Homeಮುಖಪುಟಆಕ್ಟ್-1978: ಘನತೆ ಮತ್ತು ನ್ಯಾಯಕ್ಕಾಗಿ ಸಿಡಿದೇಳಿ ಎನ್ನುವ ಸಿನಿಮಾ

ಆಕ್ಟ್-1978: ಘನತೆ ಮತ್ತು ನ್ಯಾಯಕ್ಕಾಗಿ ಸಿಡಿದೇಳಿ ಎನ್ನುವ ಸಿನಿಮಾ

ಭ್ರಷ್ಟ ವ್ಯವಸ್ಥೆಯಿಂದ ನೊಂದ ಹೆಣ್ಣುಮಗಳೊಬ್ಬಳು ತನಗೆ ತಿಳಿದ ದಾರಿಯಲ್ಲಿ ಸಿಡಿದೇಳುವ ಸಣ್ಣ ಕಥಾ ಎಳೆಯಿಟ್ಟುಕೊಂಡು ಒಂದು ಜನಪ್ರಿಯ ಸಿನಿಮಾ ಮಾಡಬಹುದು ಎನ್ನುವುದನ್ನು ಆಕ್ಟ್-1978 ಚಿತ್ರತಂಡ ತೋರಿಸಿಕೊಟ್ಟಿದೆ.

- Advertisement -
- Advertisement -

‘ಬಡವನ ಸಿಟ್ಟು ದವಡೆಗೆ ಮೂಲ’, ‘ಬಡವ ನೀನ್ ಮಡಗಿದಂಗೆ ಇರು’ ಎನ್ನುವ ಗಾದೆಗಳು ಜನಸಾಮಾನ್ಯರ ನಡುವೆ ಜನಪ್ರಿಯವಾಗಿವೆ. ವ್ಯವಸ್ಥೆಯ ಬಗ್ಗೆ ಜನರ ಆಕ್ರೋಶ ವ್ಯಕ್ತಪಡಿಸಲು, ಹೋರಾಟ ನಡೆಸಲು ಬಿಡದ ವಿದ್ಯಮಾನವನ್ನು ಈ ಗಾದೆಗಳು ಪ್ರತಿನಿಧಿಸಿದರೂ, ‘ಬಡವರ ಸಿಟ್ಟು ರಟ್ಟೆಗೆ ಬಂದ್ರೆ ಸರ್ಕಾರಗಳು ಪೀಸ್, ಪೀಸ್’ ಎಂಬ ಹೋರಾಟದ ಸ್ಲೋಗನ್ ಕೂಡ ಒಂದು ಮಟ್ಟಕ್ಕೆ ಜನಪ್ರಿಯವೇ. ಸಿನಿಮಾವೊಂದು ಈ ಸ್ಲೋಗನ್‌ ಅನ್ನು ಪ್ರತಿನಿಧಿಸಬಹುದೇ? ಜನಸಾಮಾನ್ಯರು, ಬಡವರು ತಮ್ಮ ಅನ್ಯಾಯಗಳ ವಿರುದ್ಧ ಸಿಡಿದೆದ್ದರೆ ಏನಾಗಬಹುದು? ಅಂತಹ ಶೋಧನೆಯ ಚಿತ್ರ ಆಕ್ಟ್-1978.

ಕೊರೊನಾ ಸಾಂಕ್ರಾಮಿಕದ ಕಾರಣಕ್ಕೆ ಹಲವು ತಿಂಗಳುಗಳ ಲಾಕ್ಡೌನ್ ನಂತರ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ ಹೊಸ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಯೊಂದಿಗೆ ಇಂದು ಬಿಡುಗಡೆಯಾಗಿರುವ ಆಕ್ಟ್-1978 ಚಿತ್ರ ಹಲವು ಕಾರಣಗಳಿಗಾಗಿ ಗಮನ ಸೆಳೆಯುತ್ತದೆ. ಭ್ರಷ್ಟ ವ್ಯವಸ್ಥೆಯಿಂದ ನೊಂದ ಹೆಣ್ಣುಮಗಳೊಬ್ಬಳು ತನಗೆ ತಿಳಿದ ದಾರಿಯಲ್ಲಿ ಸಿಡಿದೇಳುವ ಸಣ್ಣ ಕಥಾ ಎಳೆಯಿಟ್ಟುಕೊಂಡು ಒಂದು ಜನಪ್ರಿಯ ಸಿನಿಮಾ ಮಾಡಬಹುದು ಎನ್ನುವುದನ್ನು ಆಕ್ಟ್-1978 ಚಿತ್ರತಂಡ ತೋರಿಸಿಕೊಟ್ಟಿದೆ.

