Homeಸಿನಿಮಾಕ್ರೀಡೆವಿಮೋಚನೆಯ ಆಟವಾಗಿದ್ದ ಕ್ರಿಕೆಟ್ ಕೇವಲ ಬ್ಯಾಟ್ಸ್‌ಮನ್‌ಗಳ ಆಟವಾಗಿದ್ದು ಹೇಗೆ?

ವಿಮೋಚನೆಯ ಆಟವಾಗಿದ್ದ ಕ್ರಿಕೆಟ್ ಕೇವಲ ಬ್ಯಾಟ್ಸ್‌ಮನ್‌ಗಳ ಆಟವಾಗಿದ್ದು ಹೇಗೆ?

ಕರಿಯರ ಸಮಾನತೆಗಾಗಿ ವೇದಿಕೆಯಾಗಿದ್ದ ಕ್ರಿಕೆಟ್ ರೂಪಾಂತರವಾಗುತ್ತಾ ಇಂದು ಬಂಡವಾಳಿಗರ ತೆಕ್ಕೆಗೆ ಬಿದ್ದು ಬ್ಯಾಟ್ಸ್‌ಮನ್‌ಗಳ ಆಟವಾಗಿ ಬೆಳೆದು ನಿಂತಿದೆ.

- Advertisement -
- Advertisement -

ಕ್ರಿಕೆಟ್ ಭಾರತದ ಮತ್ತೊಂದು ಧರ್ಮವೆಂದೇ ಹೇಳಲಾಗುತ್ತದೆ. ಜಗತ್ತಿನಾದ್ಯಂತ ಫುಟ್‌ಬಾಲ್ ಗೇ ಹೆಚ್ಚು ಪ್ರೇಕ್ಷಕರು ಇದ್ದರೂ ಭಾರತದ ಮಟ್ಟಕ್ಕೆ ಕ್ರಿಕೆಟ್ ಎಲ್ಲವೂ ಆಗಿಬಿಟ್ಟಿದೆ‌. ಹಳ್ಳಿಯ ಕೆರೆ ಮೈದಾನ, ಗಲ್ಲಿಯ ಓಣಿಯಿಂದ ಎಲ್ಲಡೆಯೂ ಕ್ರಿಕೆಟ್ ಆಟ ಸಾಮಾನ್ಯವಾಗಿದೆ. ಇನ್ನೂ ಐಪಿಎಲ್ ಹೊತ್ತಲ್ಲಿ ಮನೆಯಲ್ಲಿ ಅಡುಗೆಯೂ ಮಾಡದೇ ಹೊರಗಿನಿಂದ ಊಟ ತರಿಸಿಕೊಂಡು ಕ್ರಿಕೆಟ್ ನೋಡುಗರ ಸಂಖ್ಯೆ ಹೆಚ್ಚು ಎಂದು ಸ್ವಿಗ್ಗಿ, ಜೋಮಾಟೋ ಅಂಕಿ ಅಂಶಗಳು ಹೇಳುತ್ತದೆ. ಜಗತ್ತೇ ಕರೋನಾದಿಂದ ತಲ್ಲಣಿಸಿ ಹೋದರೂ, ಭಾರತದ ಕೂಲಿ ಕಾರ್ಮಿಕರು ಮುನ್ಸೂಚನೆ ಮುನ್ನೋಟವಿಲ್ಲದ ಲಾಕ್‌ಡೌನ್ ನಿಂದಾಗಿ ಇಂದಿಗೂ ಚೇತರಿಕೆ ಕಾಣದ ಈ ಹೊತ್ತಲ್ಲೂ ದೂರದ ದುಬೈನಲ್ಲಿ IPL- ಇಂಡಿಯನ್ ಪ್ರೀಮಿಯರ್ ಲೀಗ್ ನ ಟೂರ್ನಿ ನಡೆಸಲು ಸಿದ್ಧತೆ ಮಾಡಿಕೊಂಡು ಆಡಿಸಿ ಈಗ ಫೈನಲ್ ಹಂತ ತಲುಪಿ ಇಂದು ಮುಂಬೈ ಮತ್ತು ಡೆಲ್ಲಿ ತಂಡಗಳ ನಡುವೆ 2020 ರ ಕಪ್ ಗಾಗಿ ಹಣಾಹಣಿ ನಡೆಯುತ್ತಿರುವುದು ನೋಡಿದರೆ ಐಪಿಎಲ್ ಎಷ್ಟು “ಜನಪ್ರಿಯ” ಎಂದು ನೀವು ಅಂದಾಜಿಸಬಹುದಾಗಿದೆ!

