ಪ್ರಸಿದ್ದ ಸ್ಟಾಂಡ್‌ಅಪ್ ಕಾಮೇಡಿಯನ್ ’ಕುನಾಲ್ ಕಮ್ರ’ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ಅನುಮತಿ ನೀಡಿದ್ದಾರೆ. ಕುನಾಲ್ ಕಮ್ರಾ ಅರ್ನಾಬ್ ಗೋಸ್ವಾಮಿಗೆ ಜಾಮೀನು ನೀಡಿದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟನ್ನು ಟೀಕಿಸಿ ಟ್ವೀಟ್ ಮಾಡಿದ್ದರು. ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಕೆಯಾಗಿತ್ತು.
ಕುನಾಲ್ ವಿರುದ್ದದ ಅರ್ಜಿಯನ್ನು ಮನ್ನಿಸಿರುವ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್, “ಸುಪ್ರೀಂ ಕೋರ್ಟ್ ಮೇಲೆ ಅನ್ಯಾಯವಾಗಿ ದಾಳಿ ಮಾಡುವವರು ಶಿಕ್ಷೆಗೆ ಆಹ್ವಾನ ನೀಡುತ್ತಿದ್ದಾರೆ ಎಂದು ಜನರು ಅರ್ಥಮಾಡಿಕೊಳ್ಳುವ ಸಮಯ” ಎಂದಿದ್ದಾರೆ.
Attorney General KK Venugopal grants consent for initiating criminal contempt against stand up comedian Kunal Kamra (in file photo), for his alleged derogatory tweets against a Supreme Court judge. pic.twitter.com/KNLNEp2Nhw
— ANI (@ANI) November 12, 2020
ಇದನ್ನೂ ಓದಿ: ವಾಕ್ ಸ್ವಾತಂತ್ರ್ಯ ಹತ್ತಿಕ್ಕಲು ನ್ಯಾಯಾಂಗ ನಿಂದನೆ ಕಾನೂನಿನ ದುರುಪಯೋಗ: ಪ್ರಶಾಂತ್ ಭೂಷಣ್
ನ್ಯಾಯಾಂಗ ನಿಂದನೆ ಕಾಯ್ದೆ 1975ರ ಸೆಕ್ಷನ್ 15ರ ರೂಲ್ 3ರ ಅಡಿಯಲ್ಲಿ ಕುನಾಲ್ ಕಮ್ರಾ ವಿರುದ್ದ, ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂದು ವಕೀಲ ರಿಜ್ವಾನ್ ಸಿದ್ದೀಖ್ ಮನವಿ ಮಾಡಿದ್ದರು.
ಟ್ವಿಟ್ಟರ್‌ನಲ್ಲಿ 17 ಲಕ್ಷ ಫಾಲೋವರ್ಸ್ ಹೊಂದಿರುವ ಕುನಾಲ್ ಕಮ್ರ ರವರು ಸುಪ್ರೀಂ ಕೋರ್ಟಿನ ಅವರಹೇಳನ ಮಾಡುವ ನಾಲ್ಕು ಟ್ವೀಟ್ ಮಾಡಿದ್ದಾರೆ. ಅವರನ್ನು ಶಿಕ್ಷಿಸದಿದ್ದರೆ ಅವರ ಫಾಲೋವರ್ಸ್ ಕೂಡ ಸುಪ್ರೀಂ ಕೋರ್ಟಿಗೆ ಬೆಲೆ ನೀಡುವುದಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಆತ್ಮಹತ್ಯಾ ಪ್ರಕರಣದಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೊಳಗಾಗಿರುವ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಗೆ ಸುಪ್ರೀಂ ಕೋರ್ಟ್ ನೀಡಿದ್ದ ಜಾಮೀನನ್ನು ಟೀಕಿಸಿದ್ದ, ಕುನಾಲ್ “ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಪ್ರಥಮ ದರ್ಜೆ ಪ್ರಯಾಣಿಕರಿಗೆ ಶೀಘ್ರವಾಗಿ ಶಾಂಪೇನ್ ಸೇವೆ ಸಲ್ಲಿಸುತ್ತಿರುವ ಫ್ಲೈಟ್ ಅಟೆಂಡೆರ್‌ನಂತೆ ಆಗಿದ್ದಾರೆ. ಆದರೆ ಸಾಮಾನ್ಯರು ಹತ್ತುತ್ತಿದ್ದಾರೆಯೇ ಅಥವಾ ಕುಳಿತುಕೊಳ್ಳುತ್ತಾರೆಯೇ ಎಂದು ಅವರು ಯೋಚಿಸುತ್ತಿಲ್ಲ” ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: CJI ಬೋಬ್ಡೆ ಹೆಲಿಕಾಪ್ಟರ್ ಕುರಿತು ಟ್ವೀಟ್: ಪ್ರಶಾಂತ್ ಭೂಷಣ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಮನವಿ

ಅಷ್ಟೇ ಅಲ್ಲದೆ, ಈ ದೇಶದ ಸುಪ್ರೀಂ ಕೋರ್ಟ್ ಈ ದೇಶದ ಅತ್ಯಂತ ಸುಪ್ರೀಂ ಜೋಕ್ ಆಗಿದೆ ಎಂದು ಕೂಡಾ ಹೇಳಿದ್ದ ಅವರು, “ರಾಷ್ಟ್ರೀಯ ಹಿತಾಸಕ್ತಿ” ವಿಷಯಗಳಲ್ಲಿ ಸುಪ್ರೀಂ ಕೋರ್ಟ್ ಕಾರ್ಯನಿರ್ವಹಿಸುವ ವೇಗವನ್ನು ನೋಡಿದರೆ, ನಾವು ಮಹಾತ್ಮ ಗಾಂಧಿಯವರ ಫೋಟೋ ಬದಲಿಗೆ ಹರೀಶ್ ಸಾಲ್ವೆ ಅವರ ಫೋಟೋ ಹಾಕಬೇಕಾದ ಸಮಯ ಬಂದಿದೆ” ಎಂದು ಅವರು ಹೇಳಿದರು.

Contempt of court it seems ??? pic.twitter.com/QOJ7fE11Fy
— Kunal Kamra (@kunalkamra88) November 11, 2020
ಇದನ್ನೂ ಓದಿ: ಪ್ರಶಾಂತ್ ಭೂಷಣ್‌ರ ನ್ಯಾಯಾಂಗ ನಿಂದನೆ ಪ್ರಕರಣದೆಡೆಗೆ ನನಗೇಕೆ ಕುತೂಹಲವೆಂದರೆ..; ಯೋಗೇಂದ್ರ ಯಾದವ್