ನಮ್ಮ ವ್ಯವಸ್ಥೆಯಲ್ಲಿ ನೂರಾರು ಸಮಸ್ಯೆಗಳಿವೆ. ಬಡತನ, ಜಾತಿಪದ್ದತಿ, ಪ್ರಾದೇಶಿಕ ಅಸಮಾನತೆ, ಧಾರ್ಮಿಕ ತಾರತಮ್ಯ, ಭ್ರಷ್ಟಾಚಾರ, ಖಾಸಗೀಕರಣ, ರೈತ-ಕಾರ್ಮಿಕರ ಬೆವರಿನ ಲೂಟಿ, ನಾಡು ನುಡಿಯ ಅವಹೇಳನ ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ. ಈ ಸಮಸ್ಯೆಗಳ ನಡುವೆ ನೊಂದ ರೈತನ ಹಿನ್ನೆಲೆಯಲ್ಲಿ ಭ್ರಷ್ಟಾಚಾರದ ದುಷ್ಪರಿಣಾಮಗಳ ಮೇಲೆ ಈ ಸಿನಿಮಾ ಬೆಳಕು ಚೆಲ್ಲುತ್ತದೆ.

ಒಂದು ಕಡೆ ಬೆಳೆದ ಬೆಳೆಗೆ ಬೆಲೆ ಸಿಗದೇ ತಮ್ಮ ಕುಟುಂಬಕ್ಕಾದರೂ ಪರಿಹಾರ ಸಿಗಲಿ ಎಂದು ತೆಂಗಿನ ಮರದಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ತಂದೆ. ಇನ್ನೊಂದು ಕಡೆ ಸರ್ಕಾರಿ ವ್ಯವಸ್ಥೆಯ ನಿರ್ಲಕ್ಷ್ಯದಿಂದಾಗಿ ರಸ್ತೆ ಅಪಘಾತದಲ್ಲಿ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿರುವ ಗಂಡ. ಈ ನಡುವೆ ತನಗೆ ನ್ಯಾಯಯುತವಾಗಿ ಸಿಗಬೇಕಾದ ಪರಿಹಾರ ಹಣಕ್ಕಾಗಿ ಕಚೇರಿಗಳಿಂದ ಕಚೇರಿಗಳಿಗೆ ಅಲೆಯುತ್ತಿರುವ ತುಂಬು ಗರ್ಭಿಣಿ ಕಥಾನಾಯಕಿ. ಯಾವುದೇ ಕಾರಣಕ್ಕೂ ಲಂಚ ನೀಡಿ ಭ್ರಷ್ಟ ವ್ಯವಸ್ಥೆಯಲ್ಲಿ ಭಾಗಿಯಾಗುವುದಿಲ್ಲ ಎಂಬುವ ನೈತಿಕ ಸಿಟ್ಟು. ಇದರಿಂದ ಹತಾಶಳಾಗಿ, ತನ್ನದಲ್ಲದ ತಪ್ಪಿಗೆ 14 ವರ್ಷ ಜೈಲು ಶಿಕ್ಷೆ ಅನುಭವಿಸಿ ಮೌನಿಯಾಗಿರುವ ರೈತ ಮುದುಕನ ಜೊತೆ ಸೇರಿ, ಸರ್ಕಾರಕ್ಕೆ ಹೇಗೆ ತಲೆನೋವಾಗುತ್ತಾಳೆ ಎಂಬ ಕಥಾಹಂದರದ ಆಕ್ಟ್-1978, ಹೋಸ್ಟೇಜ್ ಡ್ರಾಮಾ ಸಿನೆಮಾಗಳಿಗೆ ಹೊಸ ಸೇರ್ಪಡೆಯಾಗಿದೆ.

