ಮುಂದಿನ ವರ್ಷ ಪಶ್ಚಿಮ ಬಂಗಾಳದಲ್ಲಿ ವಿಧಾನ ಸಭಾ ಚುನಾವಣೆ ನಡೆಯಲಿದ್ದು ಬಿಜೆಪಿ ಈಗಾಗಲೆ ತಯಾರಿ ನಡೆಸುತ್ತಿದೆ. ಇದೀಗ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, “ಪಶ್ಚಿಮ ಬಂಗಾಳದ ಸ್ಥಿತಿ ಕಾಶ್ಮೀರಕ್ಕಿಂತ ಕೆಟ್ಟದ್ದಾಗಿದ್ದು, ಭಯೋತ್ಪಾದಕರ ಕೇಂದ್ರವಾಗಿ ಮಾರ್ಪಟ್ಟಿದ್ದೆ’’ ಎಂದು ವಿವಾದ ಸೃಷ್ಟಿಸಿದ್ದಾರೆ.
“ಇತ್ತೀಚೆಗೆ ಅಲ್-ಖೈದಾ ಸದಸ್ಯರನ್ನು ಪಶ್ಚಿಮ ಬಂಗಾಳದ ಕೂಚ್‌ಬೆಹರ್‌ನಲ್ಲಿ ಪತ್ತೆಹಚ್ಚಲಾಗಿದೆ. ಅವರ ಜಾಲ ಪಶ್ಚಿಮ ಬಂಗಾಳದಲ್ಲಿ ಬೆಳೆಯುತ್ತಿದೆ. ರಾಜ್ಯವು ಭಯೋತ್ಪಾದಕರ ಕೇಂದ್ರವಾಗಿ ಮಾರ್ಪಟ್ಟಿದೆ. ಇಲ್ಲಿನ ಪರಿಸ್ಥಿತಿ ಕಾಶ್ಮೀರಕ್ಕಿಂತ ಕೆಟ್ಟದ್ದಾಗಿದೆ’ ಎಂದು ದಿಲೀಪ್ ಘೋಷ್ ಹೇಳಿರುವುದಾಗಿ ಎಎನ್‌ಐ ಟ್ವೀಟ್ ಮಾಡಿದೆ.
ಇದನ್ನೂ ಓದಿ: ರೈಲುಗಳಲ್ಲಿ ವಲಸೆ ಕಾರ್ಮಿಕರ ಸಾವು ಸಣ್ಣ ಘಟನೆ: ಬಂಗಾಳ BJP ಅಧ್ಯಕ್ಷ ದಿಲೀಪ್ ಘೋಷ್
Al-Qaeda members have been identified in Coochbehar recently, their network has grown in the West Bengal. The state has become a hub of terrorists, condition here is worse than Kashmir: Dilip Ghosh, state BJP chief pic.twitter.com/JfLp1ZblKR
— ANI (@ANI) November 15, 2020
ವಿವಾದಾತ್ಮಕ ಹೇಳಿಕೆಗೆ ದಿಲೀಪ್ ಘೋಷ್ ಹೆಸರುವಾಸಿಯಾಗಿದ್ದು, ಪಶ್ಚಿಮ ಬಂಗಾಳ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಮತ್ತು ಕ್ರಮೇಣ ಇದು ಉತ್ತರ ಪ್ರದೇಶ ಮತ್ತು ಬಿಹಾರದಂತಹ ಮಾಫಿಯಾ ಆಡಳಿತದ ರಾಜ್ಯವಾಗುತ್ತಿದೆ ಎಂದು ವಿಪಕ್ಷಗಳಿಂದ ಭಾರಿ ಹಾಸ್ಯಕ್ಕೊಳಗಾಗಿದ್ದರು.
ಇದನ್ನೂ ಓದಿ: ಮಾಫಿಯಾ ರಾಜ್ ಹೇಳಿಕೆ: ಟ್ವಿಟ್ಟರ್‌ನಲ್ಲಿ ಟ್ರೋಲ್ ಆದ ಬಿಜೆಪಿಯ ದಿಲೀಪ್ ಘೋಷ್