T-20 (20 ಓವರ್‌ಗಳ ಆಟ) ಪ್ರಕಾರವನ್ನು ಕ್ರಿಕೆಟ್ ಅಲ್ಲಿ ಪರಿಚಯಿಸಿದಾಗ ಹಲವು ಹಿರಿಯ ಆಟಗಾರರು ಕ್ರಿಕೆಟ್ ಸಾಂಪ್ರದಾಯಕ್ಕೆ ಇದು ಮಾರಕವೆಂದು ಜರಿದರೆ, ಹಲವರು ಸ್ವಾಗತಿಸಿದರು. ಇಂತಹ ಪರವಿರೋಧಗಳ ಚರ್ಚೆಯಲ್ಲಿಯೂ IPL ಜಾಗತಿಕಮಟ್ಟದಲ್ಲಿ ಜನಪ್ರಿಯವಾಗಿದೆ.

ಇಂದಿನ ಕ್ರಿಕೆಟ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು ಬ್ಯಾಟ್ಸ್‌ಮನ್ ಗಳ ಆಟವೆಂದು ಅರ್ಥವಾಗುತ್ತದೆ! ಹೆಚ್ಚು ಬ್ಯಾಟ್ಸ್‌ಮನ್‌ಗಳೇ ತಂಡದ ನಾಯಕರಾಗಿ ಆಯ್ಕೆ ಆಗುವುದು, ಬ್ಯಾಟ್ಸ್‌ಮನ್‌ಗಳೇ ಹೆಚ್ಚು ಮೊತ್ತಕ್ಕೆ ಹರಾಜು ಆಗುವುದು ಇಂತಹ ಕಾರಣಗಳು ಮಾತ್ರವಲ್ಲ ಕ್ರಿಕೆಟ್ ನ ಮೂಲಭೂತ ನಿಯಮಗಳೇ ಬೌಲರ್ ಗಳಿಗೆ ಕಠಿಣವಾಗಿ ಮತ್ತು ಬ್ಯಾಟ್ಸ್‌ಮನ್ ಗಳಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ.

ಬೌಲರ್ ಗಳಿಗೆ ಇರುವ ಆ ನಿಯಮಗಳೇನು?

