Homeಮುಖಪುಟಹೊಸ ಮಾರ್ಗಸೂಚಿ: ಆನ್‌ಲೈನ್ ಸುದ್ದಿ ಮಾಧ್ಯಮ, ಒಟಿಟಿ ಮೇಲಾಗುವ ಪರಿಣಾಮವೇನು?

ಹೊಸ ಮಾರ್ಗಸೂಚಿ: ಆನ್‌ಲೈನ್ ಸುದ್ದಿ ಮಾಧ್ಯಮ, ಒಟಿಟಿ ಮೇಲಾಗುವ ಪರಿಣಾಮವೇನು?

’ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮುದ್ರಣ ಮಾಧ್ಯಮವನ್ನು ನಿಯಂತ್ರಿಸುತ್ತದೆ. ಡಿಜಿಟಲ್ ಮಾಧ್ಯಮದಕ್ಕೆ ಅಂತಹ ಸಂಸ್ಥೆಯಿಲ್ಲ. ಭವಿಷ್ಯದಲ್ಲಿ ಅಂಥದ್ದು ಬರಬಹುದಾದರೆ, ಸಮಿತಿಯ ಅಗತ್ಯವಿಲ್ಲ’

- Advertisement -
- Advertisement -

ಆನ್‌ಲೈನ್ ಸುದ್ದಿ ಮಾಧ್ಯಮಗಳ ಸಂಪೂರ್ಣ ಚಿತ್ರಣವನ್ನು ಪಡೆಯಲು ಸರ್ಕಾರ ಪ್ರಯತ್ನಿಸುತ್ತಿರುವುದರಿಂದ, ಡಿಜಿಟಲ್ ನ್ಯೂಸ್ ಪೋರ್ಟಲ್‌ಗಳು ತಮ್ಮ ಸಂಪಾದಕೀಯ ಮುಖ್ಯಸ್ಥರು, ಮಾಲೀಕತ್ವ, ವಿಳಾಸ ಮತ್ತು ಗೊತ್ತು ಪಡಿಸಿದ ಕುಂದುಕೊರತೆ ಅಧಿಕಾರಿಗಳ ಬಗ್ಗೆ ಮಾಹಿತಿ ಮತ್ತು ಇತರ ವಿವರಗಳನ್ನು ಮಾಹಿತಿ ಮತ್ತು ಪ್ರಸಾರ (ಐ&ಬಿ) ಸಚಿವಾಲಯಕ್ಕೆ ಶೀಘ್ರದಲ್ಲೇ ಒದಗಿಸಬೇಕಾಗುತ್ತದೆ ಎಂದು ಐ&ಬಿ ಕಾರ್ಯದರ್ಶಿ ಅಮಿತ್ ಖರೆ ತಿಳಿಸಿದ್ದಾರೆ.

“ಪ್ರಸ್ತುತ, ಈ ವಲಯದಲ್ಲಿ ಎಷ್ಟು ಸಂಸ್ಥೆಗಳಿವೆ ಮತ್ತು ಅವರು ಯಾರೆಂಬುದರ ಬಗ್ಗೆ ಸರ್ಕಾರಕ್ಕೆ ಸಂಪೂರ್ಣ ಚಿತ್ರಣವಿಲ್ಲ” ಎಂದು ಅವರು ಹೇಳಿದರು. “ನೀವು ಅವರ ವೆಬ್‌ಸೈಟ್‌ಗಳಿಗೆ ಲಾಗ್ ಇನ್ ಮಾಡಿದರೆ, ಅವರ ಕಚೇರಿ ವಿಳಾಸ ಅಥವಾ ಪ್ರಧಾನ ಸಂಪಾದಕರ ಕುರಿತ  ಮೂಲ ಮಾಹಿತಿ ಸಹ ಸಿಗುವುದಿಲ್ಲ’ ಎಂದು ಖರೆ ಹೇಳಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ಉಲ್ಲೆಖಿಸಿದೆ.

