ್ಟಿಕೋನ ಹೊಂದಿರಬಹುದು; ಆದರೆ ಎಡಪಕ್ಷಗಳ ವಿಚಾರದಲ್ಲಿ ಇಬ್ಬರ ಭಾವನೆಯೂ ಒಂದೇ; ಆ ವಿಚಾರದಲ್ಲಿ ಅವರು ಒಗ್ಗಟ್ಟಾಗಿದ್ದಾರೆ” ಎಂದು ಪಿಣರಾಯಿ ವಿಜಯನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಕೇರಳಕ್ಕೆ ಭೇಟಿ ನೀಡಿದ್ದ ಇಬ್ಬರೂ ಮುಖಂಡರು ಎಡಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದ್ದನ್ನು ಉಲ್ಲೇಖಿಸಿದ ಪಿಣರಾಯಿ ವಿಜಯನ್, “ರಾಹುಲ್‌ ಗಾಂಧಿ ಕೇರಳಕ್ಕೆ ಬಂದು ರೈತರ ಟ್ರ್ಯಾಕ್ಟರ್ ಚಾಲನೆ ಮಾಡಿದ್ದಾರೆ; ಸಮುದ್ರದಲ್ಲಿ ಮೀನುಗಾರರ ಜತೆ ಈಜಿದ್ದಾರೆ; ಆದರೆ ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ನಿರ್ಲಕ್ಷಿಸಿದ್ದಾರೆ” ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಗುಜರಾತ್‌ನಲ್ಲಿ 25 ವರ್ಷದಿಂದ ಬಿಜೆಪಿಯೊಂದೇ ಏಕೆ ಆಡಳಿತ ನಡೆಸುತ್ತಿದೆ..?- ಕೇಜ್ರಿವಾಲ್

ವಯನಾಡ್‌ನಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿಯಲ್ಲಿ ಭಾಗವಹಿಸಿ ಸ್ವತಃ ಟ್ರ್ಯಾಕ್ಟರ್ ಚಾಲನೆ ಮಾಡಿದ್ದ ರಾಹುಲ್, ಎಡರಂಗ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಿಲ್ಲ ಹಾಗೂ ಮೀನುಗಾರರ ಜೀವನಾಧಾರವನ್ನು ನಾಶಪಡಿಸಿದೆ ಎಂದು ಆರೋಪಸಿದ್ದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧವೂ ಹರಿಹಾಯ್ದ ಪಿಣರಾಯಿ ವಿಜಯನ್, “ಕೇರಳ ಪ್ರತಿಯೊಂದರಲ್ಲೂ ಹಿಂದಿದೆ ಎಂದು ಆದಿತ್ಯನಾಥ್ ಹೇಳಿದ್ದಾರೆ. ಇಲ್ಲಿ ಉದ್ಯೋಗವಿಲ್ಲದೆ ಯುವಕರು ವಿದೇಶಕ್ಕೆ ಹೋಗುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ರಾಜ್ಯದಲ್ಲಿರುವ ವಲಸೆ ಕಾರ್ಮಿಕರ ಪೈಕಿ ಶೇಕಡ 15 ರಷ್ಟು ಮಂದಿ ಉತ್ತರ ಪ್ರದೇಶದವರು. ಅವರಿಗೆ ವಿಮೆ ಹಾಗೂ ಇತರ ಸೌಲಭ್ಯ ನೀಡಲಾಗಿದೆ. ಎಡರಂಗ ಸರ್ಕಾರ, ಜನ ಪರಸ್ಪರ ಹೊಡೆದಾಡಿಕೊಳ್ಳುವಂತೆ ಮಾಡಿದೆ ಎಂದು ಆದಿತ್ಯನಾಥ್ ಹೇಳಿದ್ದಾರೆ. ಆದರೆ ಕಳೆದ ಐದು ವರ್ಷದಲ್ಲಿ ಕೇರಳದಲ್ಲಿ ಯಾವುದೇ ಕೋಮುಗಲಭೆ ಆಗಿಲ್ಲ. ಆದರೆ ಉತ್ತರ ಪ್ರದೇಶದ ಸ್ಥಿತಿ ಏನು? ಮಹಿಳೆಯರ ವಿರುದ್ಧದ ಅಪರಾಧಗಳು ಉತ್ತರ ಪ್ರದೇಶದಲ್ಲಿ ಅತ್ಯಧಿಕ” ಎಂದು ವಿವರಣೆ ನೀಡಿದರು.

ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿಯ ಚುನಾವಣೆಗಳು ಘೋಷಣೆಯಾಗಲಿದ್ದು, ದೇಶದ ದೃಷ್ಟಿ ಈಗ ಈ ಪಂಚ ರಾಜ್ಯಗಳ ಮೇಲಿದೆ


ಇದನ್ನೂ ಓದಿ: ಹೊಸ ಮಾರ್ಗಸೂಚಿ: ಆನ್‌ಲೈನ್ ಸುದ್ದಿ ಮಾಧ್ಯಮ, ಒಟಿಟಿ ಮೇಲಾಗುವ ಪರಿಣಾಮವೇನು?

LEAVE A REPLY

Please enter your comment!
Please enter your name here