ಬ್ಯಾಟ್ಸ್‌ಮನ್ ಬ್ಯಾಟಿನ ಅಳತೆ ಮೀರಿ ಅಗಲಕ್ಕೆ ಮತ್ತು ಕಾಲಿನ (ಲೆಗ್‌ಸೈಡ್) ಬದಿಯಿಂದ ಒಂದು ಇಂಚೂ ಹೊರಗೆ ಬಾಲ್ ಹಾಕುವಂತಿಲ್ಲ, ಬ್ಯಾಟ್ಸ್‌ಮನ್ ನ ತಲೆಯ ಮೇಲೆನಿಂದಲೂ ಬಾಲ್ ಹಾಕುವಂತಿಲ್ಲ ಹಾಕಿದರೆ ಅದನ್ನು ವೈಡ್ ಎಂದು ಕರೆದು ಆ ಬಾಲ್ ಅನ್ನು ಲೆಕ್ಕಕ್ಕೆ ತಗೆದುಕೊಳ್ಳದೆ ಒಂದು ಪುಕ್ಕಟೆ ರನ್ ಅನ್ನು ನೀಡಲಾಗುತ್ತದೆ. ಅಂತೆಯೇ ನೋಬಾಲ್ ಕೂಡ. ಕ್ರೀಸ್ ಅನ್ನು ದಾಟಿ ಮಾಡಿದ ಬಾಲ್ ಹಾಗೂ ಬ್ಯಾಟ್ಸ್‌ಮನ್ ನ ಸೊಂಟಕ್ಕಿಂತ ಎತ್ತರಕ್ಕೆ ನೇರವಾಗಿ ಬಾಲ್ ಹಾಕಿದರೆ ಅದು ನೋಬಾಲ್ ಆಗಿ ಪರಿವರ್ತನೆ ಆಗುತ್ತದೆ ಆ ಬಾಲ್ ಲೆಕ್ಕಕ್ಕೆ ಇರುವುದಿಲ್ಲ ಮತ್ತು ನೋಬಾಲ್ ಅಲ್ಲಿ ಔಟ್ ಆದರೂ ಔಟ್ ಇರುವುದಿಲ್ಲ ಹಾಗೂ ಆ ಬಾಲ್ ನಲ್ಲಿ ಗಳಿಕೆ ಮೊತ್ತ (ರನ್) ಮಾತ್ರ ಲೆಕ್ಕಕ್ಕೆ ಇರುತ್ತದೆ! ಅಷ್ಟೆ ಅಲ್ಲದೆ ಹೊಸ ನಿಯಮಾವಳಿಯ ಪ್ರಕಾರ ನೋಬಾಲ್ ನಂತರದಲ್ಲಿ ಹಾಕುವ ಬಾಲ್ ‘ಫ್ರೀ ಹಿಟ್’ ಆಗಿರುತ್ತದೆ. ಅಂದರೆ ಆ ಬಾಲ್ ನಲ್ಲಿ ಬ್ಯಾಟ್ಸ್‌ಮನ್ ಎಷ್ಟು ಬೇಕಾದರೂ ರನ್ ಗಳಿಸಬಹುದು ಆದರೆ ಆ ಬಾಲ್ ಅಲ್ಲಿ ಔಟ್ ಆದರೆ ಅದು ಔಟ್ ಅಲ್ಲ (ರನ್ ಔಟ್ ಹೊರತುಪಡಿಸಿ)!

ಬ್ಯಾಟ್ಸ್‌ಮನ್ ಎಷ್ಟು ಓವರ್ ಬೇಕಾದರೂ ಆಡಬಹುದು. ಮೊದಲು ಬಂದು ಪಂದ್ಯದ ಅಂತಿಮ‌ ಬಾಲ್ ವರೆಗೂ ಆಡಬಹುದು ಆದರೆ ಬೌಲರ್ 20 ಓವರಿನ ಮ್ಯಾಚ್ ಆದರೆ ಕೇವಲ ನಾಲಕ್ಕು ಓವರ್ ಬೌಲಿಂಗ್ ಮಾಡಬಹುದು, ಏಕದಿನ ಪಂದ್ಯವಾದಲ್ಲಿ 10 ಓವರ್ ಗಳನ್ನು ಮಾತ್ರ ಮಾಡಬಹುದಾಗಿದೆ.

ಎದೆಯ ಮಟ್ಟಕ್ಕೆ ಓವರ್ ಒಂದರಲ್ಲಿ ಒಂದು ಅಥವಾ ಎರಡು ಬಾಲ್ ಗಳನ್ನು ಮಾತ್ರ ಹಾಕಬಹುದು ಅದಕ್ಕಿಂತ ಹೆಚ್ಚಾದರೆ ಅದೂ ಕೂಡ ನೋ ಬಾಲ್ ಆಗುತ್ತದೆ.

ಬ್ಯಾಟ್ಸ್‌ಮನ್ ಗಳಿಗೆ ಅನುಕೂಲವಾಗುವಂತೆ ಪವರ್ ಪ್ಲೇ ನಿಯಮವೂ ಇದೆ. ಅಂದರೆ ನಿಗದಿತ ಓವರ್‌ಗಳಲ್ಲಿ ಕೇವಲ ಇಬ್ಬರು ಫೀಲ್ಡರ್ ಗಳು ಮಾತ್ರ 30 ಯಾರ್ಡ್ ವೃತ್ತದ ಹೊರಗಿರಬೇಕು ಉಳಿದವರೆಲ್ಲಾ ವೃತ್ತದ ಒಳಗೇ ಇರಬೇಕು ಅಂದರೆ ಬ್ಯಾಟ್ಸ್‌ಮನ್ ಗಳಿಗೆ ಬೌಂಡರಿಗಳು ಹೊಡಯಲು ಸುಲಭವಾಗುವಂತ ನಿಯಮ ಇದಾಗಿದೆ.