ಈ ಸಿನಿಮಾ ನೋಡುವ ವೀಕ್ಷಕನಿಗೆ ಸರ್ಕಾರಿ ಕಚೇರಿಗಳಲ್ಲಿ ತಮಗಾದ ಕೆಟ್ಟ ಅನುಭವಗಳು ನೆನಪಿಗೆ ಬರಬಹುದು. ಆದರೆ ನಮ್ಮ ಜನರು ಅಸಾಮಾನ್ಯ ತಾಳ್ಮೆಯುಳ್ಳವರು. ಅದಕ್ಕೆ ಚಿತ್ರದಲ್ಲಿಯೂ ಒಂದು ಉದಾಹರಣೆಯಿದೆ. 22 ನೇ ವಯಸ್ಸಿಗೆ ಒಂದಷ್ಟು ಲಂಚ ಕೊಟ್ಟು ಅಡೆಂಡರ್ ಆಗಿ ಕೆಲಸಕ್ಕೆ ಸೇರುವ ಬೆಂಜಮಿನ್ ತನಗೆ 37 ವರ್ಷವಾದರೂ ಸಹ ತನ್ನ ಹುದ್ದೆ ಪರ್ಮನೆಂಟ್ ಆಗುತ್ತದೆ ಎಂಬ ಆಸೆಯಿಟ್ಟುಕೊಂಡು ಹಿರಿಯ ಅಧಿಕಾರಿಗೆ ತನಗೆ ಬರುವ ಸಂಬಳದಲ್ಲಿ 25% ಲಂಚ ಕೊಡುತ್ತಿರುತ್ತಾನೆ. ಆದರೆ ಕಥಾನಾಯಕಿ ವಿದ್ಯಾವಂತೆ ಗೀತಾ (ಯಜ್ಞಶೆಟ್ಟಿ) ಮಾತ್ರ ತಾನು ಎನ್ ಸಿ ಸಿಯಲ್ಲಿದ್ದಾಗ ಪ್ರತಿಜ್ಞೆ ಮಾಡಿದಂತೆ ಲಂಚಕೊಡಲೊಲ್ಲಳು, ಮಾತ್ರವಲ್ಲ ಅದೇ ಆದರ್ಶಗಳನ್ನು ಉಳಿಸಿಕೊಂಡು ಬಂದಿರುವವಳು. ತನಗಾದ ನೋವು ಮತ್ತು ಅನ್ಯಾಯಕ್ಕೆ ನ್ಯಾಯ ಪಡೆಯಲು ತೀವ್ರ ಹೆಜ್ಜೆ ಇಟ್ಟು, ಬಾಂಬ್ ಕಟ್ಟಿಕೊಂಡು, ಬಂದೂಕು ಹಿಡಿದು, ತನಗೆ ಅನ್ಯಾಯ ಮಾಡಿದ ಸರ್ಕಾರಿ ನೌಕರರನ್ನು ಒತ್ತೆಯಾಳುಗಳನ್ನಾಗಿರಿಸಿಕೊಂಡು ವ್ಯವಸ್ಥೆಯೊಂದಿಗೆ ಸಂಪರ್ಕ ಸಾಧಿಸಿ ಜಡಗಟ್ಟಿದ ವ್ಯವಸ್ಥೆಗೆ ಚುರುಕು ಮುಟ್ಟಿಸಬಲ್ಲಳು.

ಹತಾಶಗೊಂಡ ಜನ ಯಾವ ಮಟ್ಟಕ್ಕೂ ಹೋಗಬಲ್ಲರು ಎಂಬುದನ್ನು ಸಿನಿಮಾ ಸೂಚ್ಯವಾಗಿ ಹೇಳುತ್ತದೆ. ಹಾಗೆಯೇ ಪ್ರತಿಯೊಬ್ಬರೂ (ಲಂಚ ಕೊಡುವವರು, ಪಡೆಯುವವರು) ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂಬುದು ಚಿತ್ರತಂಡದ ಅಭಿಲಾಷೆ. ಸಾಮಾನ್ಯ ಜನರ ನೋವನ್ನು, ಆಕ್ರೋಶವನ್ನು ಹಿರಿತೆರೆಮೇಲೆ ತರುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ ಎಂದೇ ಹೇಳಬಹುದು. ಕೊನೆಯವರೆಗೂ ಕುತೂಹಲ ಕಾಯ್ದುಕೊಳ್ಳುವ ಚಿತ್ರದ ಮೊದಲಾರ್ಧದಲ್ಲಿ ಕಚಗುಳಿ ಇಡುವ ಹಾಸ್ಯ ಕೂಡ ಮುದ ನೀಡುತ್ತವೆ. ಗಾಂಧಿ ವೇಷಧಾರಿಯ ಪ್ರತಿಭಟನೆಯನ್ನು ಸಮಾಜ ನಿರ್ಲಕ್ಷಿಸುವುದು, ಮಾಧ್ಯಮಗಳು ಬಾಯಿಗೆ ಬಂದಂತೆ ಸಂದರ್ಭವನ್ನು ತಿರುಚುವುದು ಇವೆಲ್ಲವೂ ಚಿತ್ರದಲ್ಲಿ ಸೂಚ್ಯವಾಗಿ ಅಡಕಗೊಂಡಿದೆ.

