Homeಮುಖಪುಟವಾಯುಮಾಲಿನ್ಯ ಉಲ್ಬಣ: ದೆಹಲಿಯಿಂದ ಗೋವಾಗೆ ಸೋನಿಯಾ ಗಾಂಧಿ ಶಿಫ್ಟ್

ವಾಯುಮಾಲಿನ್ಯ ಉಲ್ಬಣ: ದೆಹಲಿಯಿಂದ ಗೋವಾಗೆ ಸೋನಿಯಾ ಗಾಂಧಿ ಶಿಫ್ಟ್

’ಸೋನಿಯಾ ಗಾಂಧಿ ಅವರಿಗೆ ಒಂದು ತಿಂಗಳಿನಿಂದ ದೀರ್ಘಕಾಲದ ಎದೆ ಸೋಂಕು ಇದ್ದು, ದೆಹಲಿಯ ಅಪಾಯಕಾರಿ ವಾಯುಮಾಲಿನ್ಯದಿಂದಾಗಿ ಆರೋಗ್ಯ ಸುಧಾರಿಸುತ್ತಿಲ್ಲ’

- Advertisement -
- Advertisement -

ಎದೆ ಸೋಂಕಿನಿಂದ ಬಳಲುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ದೆಹಲಿಯ ವಾಯುಮಾಲಿನ್ಯ ಮತ್ತು ಗಾಳಿಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರ ರಾಜಧಾನಿಯಿಂದ ಹೊರಹೋಗುವಂತೆ  ವೈದ್ಯರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ರಾಂತಿಗಾಗಿ ಸೋನಿಯಾ ಗಾಂಧಿ ಗೋವಾಗೆ ತೆರಳಿದ್ದಾರೆ.

ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸುಧಾರಿಸುವವರೆಗೆ ಸ್ವಲ್ಪ ಸಮಯದವರೆಗೆ ಬೆಚ್ಚಗಿನ ಸ್ಥಳಕ್ಕೆ ಸ್ಥಳಾಂತರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಕಾರ್ಯಕರ್ತರು ತಿಳಿಸಿದ್ದಾರೆ. ಈ ಹಿನ್ನೆಲೆ ಸೋನಿಯಾ ಗಾಂಧಿ ತಮ್ಮ ಪುತ್ರ ರಾಹುಲ್ ಗಾಂಧಿಯೊಂದಿಗೆ ಗೋವಾದ ಪಣಜಿಗೆ ಬಂದಿಳಿದಿದ್ದಾರೆ.

ಇದನ್ನೂ ಓದಿ: ಮೂರೇ ದಿನದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಹಾರದ ಶಿಕ್ಷಣ ಸಚಿವ!

ದಿವಂಗತ ಪ್ರಧಾನಿ ಇಂದಿರ ಗಾಂಧಿಯವರ 103 ನೇ ಜನ್ಮ ದಿನಾಚರಣೆಯಂದು ಗೌರವ ಸಲ್ಲಿಸಲು ಕೂಡ 73 ವರ್ಷದ ಸೋನಿಯಾ ಅವರು ಇಂದಿರಾ ಗಾಂಧಿ ಸ್ಮಾರಕದಲ್ಲಿ ಕೆಲ ನಿಮಿಷಗಳಷ್ಟೇ ಕಾಣಿಸಿಕೊಂಡಿದ್ದರು.

“ಸೋನಿಯಾ ಗಾಂಧಿ ಅವರಿಗೆ ಒಂದು ತಿಂಗಳಿನಿಂದ ದೀರ್ಘಕಾಲದ ಎದೆ ಸೋಂಕು ಇದೆ. ದೆಹಲಿಯಲ್ಲಿ ಅಪಾಯಕಾರಿ ವಾಯುಮಾಲಿನ್ಯದಿಂದಾಗಿ ಇದು ಸುಧಾರಿಸುತ್ತಿಲ್ಲ. ಭಾರೀ ವಾಯುಮಾಲಿನ್ಯ ಅವರ ಅಸ್ತಮಾ ಮತ್ತು ಎದೆ ಸೋಂಕನ್ನು ಉಲ್ಬಣಗೊಳಿಸಿದೆ. ಹಾಗಾಗಿ, ಗಾಳಿಯ ಗುಣಮಟ್ಟ ಸುಧಾರಿಸುವವರೆಗೆ ದೆಹಲಿಯಿಂದ ಹೊರಹೋಗುವಂತೆ ವೈದ್ಯರು ಸಲಹೆ ನೀಡಿದರು” ಎಂದು ಹೆಸರೇಳಲು ಇಚ್ಛಿಸದ ಕಾರ್ಯಕರ್ತರು ತಿಳಿಸಿದ್ದಾರೆ.

ಜುಲೈ 30 ರಂದು ಸೋನಿಯಾ ಗಾಂಧಿಯನ್ನು ದೆಹಲಿಯ ಶ್ರೀ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಕಳೆದ ಆಗಸ್ಟ್‌ನಲ್ಲಿ ಸೋನಿಯಾ ಗಾಂಧಿಯವರು ಆಸ್ಪತ್ರೆಯಿಂದ ಬಿಡುಗಡೆಯಾದಾಗಿನಿಂದ ನಿಯಮಿತವಾಗಿ ಔಷಧಗಳನ್ನು ಸೇವಿಸುತ್ತಿದ್ದರು. ದೆಹಲಿಯಲ್ಲಿ ಮಾಲಿನ್ಯ ಹೆಚ್ಚಾದ ಕಾರಣ ವೈದ್ಯರು ಕಳವಳ ವ್ಯಕ್ತಪಡಿಸಿದ್ದರು’ ಎಂದು ಪಕ್ಷದ ಮೂಲಗಳು ತಿಳಿಸಿವೆ.


ಇದನ್ನೂ ಓದಿ: ಕೊರೊನಾ: 500 ರಿಂದ 2 ಸಾವಿರಕ್ಕೆ ಮಾಸ್ಕ್ ದಂಡ ಹೆಚ್ಚಿಸಿದ ದೆಹಲಿ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...