ಇವುಗಳಲ್ಲಿ ಕೆಲವು ಅಗತ್ಯವಾದ ನಿಯಮಗಳು ಇವೆ ಮತ್ತು ಕೆಲವು ಕೇವಲ ಬ್ಯಾಟ್ಸ್‌ಮನ್ ಗಳಿಗೆ ಸುಲಭವಾಗುವಂತ ನಿಯಮಗಳೂ ಇವೆ. ಹೀಗಾಗಿ ಈ ಆಟದಲ್ಲಿ ಬ್ಯಾಟ್ಸ್‌ಮನ್ ಗಳೇ ಹೆಚ್ಚು ಹೀರೋಗಳಾಗಿ ಮಿಂಚುತ್ತಾರೆ.

ಹಾಗಾದರೆ ಈ ಆಟ ಹೀಗೆಯೇ ಇತ್ತ?

1960 ರಿಂದ ಹೆಚ್ಚು ಕಡಿಮೆ 80 ರ ದಶಕದವರೆಗೂ ಕ್ರಿಕೆಟ್ ಅಂದರೆ ಬೌಲರ್ ಗಳೇ ಹೀರೋಗಳಾಗಿ ಮೆರದ ದಿನಗಳಾಗಿದ್ದವು. ಕ್ರಿಕೆಟ್‌ ಅನ್ನು ಭಾರತದಲ್ಲಿ ಆರಾಧಿಸಿದಂತಯೇ ವೆಸ್ಟ್‌ಇಂಡೀಸ್ ಅಲ್ಲಿಯೂ ಕ್ರಿಕೆಟ್ ಒಂದು ಧರ್ಮದಂತೆ‌. ಅಷ್ಟೇ ಅಲ್ಲ ತಮ್ಮನ್ನು ಗುಲಾಮರಂತೆ ನಡೆಸಿಕೊಳ್ಳುವ ಬ್ರಿಟಿಷ್ ವಸಾಹತುಶಾಹಿ ಒಡೆಯರ ವಿರುದ್ಧ ತಮ್ಮದೇ ದೊರೆಗಳಿಗೆ ನಾವು ಕೂಡ ಎಲ್ಲಾ ಹಕ್ಕುಗಳನ್ನು ಹೊಂದಿರುವ ನಿಮ್ಮಂತೆಯೇ ಸಮಾನರು ಎಂದು ತೋರಿಸಲು ಕ್ರಿಕೆಟ್ ಅನ್ನು ಅಸ್ತ್ರವಾಗಿಟ್ಟುಕೊಂಡು ವೇದಿಕೆಯಾಗಿಸಿಕೊಂಡಿದ್ದರು. 1975 ರಲ್ಲಿ ವೆಸ್ಟ್ ಇಂಡೀಸ್ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಿದ್ದಾಗ ಆಸ್ಟ್ರೇಲಿಯಾ ತಂಡದಲ್ಲಿ ಬಲಿಷ್ಠ ಫಾಸ್ಟ್ ಬೌಲರ್ ಗಳು ವೆಸ್ಟ್ ಇಂಡೀಸ್ ತಂಡವನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದರು. ಅಕ್ಷರಸಹ ಮಿಲಿಟರಿ ದಾಳಿಯಂತೆ ಗಾಯಗಳನ್ನೂ ಮಾಡಿದ್ದರು. ಸಾಲದಕ್ಕೆ ಪ್ರೇಕ್ಷಕರ ಗ್ಯಾಲರಿ ಇಂದ ಆಸ್ಟ್ರೇಲಿಯಾ ಬೌಲರ್ ಗಳಿಗೆ ವೆಸ್ಟ್ ಇಂಡೀಸ್ ನ ಆಟಗಾರರನ್ನು ಕೊಲ್ಲಿ “ಲಿಲ್ಲಿ ಲಿಲ್ಲಿ ಕಿಲ್ ಕಿಲ್” ಎಂದು ಘೋಷಣೆಗಳನ್ನು ಹಾಕುತ್ತಿದ್ದರು ಅಲ್ಲದೆ ಕಪ್ಪು ಬಣ್ಣವನ್ನು ಆಡಿಕೊಳ್ಳುವುದು, “ಗೋ ಬ್ಯಾಕ್ ಟು ಟ್ರೀಸ್” ನೀವು ಕೋತಿಗಳು ಮರಗಳಿಗೆ ವಾಪಾಸ್ ಹೋಗಿ ಎಂದು ಕೂಗುತ್ತಾ ಅವಮಾನಿಸಲಾಯಿತು.