ಹರಿವು ಮತ್ತು ನಾತಿಚರಾಮಿ ಚಿತ್ರಗಳ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಮಂಸೋರೆ ತಾನೊಬ್ಬ ಸಮರ್ಥ ಕಮರ್ಷಿಯಲ್ ಸಿನಿಮಾ ನಿರ್ದೇಶಕನೂ ಹೌದು ಎಂಬುದನ್ನು ಆಕ್ಟ್ 1978 ಚಿತ್ರದ ಮೂಲಕ ತೋರಿಸಿಕೊಟ್ಟಿದ್ದಾರೆ. ಬೆಲ್ ಬಾಟಂ ಚಿತ್ರಕಥೆ ಮೂಲಕ ಮನೆಮಾತಾಗಿರುವ ಯುವ ಬರಹಗಾರ ದಯಾನಂದ್ ಟಿ.ಕೆ ಮತ್ತು ವೀರು ಮಲ್ಲಣರವರ ಚಿತ್ರಕಥೆ ಮತ್ತು ಸಂಭಾಷಣೆ ಚಿತ್ರಕ್ಕೆ ಜೀವತುಂಬಿದೆ. ‘I Need Respect’ ಎನ್ನುವ ಡೈಲಾಗ್ ಚಿತ್ರದ ಧ್ಯೇಯವಾಕ್ಯವೂ ಅನಿಸುತ್ತದೆ. ಯಜ್ಞಶೆಟ್ಟಿ, ಬಿ.ಸುರೇಶ್, ಪ್ರಮೋದ್ ಶೆಟ್ಟಿ, ಅಚ್ಯುತ್ ರವರ ಅಭಿನಯ ಗಮನಸೆಳೆಯುತ್ತದೆ.

ಚಿತ್ರ ದ್ವಿತಿಯಾರ್ಧದಲ್ಲಿ ಸ್ವಲ್ಪ ಎಳೆದಂತೆ ಭಾಸವಾಗುತ್ತದೆ. ಭ್ರಷ್ಟಾಚಾರ ಕೇವಲ ಸರ್ಕಾರಿ ಕಚೇರಿಗಳಲ್ಲಿ ಮಾತ್ರವಿದೆ ಎಂಬ ಸರಳ ನಿರೂಪಣೆ, ಇಡೀ ಆಡಳಿತ ವ್ಯವಸ್ಥೆಯನ್ನು ಅದಕ್ಕೆ ಲಿಂಕ್ ಮಾಡಲು ಸಾಧ್ಯವಾಗದಿರುವುದು, ಕಾರ್ಪೋರೆಟ್ ಸಂಸ್ಥೆಗಳು ಈ ಭ್ರಷ್ಟಾಚಾರಕ್ಕೆ ಕಾರಣವಾಗಿರುವ ಅಂಶವನ್ನು ನಿಭಾಯಿಸಲು ಸಾಧ್ಯವಾಗದಿರುವುದು, ಭಾರತದಂತಹ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲ್ ಸ್ತರದ ಹುದ್ದೆಗಳಲ್ಲಿ ಇರುವ ಜಾತಿ ತಾರತಮ್ಯ ಮತ್ತು ಅದು ಸೃಷ್ಟಿಸಿರುವ ತೀವ್ರ ಭ್ರಷ್ಟಾಚಾರ ಇವುಗಳ ಬಗ್ಗೆ ಅಷ್ಟು ಎಚ್ಚರ ವಹಿಸದೆ ಹೋಗಿರುವುದು ಇಂತಹ ಸಂಗತಿಗಳು ಕಥಾಹಂದರವನ್ನು ತೆಳುವಾಗಿಸಿ ಇನ್ನಷ್ಟು ಪರಿಣಾಮಕಾರಿಯಾಗುವ ಅವಕಾಶವನ್ನು ಈ ಚನಲಚಿತ್ರ ಕೈಚೆಲ್ಲಿದೆ ಅನ್ನಿಸದೆ ಇರದು.

ಈ ಎಲ್ಲವನ್ನು ಒಂದೇ ಚಿತ್ರದಲ್ಲಿ ತರಲು ಸಾಧ್ಯವಿಲ್ಲ ಎನ್ನುವ ಅರಿವಿರುತ್ತಲೇ, ಇದರಲ್ಲಿ ಕೆಲವಾದರೂ ಸೇರಿದರೆ ಚಿತ್ರ ಮತ್ತಷ್ಟು ಸಮಗ್ರವಾಗುತ್ತಿತ್ತು. ಒಟ್ಟಿನಲ್ಲಿ ಜನಮುಖಿ ಕಥಾಹಂದರವುಳ್ಳ ಚಿತ್ರವೊಂದನ್ನು ಕಮರ್ಷಿಯಲ್ ಆಯಾಮದಲ್ಲಿ ತರಲು, ಲಾಕ್‌ಡೌನ್ ನಂತರ ಪ್ರೇಕ್ಷಕರಿಗೆ ಉತ್ತಮ ಕನ್ನಡ ಚಿತ್ರ ನೀಡಲು ಚಿತ್ರತಂಡ ಯಶಸ್ವಿಯಾಗಿದೆ.


ಇದನ್ನೂ ಓದಿ: ’ಆಕ್ಟ್-1978’ ಚಿತ್ರ: ಸಾಮಾಜಿಕ ಜಾಗೃತಿ ಮೂಡಿಸುವ ಪೋಸ್ಟರ್‌ಗಳು ವೈರಲ್‌‌!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...