ಭೂತ ಬಿಡಿಸುವ ನೆಪದಲ್ಲಿ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಸ್ಥಳೀಯ ನ್ಯಾಯಾಲಯವೊಂದು ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು, ಆತನ ಮೇಲೆ 10,000 ರೂ.ಗಳ ದಂಡವನ್ನೂ ವಿಧಿಸಿದೆ.
ಭೂತ ಬಿಡಿಸುವ ನೆಪದಲ್ಲಿ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ (ಎಸ್‌ಸಿ-ಎಸ್‌ಟಿ) ಜಗದೀಶ್ ಕುಮಾರ್ ಅವರು ರಾಹುಲ್ ಪ್ರಜಾಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಸರ್ಕಾರಿ ವಕೀಲ ಲಖನ್ ಲಾಲ್ ಇಂದು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ: ನವರಾತ್ರಿ ಪೂಜೆ ಮುಗಿಸಿ ಮನೆಗೆ ಮರಳುತ್ತಿದ್ದ ಯುವತಿಯ ಮೇಲೆ ಅತ್ಯಾಚಾರ
“ನ್ಯಾಯಾಲಯವು ಆತನ ಮೇಲೆ 10,000 ರೂ.ಗಳ ದಂಡವನ್ನೂ ವಿಧಿಸಿದೆ. 2018 ರ ಜೂನ್ 7 ರಂದು ರಾತ್ರಿ 8:00 ಗಂಟೆಗೆ ದಲಿತ ಮಹಿಳೆ ಅತ್ಯಾಚಾರಕ್ಕೊಳಗಾಗಿದ್ದಾಳೆ” ಎಂದು ವಕೀಲ ಲಖನ್ ಲಾಲ್ ಹೇಳಿದ್ದಾರೆ.
“ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದಾಗ, ಭೂತ ಬಿಡಿಸುತ್ತೇನೆಂದು, ಗುಣಪಡಿಸುವ ನೆಪದಲ್ಲಿ ರಾಹುಲ್ ಪ್ರಜಾಪತಿ ಆಕೆಯನ್ನು ರಸ್ತೆಬದಿಯ ಉಪಾಹಾರ ಗೃಹಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದನು. ನಂತರ ಅವನು ತಪ್ಪಿತಸ್ಥನೆಂದು ಸಾಬೀತಾಗಿ ಜೈಲಿನಲ್ಲಿದ್ದನು” ಎಂದು ಅವರು ಹೇಳಿದರು.
ಇದನ್ನೂ ಓದಿ: ಉತ್ತರ ಪ್ರದೇಶವನ್ನು ಬಿಜೆಪಿ ’ಅಪರಾಧ ಪ್ರದೇಶ’ವನ್ನಾಗಿ ಮಾಡಿದೆ: ಪ್ರಿಯಾಂಕ ಗಾಂಧಿ