ಇಂತಹ ಭೀಕರವಾದ ಅವಮಾನದ ಸೋಲಿನ ನಂತರ ತಂಡದ ನಾಯಕ ಕ್ಲೈವ್ ದೇಶದಾದ್ಯಂತ ಓಡಾಡಿ ಪಾಸ್ಟ್ ಬೌಲರ್‌ಗಳಿಗಾಗಿ ಹುಡುಕಾಡಿದ. ಹಳ್ಳಿ ಹಳ್ಳಿಯನ್ನು ಸುತ್ತಾಡಿ ಬೌಲರ್ ಗಳನ್ನು ಕರೆತಂದು ಒಂದು ಬಲಿಷ್ಠ ತಂಡವನ್ನು ಕಟ್ಟಲು ಪ್ರಯತ್ನಿಸಿದ ವಿವಿ ಲಿಚರ್ಡ್ ನಂತಹ ಬ್ಯಾಟಿಂಟ್ ಲೆಜೆಂಡ್ ಅನ್ನು ಒಳಗೊಂಡಂತೆ ಪಾಸ್ಟ್ ಬೌಲರ್ ಗಳಾದ ಜೋಲ್ ಗಾರ್ನರ್, ಮೈಕಲ್, ರಾಬರ್ಟ್, ಕಾಲಿನ್ ಕ್ರಾಫ್ ನಂತಹ 90 ಮೈಲಿ ಕ್ಕಿಂತ ಹಚ್ಚು ವೇಗವಾಗಿ ಬೌಲ್ ಮಾಡುವ ತಂಡ ಸಿದ್ದವಾಯಿತು. ಇಂತಹ ತಂಡ ಸಿದ್ಧವಾದ ನಂತರ ಸುನಿಲ್ ಗವಾಸ್ಕರ್ ನೇತೃತ್ವದ ಭಾರತ ತಂಡದ ಮೇಲೆ ದಾಳಿ ನಡೆಸಿತು. ಭಾರತವು ಫಾಸ್ಟ್ ಬೌಲರ್ ಗಳನ್ನು ಎದುರಿಸಲಾಗದೆ ಆಟವನ್ನು ಅರ್ಧಕ್ಕೆ ನಿಲ್ಲಿಸಿ ಶರಣಾಯಿತು.

ನಂತರ 1976 ರಲ್ಲಿ ವೆಸ್ಟ್ ಇಂಡೀಸ್ ಇಂಗ್ಲೆಂಡ್ ಗೆ ಪ್ರವಾಸ ಬಳಸಿತು‌. ಬಾಲ್ಯದಲ್ಲಿ ಉತ್ತಮ ಜೀವನದ ನಿರೀಕ್ಷೆಯಲ್ಲಿ ಇಂಗ್ಲೆಂಡ್ ಗೆ ವಲಸೆ ಹೋಗಿ ಕಪ್ಪು ವರ್ಣದ ಕಾರಣಕ್ಕೆ ವಸತಿ, ಉದ್ಯೋಗ ಆಹಾರವೂ ಇಲ್ಲದೆ ಗುಲಾಮರಂತೆ, ಕ್ರಿಮಿನಲ್ ಗಳಂತೆ ಬಿಂಬಿಸಿಕೊಂಡು ಅವಮಾನ ಅನುಭವಿಸಿದ ಕುಟುಂಬ ಸದಸ್ಯರು ಈಗ ವೆಸ್ಟ್ ಇಂಡೀಸ್ ತಂಡದಲ್ಲಿ ಆಡುತ್ತಿದ್ದಾರೆ. ಪಂದ್ಯದ ಮುನ್ನ ಟಿವಿ ಸಂದರ್ಶದಲ್ಲಿ ಇಂಗ್ಲೆಂಡ್ ನ ವೇಗಿ ಟೋನಿ ಗ್ರೇಗ್ “ಈ ಕರಿಯರನ್ನು ತೆವಳುವಂತೆ ಮಾಡುವೆ” ಎಂದು ಹೇಳಿಕೆ ನೀಡಿದ. ಇದನ್ನು ಗಂಭೀರವಾಗಿ ತಗೆದುಕೊಂಡ ವೆಸ್ಟ್ ಇಂಡೀಸ್ ಆಟಗಾರರು ತಮ್ಮ ವೇಗದ ಬೌಲಿಂಗ್ ನಿಂದ ತಮ್ಮ ಹಳೆಯ ಒಡೆಯರ ವಿರುದ್ಧವೇ ಗೆಲುವಿನ ಸೇಡು ತೀರಿಸಿಕೊಂಡರು. ಮರುದಿನ ಪತ್ರಿಕೆಗಳಲ್ಲಿ “ಈಗ ತೆವಳಿದ್ದಿ ಯಾರು?” ಎಂದು ವರದಿಗಳು ಪ್ರಕಟವಾದವು.

