ಕೇರಳ ಬಿಜೆಪಿಯಲ್ಲಿ ಭಿನ್ನಮತ: ರಾಜ್ಯಾಧ್ಯಕ್ಷರಿಗೆ ನೋಟಿಸ್ ನೀಡಿದ ಬಿಜೆಪಿ ಹೈಕಮಾಂಡ್!

ಕೇರಳ ಬಿಜೆಪಿ ಘಟಕದಲ್ಲಿ ಉಂಟಾಗಿರುವ ಭಿನ್ನಮತಕ್ಕೆ ಸಂಬಂಧಿಸಿದಂತೆ ರಾಜ್ಯ ಘಟಕದ ಅಧ್ಯಕ್ಷರಾದ ಕೆ.ಸುರೇಂದ್ರನ್ ಅವರನ್ನು ಬಿಜೆಪಿ ಹೈಕಮಾಂಡ್ ಕರೆಸಿಕೊಂಡು ಎಚ್ಚರಿಕೆ ನೀಡಿದ್ದರಿಂದ, ಶೋಭಾ ಸೇರಿದಂತೆ ಇನ್ನಿತರ ಭಿನ್ನಮತೀಯ ನಾಯಕರನ್ನು ಸುರೇಂದ್ರನ್ ಸಂಪರ್ಕಿಸಿ ಸಮಾಧಾನಪಡಿಸಿದ್ದಾರೆ.

ಶೋಭಾ ಅವರು ಪಕ್ಷದ ಹಿರಿಯ ನಾಯಕಿಯಾಗಿದ್ದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮಾತ್ರವಲ್ಲದೆ ವಿಧಾನಸಭಾ ಚುನಾವಣೆಯಲ್ಲೂ ಎನ್‌ಡಿಎಯನ್ನು ಮುನ್ನಡೆಸಲು ಅವರು ಮುಂಚೂಣಿಯಲ್ಲಿದ್ದರು ಎಂದು ಸುರೇಂದ್ರನ್ ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದರು.

ಬಿಜೆಪಿ ರಾಜ್ಯ ಅಧ್ಯಕ್ಷರು ಭಿನ್ನಾಭಿಪ್ರಾಯದ ಬಗ್ಗೆ ವರದಿಗಳಿಗೆ ಮಾಧ್ಯಮಗಳೇ ಕಾರಣ ಎಂದು ದೂಷಿಸಿದ ಸುರೇಂದ್ರನ್, ಶೋಭಾ ಅವರನ್ನು ಕೇಸರಿ ಪಕ್ಷದ ಪ್ರಬಲ ಮಹಿಳಾ ನಾಯಕರಲ್ಲಿ ಒಬ್ಬರು ಎಂದು ಉಲ್ಲೇಖಿಸಿದ್ದಾರೆ. “ನಾವು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, ಪರಸ್ಪರ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಸಹಜ. ಆದರೆ ಪಕ್ಷದ ಹುದ್ದೆಗಳಿಗೆ ಭಿನ್ನಾಭಿಪ್ರಾಯವಿದೆ ಎಂಬುದು ನಿಜವಲ್ಲ” ಎಂದು ಅವರು ಹೇಳಿದರು.

ಇದನ್ನೂ ಓದಿ: ದೇವಾಲಯ ತೆರೆಯುತ್ತಿದ್ದಂತೆ ರಾಜಕೀಯ ಲಾಭಕ್ಕೆ ಮುಂದಾದ ಕೇರಳ ಬಿಜೆಪಿಯ ದ್ವಂದ್ವ

ಈ ಕುರಿತು ಬಿಜೆಪಿ ಹೈಕಮಾಂಡ್ ಸುರೇಂದ್ರನ್ ಅವರನ್ನು ಕರೆಸಿಕೊಂಡು, ರಾಜ್ಯದಲ್ಲಿ ಪಕ್ಷವನ್ನು ವ್ಯವಸ್ಥಿತವಾಗಿ ನೊಡಿಕೊಂಡು, ಎಲ್ಲಾ ನಾಯಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಕೆಲಸ ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಹೇಳಿತ್ತು.

ವಿ ಮುರಾಳೀಧರನ್ ಬಣದೊಂದಿಗೆ ಗುರುತಿಸಲಾಗದ ಕೆಲವು ನಾಯಕರನ್ನು ಸುರೇಂದ್ರನ್ ನಿರ್ಲಕ್ಷಿಸುತ್ತಿದ್ದಾರೆ ಎಂದು ಶೋಭಾ ನೇತೃತ್ವದ ಹಲವಾರು ಭಿನ್ನಮತೀಯ ನಾಯಕರು ಕೇಂದ್ರ ನಾಯಕತ್ವಕ್ಕೆ ಮನವಿ ಕಳುಹಿಸಿದ್ದರು.

ಇದನ್ನೂ ಓದಿ: ಬಿಜೆಪಿ ನಾಯಕರ ದ್ವಿನೀತಿ: ಬಂಧನದಲ್ಲಿರುವ ಕೇರಳ ಮೂಲದ ಪತ್ರಕರ್ತನ ಪತ್ನಿ ಆಕ್ರೋಶ

ಶೋಭಾ ಅವರಲ್ಲದೆ, ಹಿರಿಯ ನಾಯಕರಾದ ಪಿ.ಎಂ.ವೇಲಾಯುಧನ್ ಮತ್ತು ಕೆ.ಪಿ.ಶ್ರೀಶನ್ ಅವರು ಸುರೇಂದ್ರನ್ ಅವರ ಕಾರ್ಯವೈಖರಿಯ ವಿರುದ್ಧ ಸಾರ್ವಜನಿಕವಾಗಿ ಪ್ರಚಾರ ಮಾಡಿದ್ದರು. ಬುಧವಾರ ಭಿನ್ನಮತೀಯ ನಾಯಕರು ಎರಡು ಬಾರಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಪಿ.ಎಸ್.ಶ್ರೀಧರನ್ ಪಿಳ್ಳೈ ಅವರನ್ನು ಭೇಟಿ ಮಾಡಿ ತಮ್ಮ ಕುಂದು ಕೊರತೆಗಳನ್ನು ಹೇಳಿಕೊಂಡಿದ್ದರು.

ಬಿಜೆಪಿ ಕೇಂದ್ರ ನಾಯಕತ್ವದ ದೃಢವಾದ ನಿಲುವು ಮತ್ತು ನಂತರದ ನಾಗರಿಕ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷವು ದೊಡ್ಡ ಹಾನಿಯನ್ನು ಅನುಭವಿಸುವ ಸಾಧ್ಯತೆಯಿದ್ದುದರಿಂದ ಸುರೇಂದ್ರನ್ ಭಿನ್ನಮತೀಯರನ್ನು ತಲುಪಲು ಪ್ರೇರೇಪಿಸಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.


ಇದನ್ನೂ ಓದಿ: ನಿರೀಕ್ಷಿತ ಯಶಸ್ಸು ಗಳಿಸುವಲ್ಲಿ ವಿಫಲವಾದ ಪ.ಬಂಗಾಳದ ಬಿಜೆಪಿ ರ್‍ಯಾಲಿ!

LEAVE A REPLY

Please enter your comment!
Please enter your name here