Homeಅಂತರಾಷ್ಟ್ರೀಯಕೊರೊನಾ: ಸೋಂಕಿತರನ್ನು ಗುಣಪಡಿಸುವಲ್ಲಿ ಫಿಜರ್ ಲಸಿಕೆ ಶೇಕಡ 95 ರಷ್ಟು ಪರಿಣಾಮಕಾರಿ!

ಕೊರೊನಾ: ಸೋಂಕಿತರನ್ನು ಗುಣಪಡಿಸುವಲ್ಲಿ ಫಿಜರ್ ಲಸಿಕೆ ಶೇಕಡ 95 ರಷ್ಟು ಪರಿಣಾಮಕಾರಿ!

- Advertisement -
- Advertisement -

ಕೊರೊನಾ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿರುವ ಫಿಜರ್ ಮತ್ತು ಜರ್ಮನ್‌ನ ಬಯೋನ್‌ಟೆಕ್ ಸಂಸ್ಥೆಯು ತನ್ನ 2 ನೆ ಹಂತದ ಪ್ರಯೋಗಕ್ಕೆ ಸಂಬಂಧಿಸಿದಂತೆ ಫಲಿತಾಂಶಗಳನ್ನು ಬಿಡುಗಡೆ ಮಾಡಿದ್ದು, ಸೋಂಕಿಗೆ ಒಳಗಾದ ವೃದ್ಧರು ಮತ್ತು ದೈಹಿಕವಾಗಿ ದುರ್ಬಲಾಗಿರುವವರನ್ನು ರಕ್ಷಿಸುವಲ್ಲಿ ಈ ಲಸಿಕೆ ಶೇ 95 ರಷ್ಟು ಪರಿಣಾಮಕಾರಿ ಎಂದು ತಿಳಿಸಿದೆ.

ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ, ಈ ಲಸಿಕೆಯು ಶೇಕಡ 95 ರಷ್ಟು ಪರಿಣಾಮಕಾರಿ ಎಂದು ತಿಳಿದುಬಂದಿದ್ದು, ಸೋಂಕು ದೃಢಪಟ್ಟಿದ್ದ 170 ಜನರನ್ನು ಈ ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಈ ಪೈಕಿ 162 ಜನರನ್ನು ಈ ಲಸಿಕೆ ಗುಣಪಡಿಸಿದೆ. 8 ಜನರು ಇದಕ್ಕೆ ವಿರುದ್ಧವಾದ ಫಲಿತಾಂಶಗಳನ್ನು ದಾಖಲಿಸಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ರೋಗನಿರೋಧಕ ಪ್ರತಿಕ್ರಿಯೆಯನ್ನು ಹೆಚ್ಚಿಸಿದ ನೊವಾವಾಕ್ಸ್ ಕೊರೊನಾ ಲಸಿಕೆ

ನವೆಂಬರ್ 9 ರಂದು ಫಿಜರ್ ತನ್ನ ಲಸಿಕೆ ಶೇಕಡಾ 90 ರಷ್ಟು ಪರಿಣಾಮಕಾರಿಯಾಗಿದೆ ಎಂದು ಘೋಷಿಸಿತ್ತು. ಇದಾದ ಒಂದು ವಾರದ ನಂತರ ಈ ಪ್ರಕಟಣೆ ಬಂದಿದೆ.

ಕಂಪನಿಯು 170 ಸೋಂಕಿತರನ್ನು ಪ್ರಯೋಗಕ್ಕೆ ಒಳಪಡಿಸಿದ್ದು, ಈ ಫಲಿತಾಂಶವು ಇದಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಆಧರಿಸಿದೆ.

ಕೊರೊನಾ ರೋಗಕ್ಕೆ ಅಧಿಕೃತ ಲಸಿಕೆಯಿಲ್ಲದೇ ಇಡೀ ಜಗತ್ತೇ ತತ್ತರಿಸುತ್ತಿದೆ. ಈ ಸಂದರ್ಭದಲ್ಲಿ ಫಿಜರ್‌ನ ಈ ಪ್ರಕಟಣೆಯು ಅತ್ಯಂತ ಮಹತ್ವದ್ದೆನಿಸಿದೆ.

ವಿಶ್ವದಾದ್ಯಂತ ನೂರಾರು ದೇಶಗಳು ಕೊರೊನಾ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಕಾರ್ಯನಿರತವಾಗಿವೆ.


ಇದನ್ನೂ ಓದಿ: 2021 ರ ಆರಂಭದಲ್ಲಿ ಕೊರೊನಾ ಲಸಿಕೆ ಲಭ್ಯ: ಕೇಂದ್ರ ಆರೋಗ್ಯ ಸಚಿವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಧಾರವಾಡ ಅಖಾಡ: ಕೇಸರಿ ಕೋಟೆಯಲ್ಲೇ ಸಂಘೀ ಸೇನಾಧಿಪತಿ ಪ್ರಹ್ಲಾದ್ ಜೋಶಿಗೆ ನಡುಕ!!

0
ಪೇಡಾ ನಗರಿ, ಸಾಂಸ್ಕೃತಿಕ ರಾಜಧಾನಿ, ಕರ್ನಾಟಕದ ಆಕ್ಸ್‌ಫರ್ಡ್ ಎಂದೆಲ್ಲ ಗುರುತಿಸಲ್ಪಡುವ ಧಾರವಾಡ ನಗರ ಕೇಂದ್ರವಾಗಿರುವ ಧಾರವಾಡ ಲೋಕಸಭಾ ಕ್ಷೇತ್ರ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡುಗಳ ವಿಭಿನ್ನ ನೈಸರ್ಗಿಕ ಗುಣ-ಧರ್ಮದ ಸೀಮೆ. ಖಡಕ್ ಜವಾರಿ...