ನಂತರ ತಮ್ಮ ಹಳೆಯ ಶತ್ರು ಆಸ್ಟ್ರೇಲಿಯಾ ತಂಡವನ್ನು 1979 ರಲ್ಲಿ ಎದುರುಗೊಂಡರು‌. ಈ ಹೊತ್ತಿಗೆ ಆಸ್ಟ್ರೇಲಿಯಾ ತಂಡ ಜಗತ್ತಿನ ನಂ.1 ತಂಡವಾಗಿತ್ತು. ಅವರ ವಿರುದ್ಧವೂ ಅವರದ್ದೇ ನೆಲದಲ್ಲಿ ಅಜೇಯ ಗೆಲುವು ಸಾಧಿಸಿ ಇತಿಹಾಸ ಬರೆಯಿತು‌. ಈ ಎಲ್ಲಾ ಗೆಲುವುಗಳು ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ನ ಕಿರಿಯರಿಗೆ ಆತ್ಮಾಭಿಮಾನ ತಂದು ಕೊಟ್ಟಿತು. ಕ್ಲೈವ್ ಕ್ರಿಕೆಟ್ ತಂಡದ ನಾಯಕನಲ್ಲದೆ ಇಡೀ ದೇಶದ ನಾಯಕನಂತೆ ಹೊರಹೊಮ್ಮಿದ. “ಕರಿಯರೂ ಈಗ ಸುಂದರವಾಗಿ ಕಾಣುವಂತೆ ನೀವು ಮಾಡಿದಿರಿ” ಎಂದು ಜನರು ಬ್ಯಾನರ್ ಗಳನ್ನು ಹಾಕಿದರು, ಬಾವುಟಗಳನ್ನು ಹಾರಿಸಿದರು. ನಾವು ಬಿಳಿಯರಿಗೆ ಸರಿಸಮಾನರು ಎಂದು ತೋರಿಸಿದಿರಿ, ರಾಜಕಾರಣಿಗಳು ಮಾಡಲು ಸಾಧ್ಯವಾಗದ್ದನ್ನು ಕ್ರಿಕೆಟ್ ತಂಡ ಮಾಡಿತು ಎಂದು ಜನರು ಹೊಗಳಲು ಆರಂಭಿಸಿದರು.

ದಶಕಗಳಿಂದ ಕರಿಯರ ಕಲೆ ಸಂಸ್ಕೃತಿಗಳನ್ನು criminalisation ಮಾಡಲಾಗಿತ್ತು. ಆದರೆ ವೆಸ್ಟ್ ಇಂಡೀಸ್ ತಂಡದ ಗೆಲುವಿನ ನಾಗಲೋಟವು ಜಾಗತಿಕ ಮಟ್ಟದಲ್ಲಿ ಹೊಸ ಭರವಸೆಯನ್ನು ಹುಟ್ಟಿಸುವ ಜತೆ ಜೊತೆಗೆ ಬಾಬ್ ಮಾರ್ಲೆ ಅಂತಹ ಗಾಯಕರು ಹುಟ್ಟಿಕೊಂಡರು ಕರಿಯರ ಕಲೆ ಸಂಸ್ಕೃತಿಗಳು ಮತ್ತು ಮುನ್ನಲೆಗೆ ಬಂದಿತು. ಈ ಕ್ರಿಕೆಟರ್ ಗಳನ್ನು ತಮ್ಮ ಹಿರೋಗಳಂತೆ ಅಭಿಮಾನಿಸುತ್ತಾ ತಮ್ಮ ಹಕ್ಕುಗಳಿಗಾಗಿ ಬಂಡಾಯದ ಹಾಡುಗಳು ಜನಪ್ರಿಯವಾದವು.

