ವಂಚನೆ ಮತ್ತು ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದನ್ನು ಟೀಕಿಸಿ ಟ್ವೀಟ್ ಮಾಡಿದಕ್ಕೆ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿರುವ ಸ್ಟ್ಯಾಂಡಪ್ ಕಾಮಿಡಿಯನ್ ಕುನಾಲ್ ಕಮ್ರ ವಿರುದ್ಧ ಮತ್ತೊಂದು ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅನುಮತಿ ನೀಡಿದ್ದಾರೆ.
ನವೆಂಬರ್ 18 ರಂದು ಕುನಾಲ್ ಕಮ್ರ ಫೋಟೊ ಒಂದನ್ನು ಟ್ವೀಟ್ ಮಾಡಿ, ‘ಎರಡು ಬೆರಳುಗಳಲ್ಲಿ ಒಂದು ಬೆರಳು ಭಾರತದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದ್ ಬೋಬ್ಡೆ ಅವರಿಗೆ. ಸರಿ ಇನ್ನು ಗೊಂದಲ ಮೂಡಿಸುವುದಿಲ್ಲ, ಅದು ನಡುಬೆರಳು’ ಎಂದು ಬರೆದಿದ್ದರು.
One of these 2 fingers is for CJI Arvind Bobde… ok let me not confuse you it’s the middle one
😂😂😂 pic.twitter.com/IhoYIP3Ebe— Kunal Kamra (@kunalkamra88) November 18, 2020
ಸುಪ್ರೀಂ ಕೋರ್ಟ್ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ)ಯನ್ನು ಗುರಿಯಾಗಿಸಿಕೊಂಡು ಕುನಾಲ್ ಕ್ರಮ “ಅಶ್ಲೀಲ” ಟ್ವೀಟ್ ಮ ಮಾಡಿದ್ದರು ಟ್ವಿಟ್ಟರ್ ಅದನ್ನು ಏಕೆ ಅಳಿಸಿಲ್ಲ ಎಂದು ಸಂಸದೀಯ ಸಮಿತಿಯು ಟ್ವಿಟ್ಟರ್ ಅನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ವಿಷಯದ ಬಗ್ಗೆ ಟ್ವಿಟ್ಟರ್ ಏಳು ದಿನಗಳಲ್ಲಿ ಉತ್ತರ ನೀಡಬೇಕು ಎಂದು ಸಂಸದೀಯ ಸಮಿತಿಯ ಅಧ್ಯಕ್ಷೆಯಾಗಿರುವ ಮೀನಾಕ್ಷಿ ಲೇಖಿ ಆಗ್ರಹಿಸಿದ್ದರು.
[Breaking] AG KK Venugopal Grants Consent To Initiate Contempt Proceedings Against @kunalkamra88 for his NEW TWEET saying
"One of these 2 fingers is for CJI Arvind Bobde… ok let me not confuse you it’s the middle one" pic.twitter.com/QsTS3CDQIr
— Live Law (@LiveLawIndia) November 20, 2020
ಈ ಟ್ವೀಟ್‌ಗಳ ವಿರುದ್ಧ ನ್ಯಾಯಾಂಗ ನಿಂದನೆ ಕಾಯ್ದೆ 1975ರ ಸೆಕ್ಷನ್ 15ರ ರೂಲ್ 3ರ ಅಡಿಯಲ್ಲಿ ಕುನಾಲ್ ಕಮ್ರಾ ವಿರುದ್ದ, ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕೆಂದು ಅಲಹಾಬಾದ್‌ನ ವಕೀಲ ಅರ್ಜುನ್ ಸಿಂಗ್ ಎಂಬುವವರು ಮನವಿ ಮಾಡಿದ್ದರು. ಅದಕ್ಕೆ ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅನುಮತಿ ನೀಡಿದ್ದಾರೆ.
ಇನ್ನು ಮೊದಲ ನ್ಯಾಯಾಂಗ ನಿಂದನೆ ಪ್ರಕರಣಗಳು ದಾಖಲಾದ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ್ದ ಕುನಾಲ್ ಕಮ್ರ ನಾನು ಕ್ಷಮೆ ಕೇಳುವುದಿಲ್ಲ, ದಂಡ ಕಟ್ಟುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಕ್ಷಮೆ ಕೇಳುವುದಿಲ್ಲ, ದಂಡ ಕಟ್ಟುವುದಿಲ್ಲ: ಕಾಮಿಡಿಯನ್ ಕುನಾಲ್ ಕಮ್ರ