ಮೂಲಗಳ ಪ್ರಕಾರ, ಒಂದು ತಿಂಗಳಲ್ಲಿ ಎಲ್ಲಾ ಡಿಜಿಟಲ್ ಸುದ್ದಿ ಸಂಸ್ಥೆಗಳು ಮೇಲೆ ಉಲ್ಲೇಖಿಸಿದ ವಿವರಗಳನ್ನು ಭರ್ತಿ ಮಾಡಿ ಸಚಿವಾಲಯಕ್ಕೆ ಸಲ್ಲಿಸಬೇಕಾದ ಫಾರ್ಮ್ ಅನ್ನು ಸಚಿವಾಲಯ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

ಇದನ್ನೂ ಓದಿ: ಸ್ಮಾರ್ಟ್‌ ಸಿಟಿ ನಿರ್ಮಾಣ, ನದಿಗಳನ್ನು ಸ್ವಚ್ಚಗೊಳಿಸುವುದು ಯಾವಾಗ? ಬಿಜೆಪಿ ಉತ್ತರಿಸಲಿ: ಅಖಿಲೇಶ್

ಗುರುವಾರ (ಫೆ.25) ಐ & ಬಿ ಸಚಿವ ಪ್ರಕಾಶ್ ಜಾವಡೇಕರ್ ಅವರು,  ಡಿಜಿಟಲ್ ಮೀಡಿಯಾ ಸಂಸ್ಥೆಗಳ ಬಗೆಗಿನ ಮಾಹಿತಿಯ ಕೊರತೆಯೇ, ಈ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುವುದಕ್ಕೆ ಮೊದಲು ಅವರೊಂದಿಗೆ ಯಾವುದೇ ಸಮಾಲೋಚನೆ ನಡೆಸದಿರಲು ಕಾರಣ ಎಂದು ತಿಳಿಸಿದ್ದಾರೆ.

ಕಾರ್ಯದರ್ಶಿ ಖರೆ ಪ್ರಕಾರ, ವೆಬ್‌ಸೈಟ್‌ಗಳು, ಮುದ್ರಣ ಮತ್ತು ಟಿವಿ ಮಾಧ್ಯಮ ಈಗಾಗಲೇ ಅನುಸರಿಸುತ್ತಿರುವ  ಸ್ಥಾಪಿತ ನೀತಿ ಸಂಹಿತೆಯನ್ನು ಮಾತ್ರ ಅನುಸರಿಸುವ ನಿರೀಕ್ಷೆಯಿದೆ. ಅವರ ಮೇಲೆ ಹೊಸ ಬಾಧ್ಯತೆಯಿಲ್ಲ ಎಂದು ಹೇಳಿದ್ದಾರೆ.

ಹೊಸ ಮಾರ್ಗಸೂಚಿಗಳ ಪ್ರಕಾರ, ಡಿಜಿಟಲ್ ನ್ಯೂಸ್ ಔಟ್‌ಲೆಟ್‌ಗಳು ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ ನಿಯಂತ್ರಣ ಕಾಯ್ದೆ ಮತ್ತು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಪತ್ರಿಕೋದ್ಯಮ ನಡವಳಿಕೆಯ ಮಾನದಂಡಗಳ ಅಡಿಯಲ್ಲಿ ಪ್ರೋಗ್ರಾಂ ಕೋಡ್ ಅನ್ನು ಅನುಸರಿಸಬೇಕಾಗುತ್ತದೆ. ಇದು ಟಿವಿ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಹಾಕುವ ಕಂಟೆಂಟ್ ಹೇಗಿರಬೇಕು ಎಂಬುದನ್ನು ಸೂಚಿಸುತ್ತದೆ.