ಆದರೆ ಇದೇ ಸಮಯದಲ್ಲಿ ವೆಸ್ಟ್ ಇಂಡೀಸ್ ನ ವೇಗಿಗಗಳಾದ ಜೋಲ್ ಗಾರ್ನರ್, ಮೈಕಲ್, ರಾಬರ್ಟ್, ಕಾಲಿನ್ ಕ್ರಾಫ್ ಅವರನ್ನು ಕ್ರಿಕೆಟ್ ತಜ್ಞರು, ಪತ್ರಿಕೆಗಳು, ಟಿವಿಗಳು ‘ಕೊಲೆಗಾರರು, ಭಯೋತ್ಪಾದಕರು’ ಎಂದು ಕರೆಯಲು ಆರಂಭಿಸಿದರು. ಈ ಬೌಲರ್ ಗಳನ್ನು ಕಟ್ಟಿಹಾಕಿ ಪಂದ್ಯ ನಿಯಮಗಳಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿ ಮಾಡಬೇಕು ಇಲ್ಲವಾದರೆ ಬ್ಯಾಟ್ಸ್‌ಮನ್‌ಗಳು ಪ್ರಾಣ ಕಳೆದುಕೊಳ್ಳಲಿದ್ದಾರೆ ಎನ್ನುವ ಕೂಗುಗಳು ಬಲವಾಗಿ ಮುನ್ನಲೆಗೆ ಬರಲು ಪ್ರಾರಂಭವಾಯಿತು‌. ಆದರೆ ನೆನಪಿರಲಿ ವಿಂಡೀಸ್ ಮೇಲೆ ಆಸ್ಟ್ರೇಲಿಯಾ, ಇಂಗ್ಲೆಂಡ್ ದಾಳಿ ಮಾಡಿದಾಗ ಇಂಹ ಮಾತುಗಳಾಗಲಿ ವಿಂಡೀಸ್ ತಂಡದವರು ಆಡಿರಲಿಲ್ಲ‌. ಹೀಗೆ ವಿಂಡೀಸ್ ಫಾಸ್ಟ್ ಬೌಲರ್ ಗಳನ್ನು ಉಗ್ರಗಾಮಿಗಳು ಎಂದು ಕರೆದು ಅವರನ್ನು ಕಟ್ಟಿಹಾಕಲು ಹೊಸ ಹೊಸ ನಿಯಮಗಳು ಹುಟ್ಟಿಕೊಳ್ಳುತ್ತಾ ಇಂದಿನ ವರೆಗೂ ರೂಪಾಂತರಗೊಳ್ಳುತ್ತಿದೆ.

ಕರಿಯರ ಸಮಾನತೆಗಾಗಿ ವೇದಿಕೆಯಾಗಿದ್ದ ಕ್ರಿಕೆಟ್ ರೂಪಾಂತರವಾಗುತ್ತಾ ಇಂದು ಬಂಡವಾಳಿಗರ ತೆಕ್ಕೆಗೆ ಬಿದ್ದು ಬ್ಯಾಟ್ಸ್‌ಮನ್‌ಗಳ ಆಟವಾಗಿ ಬೆಳೆದು ನಿಂತಿದೆ.

  • ಸರೋವರ್ ಬೆಂಕಿಕೆರೆ

(ಯುವ ವಿದ್ಯಾರ್ಥಿ ನಾಯಕ. ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಸಂಚಾಲಕರು)


ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್‍ನಲ್ಲಿ ಭಾರತದ ಹೆಜ್ಜೆಗುರುತುಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...