Homeಕರ್ನಾಟಕಬೆಂಗಳೂರಿನಲ್ಲಿ ಆಟೋರಿಕ್ಷಾ ದರ ಏರಿಕೆ: ಕನಿಷ್ಠ ಬೆಲೆ 25 ರೂ.ನಿಂದ 30 ರೂಪಾಯಿಗೆ ಹೆಚ್ಚಳ

ಬೆಂಗಳೂರಿನಲ್ಲಿ ಆಟೋರಿಕ್ಷಾ ದರ ಏರಿಕೆ: ಕನಿಷ್ಠ ಬೆಲೆ 25 ರೂ.ನಿಂದ 30 ರೂಪಾಯಿಗೆ ಹೆಚ್ಚಳ

- Advertisement -
- Advertisement -

ಸತತ 8 ವರ್ಷಗಳ ಬಳಿಕ ರಾಜಧಾನಿಯಲ್ಲಿ ಆಟೋರಿಕ್ಷಾ ದರಗಳನ್ನು ಪರಿಷ್ಕರಣೆ ಮಾಡಲಾಗಿದ್ದು, ಡಿಸೆಂಬರ್‌ 1 ರಿಂದ ಹೊಸ ದರಗಳು ಜಾರಿಗೆ ಬರಲಿವೆ. ಆಟೋ ಚಾಲಕರ ಮನವಿಗೆ ಸ್ಪಂದಿಸಿರುವ ಸರ್ಕಾರ ಬೆಲೆ ಏರಿಕೆಗೆ ಅನುಮತಿ ನೀಡಿದೆ.

ಈಗ ಇರುವ ಕನಿಷ್ಠ ದರ 25 ರೂಪಾಯಿ ಡಿಸೆಂಬರ್‌ ಒಂದರಿಂದ 30 ರೂಪಾಯಿಯಾಗಲಿದೆ. 8 ವರ್ಷಗಳ ಹಿಂದೆ 2013 ರಲ್ಲಿ ಆಟೋರಿಕ್ಷಾ ದರವನ್ನು ಏರಿಕೆ ಮಾಡಲಾಗಿತ್ತು.

ಪೆಟ್ರೋಲ್, ಡೀಸೆಲ್, ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆ ಆಟೋ ಚಾಲಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರ ಜೊತೆ ಜೊತೆಗೆ ದಿನ ಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಚಾಲಕರು ಸರ್ಕಾರಕ್ಕೆ ಬೆಲೆ ಏರಿಕೆ ಮಾಡಲು ಮನವಿ ಸಲ್ಲಿಸಿದ್ದರು.

ಬಿಬಿಎಂಪಿ ವ್ಯಾಪ್ತಿಯ ಆಟೋರಿಕ್ಷಾ ಚಾಲಕರು ಇನ್ನು ಮೂರು ತಿಂಗಳ (90 ದಿನಗಳು) ಒಳಗೆ ಹೊಸ ಮೀಟರ್ ಅಳವಡಿಸಿಕೊಳ್ಳಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ದ.ಕ. | ಅಡಿಕೆ ಕಳ್ಳತನದ ಆರೋಪ, ಬಾಲಕನಿಗೆ ಮಾರಣಾಂತಿಕ ಹಲ್ಲೆ- ಆರೋಪಿಗಳಿಗೆ ಜಾಮೀನು

 

ಕನಿಷ್ಠ ದರ ಈ ಮೊದಲು 2 ಕಿಮೀಗೆ ಇದ್ದ 25 ರೂಪಾಯಿಯನ್ನು 30 ರೂಪಾಯಿಗೆ ಏರಿಸಲಾಗಿದೆ. ನಂತರದ ಪ್ರತಿ ಕಿಮೀ ಪ್ರಯಾಣಕ್ಕೆ 15 ರೂಪಾಯಿ ದರ ನಿಗದಿಯಾಗಿದೆ. ಈ ಮೊದಲು 13 ರೂಪಾಯಿಗಳಿದ್ದವು. ಆಟೋಗಳಲ್ಲಿ ಮೂರು ಮಂದಿ ಪ್ರಯಾಣಿಸಬೇಕು ಎಂದು ತಿಳಿಸಲಾಗಿದೆ.

ಕಾಯುವಿಕೆ ದರ ಮೊದಲ 5 ನಿಮಿಷ ಉಚಿತವಾಗಿದ್ದು, ನಂತರ ಪ್ರತಿ  15 ನಿಮಿಷಕ್ಕೆ 5 ರೂಪಾಯಿ ದರ ನೀಡಬೇಕು. ಪ್ರಯಾಣಿಕರ ಲಗೇಜು 20 ಕೆಜಿ ಒಳಗಿದ್ದರೇ ಉಚಿತವಾಗಿದೆ. 20 ಕೆಜಿ ಬಿಟ್ಟು ಅಧಿಕವಾಗಿದ್ದರೇ, ಪ್ರತಿ 20 ಕೆಜಿ ಲಗೇಜಿಗೆ 5 ರೂಪಾಯಿ ದರ ನಿಗದಿ ಮಾಡಲಾಗಿದೆ.

ರಾತ್ರಿಯ ವೇಳೆ 10 ಗಂಟೆಯ ನಂತರ ಮತ್ತು ಬೆಳಗಿನ 5 ಗಂಟೆಯ ಒಳಗೆ ಸಾಮಾನ್ಯ ದರದ ಜೊತೆಗೆ ಅದರ ಅರ್ಧ ಪಟ್ಟು ದರವನ್ನು ನೀಡಬೇಕಾಗಿದೆ. ಈ ಕುರಿತು ಬೆಂಗಳೂರು ನಗರ ಜಿಲ್ಲೆಯ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ.

ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಎಂ ಮಂಜುನಾಥ್,  “ಸತತ 3 ತಿಂಗಳಿಂದ ಹೋರಾಟ ನಡೆಸಿದ ಆಟೋ ಮತ್ತು ಟ್ಯಾಕ್ಸಿ ಸಂಘಗಳ ಹೋರಾಟದ ಫಲವಾಗಿ ಇಂದು ಮೀಟರ್ ದರ ಏರಿಸಲಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಅದರಲ್ಲೂ ಎಲ್‌ಪಿಜಿ ಗ್ಯಾಸ್ ದರ ದಿನೇ ದಿನೇ ಏರಿಕೆಯಾಗುತ್ತಿದ್ದು ಸಾಕಷ್ಟು ಸಂಕಷ್ಟ ಉಂಟಾಗಿತ್ತು. ಸದ್ಯ ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿದೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ, ಸರ್ಕಾರ ಮತ್ತು ಜಿಲ್ಲಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ” ಎಂದಿದ್ದಾರೆ.


ಇದನ್ನೂ ಓದಿ: ನೈಟ್‌ ಕರ್ಫ್ಯೂ ವಾಪಸ್‌; ಕುದುರೆ ರೇಸ್‌ಗೆ ಸರ್ಕಾರ ಅನುಮತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...