ಮುದ್ರಣಕ್ಕಾಗಿ ಅಂತಹ ಯಾವುದೇ ಸಮಿತಿ ಇಲ್ಲದಿದ್ದಾಗ ಡಿಜಿಟಲ್ ನ್ಯೂಸ್ ವೆಬ್‌ಸೈಟ್‌ಗಳಿಗಾಗಿ ಸರ್ಕಾರದ ಮೇಲ್ವಿಚಾರಣಾ ಕಾರ್ಯವಿಧಾನವನ್ನು ಸ್ಥಾಪಿಸುವ ಅಗತ್ಯತೆಯ ಬಗ್ಗೆ ಮಾತನಾಡಿರುವ ಅಮಿತ್ ಖರೆ, ’ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮುದ್ರಣ ಮಾಧ್ಯಮವನ್ನು ನಿಯಂತ್ರಿಸುತ್ತದೆ. ಡಿಜಿಟಲ್ ಮಾಧ್ಯಮದಕ್ಕೆ ಅಂತಹ ಸಂಸ್ಥೆಯಿಲ್ಲ. ಭವಿಷ್ಯದಲ್ಲಿ ಅಂಥದ್ದು ಬರಬಹುದಾದರೆ, ಸಮಿತಿಯ ಅಗತ್ಯವಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ: `ಡಿಜಿಟಲ್ ಕಂಟೆಂಟ್’ ‌ನಿಯಂತ್ರಣಕ್ಕೆ ಕೇಂದ್ರದ ’ಭಯಾನಕ’ ನಿಯಮಗಳು!

ಒಟಿಟಿ ಪ್ಲಾಟ್‌ಫಾರ್ಮ್‌ಗಳಿಂದ ಬಂದ ಸಮಾಲೋಚನೆಯ ಬಗ್ಗೆ ಇದೇ ರೀತಿಯ ಟೀಕೆಗಳನ್ನು ಖರೆ ತಳ್ಳಿಹಾಕಿದರು. ’ಐ & ಬಿ ಸಚಿವರು ದೆಹಲಿಯಲ್ಲಿ ಎರಡು ಬಾರಿ ಭೇಟಿಯಾದರು. ಮುಂಬೈ ಮತ್ತು ಚೆನ್ನೈನಲ್ಲಿ ನಾವು ಎರಡು ಸುತ್ತಿನ ಚರ್ಚೆ ನಡೆಸಿದೆವು. ಸಮಾಲೋಚನೆ ಎಂದರೆ ಸಮ್ಮತಿ ಎಂದಲ್ಲ. ತಾತ್ವಿಕವಾಗಿ, ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸ್ವಯಂ ನಿಯಂತ್ರಣಕ್ಕೆ ಒಪ್ಪಿಕೊಂಡಿವೆ, ಆದರೆ ಅವರ ಪ್ರಸ್ತಾಪವು ಮೇಲ್ವಿಚಾರಣೆ ಮತ್ತು ಮೇಲ್ಮನವಿಗಳಿಗಾಗಿ ಸ್ವತಂತ್ರ ಸಂಸ್ಥೆಯನ್ನು ಹೊಂದಿರಲಿಲ್ಲ. ಅವರು ಆಂತರಿಕವಾಗಿ ಕುಂದುಕೊರತೆಗಳನ್ನು ಪರಿಹರಿಸಲು ಬಯಸಿದ್ದರು ಆದರೆ ಯಾವುದೇ ಮೇಲ್ಮನವಿಯ ವ್ಯವಸ್ಥೆ ಇರಲಿಲ್ಲ. ಅದು ನಮಗೆ ಸ್ವೀಕಾರಾರ್ಹವಲ್ಲ’ ಎಂದು ಖರೆ ತಿಳಿಸಿದ್ದಾರೆ.

ಒಟಿಟಿ ಪ್ಲಾಟ್‌ಫಾರ್ಮ್‌ಗಳ ಕೆಲಸದಲ್ಲಿ ಸರ್ಕಾರದ ಅತಿಯಾದ ಹಸ್ತಕ್ಷೇಪದ ಭೀತಿಯ ಬಗಿಗಿನ ಪ್ರಶ್ನೆಗೆ ಉತ್ತರಿಸಿರುವ ಖರೆ, ’ಅಂತಹ ಸಂದೇಹಗಳು ಆಧಾರರಹಿತವಾಗಿವೆ ಎಂದಿದ್ದಾರೆ. ’ಏಕೆಂದರೆ ಮಾರ್ಗಸೂಚಿಗಳು ಒಟಿಟಿ ಮತ್ತು ಆನ್‌ಲೈನ್ ಮಾಧ್ಯಮಗಳಿಗೆ ಮೃದು-ಸ್ಪರ್ಶ ಸ್ವಯಂ-ನಿಯಂತ್ರಣ ಮಾದರಿಯನ್ನು ಪ್ರಸ್ತಾಪಿಸುತ್ತವೆ. “ಇದು ಒಟಿಟಿ ಪ್ಲಾಟ್‌ಫಾರ್ಮ್‌ಗಳ ಸೃಜನಶೀಲತೆ ಮತ್ತು ನಾಗರಿಕರು ತಮ್ಮ ಕುಂದುಕೊರತೆಗಳನ್ನು ಪರಿಹರಿಸುವ ಹಕ್ಕುಗಳನ್ನು ಸಮತೋಲನಗೊಳಿಸುತ್ತದೆ” ಎಂದು ಮಾಹಿತಿ ನೀಡಿದ್ದಾರೆ.

ಇದಲ್ಲದೆ, ಔಪಚಾರಿಕ ಮೂರು ಹಂತದ ಪರಿಹಾರ ವ್ಯವಸ್ಥೆಯನ್ನು ಹೊಂದಿರುವುದು ದೀರ್ಘಾವಧಿಯಲ್ಲಿ, ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಮಾತ್ರ ಸಹಾಯ ಮಾಡುತ್ತದೆ ಎಂದು ಖರೆ ಹೇಳಿದರು. “ಪ್ರಸ್ತುತ, ವಿಭಿನ್ನ ವೆಬ್ ಸರಣಿಗಳ ವಿರುದ್ಧ ಹಲವಾರು ಎಫ್‌ಐಆರ್ ದಾಖಲಿಸಲಾಗಿದೆ. ಕುಂದುಕೊರತೆ ಪರಿಹಾರ ಮತ್ತು ಮೇಲ್ಮನವಿಯ ಔಪಚಾರಿಕ ಕಾರ್ಯವಿಧಾನವಿದ್ದರೆ, ಈ ವೇದಿಕೆಗಳು ಈ ಕಾರ್ಯವಿಧಾನವನ್ನು ನ್ಯಾಯಾಲಯಗಳಿಗೆ ತಿಳಿಸಬಹುದು ಮತ್ತು ನ್ಯಾಯಾಲಯಗಳು ಯಾವಾಗಲೂ ಈ ಸಂಸ್ಥೆಗಳನ್ನು ಸಮೀಪಿಸಲು ನಾಗರಿಕರನ್ನು ಪ್ರೋತ್ಸಾಹಿಸುತ್ತದೆ’ ಎಂದಿದ್ದಾರೆ.


ಇದನ್ನೂ ಓದಿ: ಹರಿಯಾಣ: ರೈತರಿಗೆ ಬೆಂಬಲ ನೀಡಿದ ಪಕ್ಷೇತರ ಶಾಸಕನ ಮನೆ, ಕಛೇರಿ ಮೇಲೆ ಐಟಿ ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗಾಳಿಪಟ-2: ಯೋಗರಾಜ ಭಟ್ರ ಲಾಜಿಕ್‌ಗಳನ್ನು ‘ದೇವ್ಲೆ’ ಬಲ್ಲ!

ನೀವು ಬರಹಗಾರರಾಗಿದ್ದೀರಾ? ಹೌದಾದರೆ, ನೀವು ಆರಂಭಿಕ ದಿನಗಳಲ್ಲಿ ಬರೆದ ಒಂದು ಬರಹವನ್ನು ಮತ್ತೆ ಓದಿ ನೋಡಿ. ಎಷ್ಟೊಂದು ಪೇವಲವಾಗಿ ಬರೆದಿದ್ದೇನಲ್ಲ ಅಂತ ನಿಮಗೆಯೇ ಅನಿಸಲೂಬಹುದು. ಕಾಲ ಉರುಳಿದಂತೆ, ನಮ್ಮ ಅನುಭವಗಳು ದಟ್ಟವಾದಂತೆ ಬರವಣಿಗೆಯೂ...